ನೆನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗೆ ಚಾಲನೆ
ಮೈಸೂರು ಗ್ರಾಮಾಂತರ

ನೆನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗೆ ಚಾಲನೆ

April 24, 2021

ಹುಣಸೂರು, ಏ.23(ಕೆಕೆ)- ಹಲವು ವರ್ಷ ಗಳಿಂದ ನೆನೆಗುದಿಗೆ ಬಿದ್ದಿದ್ದ ತಾಲೂಕಿನ ಬಿಲ್ಲೇನಹೊಸಹಳ್ಳಿ-ನೇರಳ ಕುಪ್ಪೆ ಜಂಕ್ಷನ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹೆಚ್.ಪಿ.ಮಂಜುನಾಥ್ ಹಾಗೂ ಎಂಎಲ್‍ಸಿ ಎ.ಹೆಚ್. ವಿಶ್ವನಾಥ್ ಚಾಲನೆ ನೀಡಿದರು.

ಮಾತನಾಡಿದ ಶಾಸಕ ಹೆಚ್.ಪಿ. ಮಂಜುನಾಥ್, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂ ರಾಗಿದ್ದ ನೇರಳ ಕುಪ್ಪೆ ಜಂಕ್ಷನ್‍ನಿಂದ ಬಿಲ್ಲೇನಹೊಸಹಳ್ಳಿ ಹಾಡಿವರೆಗಿನ 3.5 ಕಿಮೀ ರಸ್ತೆಯನ್ನು 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸ ಲಾಗುತ್ತಿದೆ ಎಂದರು.

ಬಿಲ್ಲೇನಹೊಸಹಳ್ಳಿ ಹಾಡಿಯಿಂದ ಲಕ್ಷ್ಮಣತೀರ್ಥ ನದಿ ರಸ್ತೆಯ ಹೊಸಹಾಡಿ ವರೆಗೂ ರಸ್ತೆ ಡಾಂಬರೀಕರಣ ಗೊಳಿ ಸಲು ಹಾಗೂ ಇಲ್ಲಿಯ ಬಸವೇಶ್ವರ ದೇವಾ ಲಯ ಹಾಗೂ ತಾವರೆಕೆರೆ ರಸ್ತೆಯನ್ನು ಶಾಸಕರ ನಿಧಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೊಳಿಸ ಲಾಗುವುದು ಎಂದರು.

ಎಂಎಲ್‍ಸಿ ಎ.ಹೆಚ್.ವಿಶ್ವನಾಥ್ ಮಾತ ನಾಡಿ, ಆದಿವಾಸಿಗಳು ಹೆಚ್ಚು ವಾಸಿಸುವ ಈ ಭಾಗದಲ್ಲಿ ಬಹಳ ವರ್ಷಗಳ ನಂತರ ಅಭಿವೃದ್ಧಿಯಾಗಬೇಕೆಂಬ ಬೇಡಿಕೆ ಈಡೇ ರಿದೆ. ಜನತಂತ್ರ ವ್ಯವಸ್ಥೆ ಜನಪ್ರತಿನಿಧಿಗಳಿ ಗಲ್ಲ. ಜನರಿಗೋಸ್ಕರವೇ ಆಗಿದ್ದು, ಪ್ರತಿಯೊಬ್ಬ ಪ್ರತಿನಿಧಿಯು ಜನರಿಗೆ ಅಗತ್ಯ ವಾದ ರಸ್ತೆ, ನೀರು, ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದುದ್ದು ನಮ್ಮ ಕರ್ತ ವ್ಯವೇ ಹೊರತು ಇಲ್ಲಿ ಪಕ್ಷ, ವ್ಯಕ್ತಿ ಮುಖ್ಯ ವಲ್ಲ. ದೇವರಾಜ ಅರಸರ ಹೆಸರಿನ ಜಿಲ್ಲೆ ಯಾಗಿಸಲು ಜನಪ್ರತಿ ನಿಧಿಗಳು ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಕಂದಾಯ ಇಲಾಖೆಯದ್ದೇ ದೊಡ್ಡ ಸಮಸ್ಯೆ: ತಾಲೂಕಿನಲ್ಲಿ ರೈತರ ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳು ಬೆಟ್ಟದಷ್ಟಿವೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾಲೂ ಕಿನ 4 ಹೋಬಳಿಗೊಬ್ಬರಂತೆ ವಿಶೇಷ ತಹಸೀಲ್ದಾರ್, ಸರ್ವೇ ಸಹಾಯಕ ನಿರ್ದೇ ಶಕರನ್ನು ನೇಮಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದ್ದರೂ ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರು.
ಈ ವೇಳೆ ಜಿಪಂ ಸದಸ್ಯ ಕಟ್ಟನಾಯಕ, ಜಿಪಂ ಮಾಜಿ ಸದಸ್ಯ ನಾಗರಾಜ ಮಲ್ಲಾಡಿ, ಹುಡಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಎಪಿಎಂಸಿ ಅಧ್ಯಕ್ಷ ಸುಭಾಷ್, ನೇರಳಕುಪ್ಪೆ ಗ್ರಾಪಂ ಅಧ್ಯಕ್ಷ ಉದಯ್, ಉಪಾಧ್ಯಕ್ಷೆ ಜವರಮ್ಮ, ಸದಸ್ಯರಾದ ಸಣ್ಣಕ್ಕ, ಅಮಾಸೇ ಗೌಡ, ರಂಗಯ್ಯ, ಸುರೇಶ್, ತಾಪಂ ಸದಸ್ಯೆ ರಾಜೇಂದ್ರಬಾಯಿ, ತಾಪಂ ಮಾಜಿ ಸದಸ್ಯ ಗಣಪತಿ, ಮುಖಂಡರಾದ ಪೂಣಚ್ಚ, ಸಂಜೀವ, ಜಾನ್ಸನ್, ರಾಮೇ ಗೌಡ, ನಂದೀಶ್, ಯಜಮಾನ್ ರಮೇಶ್ ಮತ್ತಿತರರಿದ್ದರು.

 

Translate »