ನಂಜನಗೂಡು ನಗರಸಭೆ ಬಿಜೆಪಿ ತೆಕ್ಕೆಗೆ 
ಮೈಸೂರು ಗ್ರಾಮಾಂತರ

ನಂಜನಗೂಡು ನಗರಸಭೆ ಬಿಜೆಪಿ ತೆಕ್ಕೆಗೆ 

November 3, 2020

ಅಧ್ಯಕ್ಷರಾಗಿ ಹೆಚ್.ಎಸ್.ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ನಾಗಮಣಿ ಶಂಕರಪ್ಪ ಆಯ್ಕೆ

ನಂಜನಗೂಡು, ನ.2(ರವಿ)- ನಿರೀಕ್ಷೆ ಯಂತೆ ಇಲ್ಲಿನ ನಗರಸಭೆ ಅಧಿಕಾರವನ್ನು ಭಾರತೀಯ ಜನತಾ ಪಕ್ಷ ಹಿಡಿಯುವಲ್ಲಿ ಯಶಸ್ವಿಯಾಗಿದೆ. ನೂತನ ಅಧ್ಯಕ್ಷರಾಗಿ 24ನೇ ವಾರ್ಡಿನಿಂದ 2 ಬಾರಿಗೆ ಆಯ್ಕೆ ಯಾಗಿರುವ ಹೆಚ್.ಎಸ್.ಮಹದೇವಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ 31 ನೇ ವಾರ್ಡಿನ ನಾಗಮಣಿ ಶಂಕರಪ್ಪ ಆಯ್ಕೆಯಾಗಿದ್ದಾರೆ.

ಬೆಳಗ್ಗೆ 11 ಗಂಟೆಗೆ ಚುನಾವಣಾಧಿ ಕಾರಿಯೂ ಆದ ಉಪವಿಭಾಗಾಧಿಕಾರಿ ವೆಂಕಟರಾಜು ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಿ ಬಿಜೆಪಿಯಿಂದ ಹೆಚ್.ಎಸ್.ಮಹದೇವಸ್ವಾಮಿ 2 ನಾಮಪತ್ರ ಗಳು, ಉಪಾಧ್ಯಕ್ಷ ಸ್ಥಾನಕ್ಕೆ ನಾಗಮಣಿ ಶಂಕರಪ್ಪ 1 ನಾಮಪತ್ರ, ಕಾಂಗ್ರೆಸ್‍ನಿಂದ ಅಧ್ಯಕ್ಷ ಸ್ಥಾನಕ್ಕೆ ಶ್ರೀಕಂಠಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ಶ್ವೇತಾಲಕ್ಷ್ಮಿ ಸತೀಶ್‍ಗೌಡ ನಾಮ ಪತ್ರ ಸಲ್ಲಿಸಿದ್ದರು. ಎಲ್ಲಾ ನಾಮಪತ್ರಗಳು ಕ್ರಮಬದ್ದವಾಗಿದ್ದವು.

ನಂತರ ಚುನಾವಣೆ ನಡೆದು ಹೆಚ್.ಎಸ್. ಮಹದೇವಸ್ವಾಮಿರವರಿಗೆ ಬಿಜೆಪಿಯ 15 ಸದಸ್ಯರು, ಜೆಡಿಎಸ್‍ನ ಗಿರೀಶ್‍ಬಾಬು ಪಕ್ಷೇ ತರ ಸದಸ್ಯರಾದ ಎನ್.ಎಸ್.ಯೋಗೀಶ್, ಯೋಗೀಶ್, ಮಂಗಳಮ್ಮ ಹಾಗೂ ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕ ಬಿ.ಹರ್ಷ ವರ್ಧನ್ ಸೇರಿದಂತೆ 21 ಮತಗಳು ದೊರೆತವು. ಜೆಡಿಎಸ್ ಸದಸ್ಯ ಖಾಲಿದ್ ಅಹಮದ್ ತಟಸ್ಥರಾದರೇ, ಮತ್ತೊಬ್ಬ  ಜೆಡಿಎಸ್ ಸದಸ್ಯೆ ರೇಹನಾ ಭಾನು ಚುನಾವಣೆಗೆ ಗೈರು ಹಾಜರಿಯಾಗಿದ್ದರು.

ಕಾಂಗ್ರೆಸ್‍ನ ಶ್ರೀಕಂಠಸ್ವಾಮಿ 10 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ನಾಗಮಣಿ ಶಂಕರಪ್ಪರವರಿಗೆ 21 ಮತಗಳು ಲಭಿಸಿದರೆ, ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಶ್ವೇತಾಲಕ್ಷ್ಮಿ ಸತೀಶ್‍ಗೌಡ 10 ಮತಗಳು ಬಿದ್ದವು. ಅಧ್ಯಕ್ಷರಾಗಿ ಹೆಚ್. ಎಸ್.ಮಹದೇವಸ್ವಾಮಿ ಉಪಾಧ್ಯಕ್ಷರಾಗಿ ನಾಗಮಣಿ ಶಂಕರಪ್ಪ ಹೆಸರನ್ನು ಅಧಿಕೃತ ವಾಗಿ ಚುನಾವಣಾಧಿಕಾರಿ ವೆಂಕಟರಾಜು ಘೋಷಿಸಿದರು. ಬಿಜೆಪಿ ಅಧಿಕಾರ ಹಿಡಿಯು ತ್ತಿದ್ದಂತೆ ನಗರದಲ್ಲಿ ಸಂಭ್ರಮದ ವಾತಾ ವರಣ ನಿರ್ಮಾಣ ವಾಗಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಬ್ರಮಿಸಿದರು.

ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸುದ್ದಿ ಗಾರರೊಂದಿಗೆ ಮಾತನಾಡಿ, ಪುರಸಭೆ ಯಿಂದ ನಗರಸಭೆಯಾಗಿ ಪರಿವರ್ತನೆ ಯಾದ ನಂತರ ಬಿಜೆಪಿ ಅಧಿಕಾರ ಹಿಡಿದಿ ರುವುದು ಸಂತಸವಾಗಿದೆ. ಶಾಂತಿಯುತ ವಾಗಿ ಚುನಾವಣೆ ನಡೆಯಲು ಕಾರಣ ರಾದ ಆಡಳಿತ ಪಕ್ಷ ಸದಸ್ಯರಿಗೂ ವಿರೋಧ ಪಕ್ಷದ ಸದಸ್ಯರಿಗೂ ಅಭಿನಂದಿಸುತ್ತೇನೆ. ನಾನು ಮತ್ತು ಶಾಸಕರು ನಂಜನಗೂಡು ಸರ್ವೋತೋಮುಖ ಅಭಿವೃದ್ದಿಗೆ ಶ್ರಮಿಸು ತ್ತೇವೆ ಎಂದರು. ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ರಾಜ್ಯ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯವನ್ನು ನಗರಸಭೆಗೆ ಒದಗಿ ಸುವ ಮೂಲಕ ಮಾದರಿ ನಗರಸಭೆ ಯನ್ನಾಗಿ ಮಾಡವುದಾಗಿ ತಿಳಿಸಿದರು.

ನೂತನ ಅಧ್ಯಕ್ಷ ಹೆಚ್.ಎಸ್.ಮಹದೇವ ಸ್ವಾಮಿ ಮಾತನಾಡಿ, 35 ವರ್ಷಗಳ ನಂತರ ವೀರಶೈವ ಸಮುದಾಯಕ್ಕೆ ಅವಕಾಶ ಕಲ್ಪಿಸಿ ಕೊಟ್ಟ ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕ ಬಿ.ಹರ್ಷವರ್ಧನ್ ಹಾಗೂ ಸದಸ್ಯ ರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಗರದ ಕುಡಿ ಯುವ ನೀರಿಗೆ ವಿಶೇಷ ಆದ್ಯತೆ ನೀಡು ವುದಲ್ಲದೇ, ಶಾಸಕರ ಸಹಕಾರದಿಂದ ನೂತನ ನಗರಸಭಾ ಕಟ್ಟಡವನ್ನು ನಿರ್ಮಿ ಸಲು ಪ್ರಯತ್ನಿಸುತ್ತೇನೆ. ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು ಅದನ್ನು ತಡೆಗಟ್ಟುವುದಾಗಿ, ವಿದ್ಯುತ್ ಚಿತಾಗಾರವನ್ನು ಒದಗಿಸಲು ಯೋಜನೆ ಸೇರಿದಂತೆ ಪಾರದರ್ಶಕ ಆಡಳಿತ ನೀಡಲು ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ತಾಲೂಕು ಅಧ್ಯಕ್ಷ ಮಹೇಶ್, ನಗರ ಅಧ್ಯಕ್ಷ ಶ್ರೀನಿವಾಸರೆಡ್ಡಿ, ರಾಜ್ಯ ಬಿಜೆಪಿ ಮುಖಂಡರಾದ ಎಸ್. ಮಹದೇವಯ್ಯ, ಧೀರಜ್ ಪ್ರಸಾದ್, ಯು.ಎನ್. ಪದ್ಮನಾಭರಾವ್, ಎನ್.ಆರ್.ಕೃಷ್ಣಪ್ಪಗೌಡ, ರಾಜ್ಯ ಎಸ್.ಟಿ,ಮೊರ್ಚಾ ಉಪಾಧ್ಯಕ್ಷ ಚಿಕ್ಕರಂಗನಾಯಕ, ಸಂತೋಷ್, ಬಾಲ ಚಂದ್ರು, ಹಿರಿಯ ಬಿಜೆಪಿ ಸದಸ್ಯ ದೊರೆ ಸ್ವಾಮಿ, ಎಪಿಎಂಸಿ ಗುರುಸ್ವಾಮಿ, ಶಂಕರಪ್ಪ, ಕುಮಾರ, ಮುರುಗೇಶ್, ಶ್ಯಾಂಪಟೇಲ್, ಶ್ರೀಕಂಠ, ತಹಸಿಲ್ಧಾರ್ ಕೆ.ಎಂ.ಮಹೇಶ್ ಕುಮಾರ್, ನಗರಸಭಾ ಆಯುಕ್ತ ಕರಿಬಸವಯ್ಯ ಇದ್ದರು.

ಡಿವೈಎಸ್ಪಿ ಪ್ರಭಾಕರ್‍ರಾವ್ ಸಿಂಧೆ, ಸಿಪಿಐ ಲಕ್ಷ್ಮಿಕಾಂತ್ ತಳವಾರ್, ಪಿಎಸೈ ಗಳಾದ ರವಿಕುಮಾರ್, ಆಕಾಶ್, ಸತೀಶ್, ಜಯಲಕ್ಷ್ಮಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

 

 

 

 

 

 

Translate »