ಬೆಟ್ಟದಪುರ, ಏ.23(ಶಿವದೇವ್)- ಪಿರಿಯಾಪಟ್ಟಣ ತಾಲೂಕು ಸುರಗಹಳ್ಳಿಯಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ಯುವಕ ಸಂಘ ಮತ್ತುÀ ಅಂಬೇಡ್ಕರ್ ಅವರ 130ನೇ ಜಯಂತಿಯನ್ನು ಮೈಮುಲ್ ನೂತನ ಅಧ್ಯಕ್ಷ ಪಿ.ಎಂ.ಪ್ರಸನ್ನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತದ ಸಂವಿಧಾನ ವಿಶಿಷ್ಟವಾದುದು. ಇದನ್ನು ರಚಿಸಿದ ಅಂಬೇಡ್ಕರ್ ವಿಶ್ವಕಂಡಂತಹ ಮಹಾನ್ ನಾಯಕ. ಎಲ್ಲರೂ ಇವರ ಆದರ್ಶ ಅನುಸರಿಸಬೇಕು. ಜೊತೆಗೆ ಶಿಕ್ಷಣ, ಆರೋಗ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಆರ್.ಕಾಂತರಾಜು ಮಾತನಾಡಿ, ದೇಶದ ಅಭಿವೃದ್ಧಿಗೆ ಅಂಬೇಡ್ಕರ್ ಕೊಡುಗೆ ಅಪಾರ ಎಂದರು. ಹಲಗನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಪಿ.ಕೆ.ಮಹದೇವ್, ಸಿ.ಎನ್.ಜಗದೀಶ್, ಸುರಗಳ್ಳಿ ಶಂಕರೇಗೌಡ, ಹಲಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಸಫೀರ್ ಅಹಮ್ಮದ್, ಸಂಘದ ಅಧ್ಯಕ್ಷ ಕುಮಾರ್ ಕಾರ್ಯದರ್ಶಿ ರಾಮಯ್ಯ, ರವಿ, ರವಿ.ಸಿ.ಮಂಜು, ಮುಖಂಡರಾದ ಯ.ಶ್ರೀನಿವಾಸ, ಪ.ಸೋಮಶೇಖರ್, ವಿದ್ಯಾಶಂಕರ, ಕರಡಿಪುರ ಕುಮಾರ್, ರವೀಂದ್ರ, ಶಶಿಕುಮಾರ್, ಸಂತೋಷ್, ವೆಂಕಟೇಶ್, ಭರತ್, ಸುಮಂತ್, ಪುಟ್ಟರಾಜು, ಸಾಗರ್, ದೇವರಾಜ್, ಗಣೇಶ್, ಮಾರುತಿ ಮತ್ತಿತರರು ಹಾಜರಿದ್ದರು.