ತಿ.ನರಸೀಪುರ,ಏ.23(ಎಸ್‍ಕೆ)-ವಿರೋಧ ಪಕ್ಷದ ನಾಯಕರು ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ವನ್ನು ಟೀಕಿಸುವುದನ್ನು ಬಿಟ್ಟು ಕೊರೊನಾ ನಿಯಂತ್ರಣಕ್ಕೆ ಶ್ರಮಿಸುವಂತೆ ಪುರಸಭಾ ಸದಸ್ಯ ಆರ್. ಅರ್ಜುನ್ ಸಲಹೆ ನೀಡಿದರು.
ತಾಲೂಕಿನಾದ್ಯಂತ ಕೋವಿಡ್-19 ಹೆಚ್ವುತ್ತಿರುವ ಹಿನ್ನೆಲೆಯಲ್ಲಿ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸಲು ಪುರ ಸಭಾ ಸದಸ್ಯರು ಹಾಗೂ ಸಿಬ್ಬಂದಿ ಜೊತೆ ಗೂಡಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದವರಿಗೆ ಮಾಸ್ಕ್ ವಿತರಿಸಿ ಮಾತನಾಡಿದರು.
ದೇಶದಲ್ಲಿ ಕೊರೊನಾ ಹೋಗಲಾಡಿ ಸಲು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಸೋಂಕಿನಿಂದ ದೇಶದಲ್ಲಿ ಲಕ್ಷಾಂತರ ಮಂದಿ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಜನರ ಬದುಕು ಮೂರಾ ಬಟ್ಟೆಯಾಗಿದೆ. ಇಂತಹ ಸಂಕಷ್ಟ ಹಾಗೂ ಸಂದಿಗ್ಧ ಪರಿಸ್ಥಿತಿಯಲ್ಲಿ ವಿರೋಧ ಪಕ್ಷ ದವರು ಸರ್ಕಾರದೊಂ ದಿಗೆ ಕೈಜೋಡಿಸಿ ಕೊರೊನಾ ತೊಲಗಿ ಸಲು ಸಹಕರಿಸದೇ ಟೀಕೆಯಲ್ಲಿ ನಿರತರಾಗಿ ದ್ದಾರೆ. ಇಷ್ಟಕ್ಕೂ ಪ್ರಧಾನಿ ಮೋದಿ ಯಾಗಲೀ ಅಥವಾ ಮುಖ್ಯಮಂತ್ರಿ ಯಡಿ ಯೂರಪ್ಪ ಆಗಲೀ ಕೊರೊನಾ ತಂದು ಬಿಟ್ಟಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಮಾಡದೇ ದೇಶದ ಜನತೆ ಸಂಕಷ್ಟದಲ್ಲಿ ಭಾಗಿಯಾಗಬೇಕಾದ್ದು ವಿರೋಧ ಪಕ್ಷ ದವರ ಕರ್ತವ್ಯ ಎಂದರು.
ಮಹಾಮಾರಿ ಕೊರೊನಾ ಮೊದಲ ಹಂತಕ್ಕಿಂತ ಈಗ ಎರಡನೇ ಹಂತದಲ್ಲಿ ಅಪಾಯಕಾರಿಯಾಗಿ ಮುನ್ನುಗ್ಗಿ ದೇಶದ ಆರ್ಥಿಕ ಪರಿಸ್ಥಿತಿಯನ್ನೇ ಅಲುಗಾಡಿ ಸುತ್ತಿದೆ. ವೈರಾಣು ವಿರುದ್ಧ ವಿರೋಧ ಪಕ್ಷವೂ ಸೇರಿಕೊಂಡು ಸಂಘಟಿತ ಹೋರಾಟ ಮಾಡುವ ಅವಶ್ಯಕತೆ ಇದೆ. ಆದರೆ ಇಲ್ಲಿ ವಿರೋಧ ಪಕ್ಷ ರಾಜಕೀಯ ಲಾಭ ಪಡೆಯಲು ಟೀಕೆಯನ್ನೇ ಅಸ್ತ್ರವನ್ನಾಗಿಸಿಕೊಂಡಿದೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಯೊಬ್ಬರು ಮಾಸ್ಕ್ ಧರಿಸಿದ ನಂತರವೇ ಮನೆಯಿಂದ ಹೊರ ಬರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಕ್ಕಳೂ ಸೇರಿದಂತೆ ಸಾರ್ವಜನಿಕರು ಜಾಗೃತರಾಗಿ ಕೋವಿಡ್ ನಿಂದ ರಕ್ಷಣೆ ಪಡೆಯಲು ಕಡ್ಡಾಯ ವಾಗಿ ಮಾಸ್ಕ್ ಧರಿಸುವಂತೆ ಮನವಿ ಮಾಡಿ ದರು. ಇದೇ ವೇಳೆ ಪುರಸಭಾ ಸದಸ್ಯರಾದ ಅರ್ಜುನ್ ಹಾಗೂ ಎಸ್.ಕೆ.ಕಿರಣ್ ಸಾರ್ವ ಜನಿಕರಿಗೆ 2 ಸಾವಿರ ಮಾಸ್ಕ್ ಗಳನ್ನು ವಿತರಿಸಿದರು. ಬಿಜೆಪಿ ಹಿಂದುಳಿದ ವರ್ಗ ಗಳ ಮಾಜಿ ಉಪಾಧ್ಯಕ್ಷ ನಂಜುಂಡಸ್ವಾಮಿ, ಎಸ್‍ಸಿ ಮೋರ್ಚಾ ಅಧ್ಯಕ್ಷ ಸಿದ್ದರಾಜು, ಸಿ. ಮಹದೇವ, ಮುಖ್ಯಾಧಿಕಾರಿ ಆರ್.ಅಶೋಕ್, ಪರಿಸರ ಅಭಿಯಂತರೆ ಲೋಕೇಶ್ವರಿ, ಆರೋ ಗ್ಯಾಧಿಕಾರಿ ಚೇತನ್‍ಕುಮಾರ್ ಮತ್ತಿತರರಿದ್ದರು.