10 ಕೋಟಿ ರೂ. ಅನುದಾನದಲ್ಲಿ ಮೈಸೂರು ದಸರೆಗೆ ಖರ್ಚಾಗಿದ್ದು ಕೋಟಿ ಮೊತ್ತ
ಮೈಸೂರು

10 ಕೋಟಿ ರೂ. ಅನುದಾನದಲ್ಲಿ ಮೈಸೂರು ದಸರೆಗೆ ಖರ್ಚಾಗಿದ್ದು ಕೋಟಿ ಮೊತ್ತ

November 3, 2020

ಮೈಸೂರು,ನ.2(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದ ಇತಿಹಾಸ ದಲ್ಲಿಯೇ ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿಯೇ ದಸರಾ ಮಹೋ ತ್ಸವದ ಖರ್ಚು ವೆಚ್ಚದ ಲೆಕ್ಕ ಬಿಡುಗಡೆ ಮಾಡಲಾಗಿದ್ದು, ಕೊರೊನಾ ಹಿನ್ನೆಲೆ ಯಲ್ಲಿ ಸರಳ ಮತ್ತು ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಿದ್ದ ಪ್ರಸಕ್ತ ಸಾಲಿನ ನಾಡಹಬ್ಬ ದಸರಾ ಮಹೋ ತ್ಸವಕ್ಕೆ ಬಿಡುಗಡೆಯಾಗಿದ್ದ 10 ಕೋಟಿ ರೂ.ನಲ್ಲಿ 2.91ಕೋಟಿ ರೂ. ಮಾತ್ರ ವೆಚ್ಚ ವಾಗಿದೆ. ಅದರಲ್ಲಿ ಶ್ರೀರಂಗಪಟ್ಟಣ ದಸರೆಗೆ 50 ಲಕ್ಷ ರೂ., ಚಾಮರಾಜನಗರ ದಸರೆಗೆ 36 ಲಕ್ಷ ರೂ. ನೀಡಲಾಗಿದೆ.

ಪ್ರತಿವರ್ಷ ದಸರಾ ಮಹೋತ್ಸವದ ಮುಗಿದರೂ ಖರ್ಚುವೆಚ್ಚದ ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದದ್ದು ಕಂಡು ಬರುತ್ತಿತ್ತು. ಆದರೆ ಈ ಬಾರಿ ನ.1ರಂದು ಲೆಕ್ಕ ಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ದಿನಾಂಕ ಪ್ರಕಟಿಸಿದ್ದಂತೆ, ದಸರಾ ಮುಗಿದ ಐದು ದಿನಕ್ಕೆ ಖರ್ಚುವೆಚ್ಚದ ಲೆಕ್ಕ ಸಾರ್ವಜನಿಕರ ಮುಂದಿಡಲಾಗಿದೆ.

ಮೈಸೂರಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ದಸರಾ ಮಹೋತ್ಸವದ ಲೆಕ್ಕ ಸಾರ್ವ ಜನಿಕರ ಮುಂದಿಟ್ಟರು. ಈ ಸಾಲಿನ ದಸರಾ ಮಹೋತ್ಸವಕ್ಕೆ 2,91,83,167 ರೂ. ಖರ್ಚಾ ಗಿದ್ದು, ಸರ್ಕಾರ ಬಿಡುಗಡೆ ಮಾಡಿದ್ದ 10 ಕೋಟಿ ರೂ.ಗಳಲ್ಲಿ 7 ಕೋಟಿ ರೂ. ಉಳಿ ತಾಯವಾಗಿದೆ. ಒಟ್ಟು 23 ವಿಭಾಗಗಳಿಗೆ ಹಣ ವಿನಿಯೋಗ ಮಾಡಲಾಗಿದೆ. ಅತಿ ಹೆಚ್ಚು ಎಂದರೆ ಸಾಂಸ್ಕøತಿಕ ಕಾರ್ಯಕ್ರಮಗಳ ನಿರ್ವಹಣೆ ಹಾಗೂ ಕಲಾವಿದರಿಗೆ ಗೌರವ ಸಂಭಾವನೆ ನೀಡಲಾಗಿದೆ. ಎಲ್ಲವೂ ಪಾರ ದರ್ಶಕವಾಗಿ ನಡೆಸಲಾಗಿದ್ದು, ಸಾರ್ವಜನಿ ಕರಿಗೆ ದಸರಾ ಮಹೋತ್ಸವಕ್ಕೆ ಖರ್ಚು ಮಾಡಿದ ಒಂದೊಂದು ಪೈಸೆ ಯನ್ನು ಲೆಕ್ಕ ಕೊಡುವುದಾಗಿ ಹೇಳಿದ್ದೆ ಅದರಂತೆ ದಸರಾದ ಖರ್ಚುವೆಚ್ಚದ ಮಾಹಿತಿ ಮುಂದಿಡುತ್ತಿದ್ದೇನೆ ಎಂದರು.

ನವರಾತ್ರಿ ವೇಳೆ ಅರಮನೆ ಮುಂಭಾ ಗದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟ ಕಲಾವಿದರಿಗೆ ಗೌರವ ಸಂಭಾ ವನೆ ಹಾಗೂ ಕಾರ್ಯಕ್ರಮದ ನಿರ್ವ ಹಣೆಗೆ 44.78 ಲಕ್ಷ ರೂ., ಗಜಪಡೆ ನಿರ್ವ ಹಣೆಗೆ 35 ಲಕ್ಷ ರೂ., ಚಾಮುಂಡಿಬೆಟ್ಟ, ಅರಮನೆ ಮುಂಭಾಗ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ 41.08 ಲಕ್ಷ ರೂ., ರಾಜವಂಶಸ್ಥರಿಗೆ ಗೌರವ ಧನವಾಗಿ 40 ಲಕ್ಷ ರೂ., ಜಂಬೂಸವಾರಿ ನಿರ್ವಹಣೆಗೆ 16.94 ಲಕ್ಷ ರೂ., ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಸಾಮಾಜಿಕ ಜಾಲತಾಣ ಗಳಲ್ಲಿ ನೇರ ಪ್ರಸಾರ ಮಾಡಲು 5.90 ಲಕ್ಷ ರೂ., ಆನೆ ಬಂಡಿ ಸ್ತಬ್ಧಚಿತ್ರಕ್ಕೆ 3.75 ಲಕ್ಷ ರೂ., ಸ್ತಬ್ಧಚಿತ್ರ ತಯಾರಿಸಲು ತಗು ಲಿದ ಬಾಡಿಗೆ ಮತ್ತು ಇತರ ವೆಚ್ಚಕ್ಕೆ 35 ಸಾವಿರ ರೂ., ಗಣ್ಯರು ಮತ್ತು ಕಲಾವಿದ ರಿಗೆ ಸ್ಥಳಾವಕಾಶ ಮತ್ತು ಸಾರಿಗೆ ವ್ಯವಸ್ಥೆಗೆ 2.67 ಲಕ್ಷ ರೂ., ಗಣ್ಯರ ಆಹ್ವಾನಕ್ಕೆ ರೇಷ್ಮೆ ಶಾಲು, ಹಾರ ತುರಾಯಿಗೆ 1.80 ಲಕ್ಷ ರೂ., ಬೆಂಗಳೂರಿನಲ್ಲಿ ನಡೆಸಿದ ಉನ್ನತ ಮಟ್ಟದ ಸಮಿತಿ ಸಭೆಯ ಶಿಷ್ಟಾಚಾರಕ್ಕೆ 1.75 ಲಕ್ಷ ರೂ., ವಿವಿಧ ಸಭೆಗಳಿಗೆ ಕಾಫಿ, ಟೀ, ಸ್ನಾೃಕ್ಸ್‍ಗೆ 1.22 ಲಕ್ಷ ರೂ., ಆಹ್ವಾನ ಪತ್ರಿಕೆ ಮುದ್ರಣದ ಬಾಬ್ತು 98,175 ರೂ. ನೇರ ಪ್ರಸಾರ ಕಾರ್ಯಕ್ರಮದ ವೇಗ ಗತಿಯ ಇಂಟರ್‍ನೆಟ್ ಒದಗಿಸುವುದಕ್ಕಾಗಿ 78,668 ರೂ., ಲೇಖನ ಸಾಮಗ್ರಿ ಖರೀ ದಿಗೆ 74 ಸಾವಿರ ರೂ., ಜಂಬೂಸವಾರಿ ವೀಕ್ಷಕ ವಿವರಣೆ ಬಿತ್ತರಿಸಿದ್ದಕ್ಕೆ 66,820 ರೂ., ಕಾರ್ಯಕ್ರಮಗಳ ಫೆÇೀಟೋ ಮತ್ತು ವಿಡಿಯೋಗ್ರಾಫ್‍ಗೆ 65 ಸಾವಿರ ರೂ., ಮಾಧ್ಯಮ ಪ್ರತಿನಿಧಿಗಳ ಊಟಕ್ಕೆ 44 ಸಾವಿರ ರೂ., ಆಹ್ವಾನ ಪತ್ರಿಕೆ ವಿನ್ಯಾಸಕ್ಕೆ 38 ಸಾವಿರ ರೂ., ಆನೆಗಳ ವಿಮೆಗೆ 13,202 ರೂ. ಹಾಗೂ ಕೊರೊನಾ ವಾರಿಯರ್ಸ್‍ಗಳ ಪ್ರಮಾಣಪತ್ರ ಮುದ್ರಣಕ್ಕೆ 8,496 ರೂ. ಖರ್ಚು ಮಾಡಲಾಗಿದೆ. ಒಟ್ಟಾರೆ 2020ನೇ ಸಾಲಿನ ಮೈಸೂರು ದಸರೆಗೆ 2.05 ಕೋಟಿ ರೂ. ವೆಚ್ಚವಾಗಿದೆ ಎಂದು ವಿವರಿಸಿದರು.

ಮೈಸೂರು ದಸರೆಯೊಂದಿಗೆ ಶ್ರೀರಂಗ ಪಟ್ಟಣ ದಸರಾಗೆ 50 ಲಕ್ಷ ರೂ., ಚಾಮ ರಾಜನಗರ ದಸರಾಗೆ 36 ಲಕ್ಷ ರೂ. ಖರ್ಚು ಮಾಡಲಾಗಿದೆ. ಸರ್ಕಾರ ಬಿಡುಗಡೆಯಾಗಿದ್ದ 10 ಕೋಟಿ ರೂ.ನಲ್ಲಿ ಮೈಸೂರು, ಶ್ರೀರಂಗ ಪಟ್ಟಣ, ಚಾಮರಾಜನಗರ ದಸರೆಗೆ 2.91. 83.167 ರೂ. ಖರ್ಚಾದಂತಾಗಿದೆ. ಇನ್ನು 7 ಕೋಟಿ ರೂ. ಉಳಿಕೆಯಾಗಿದೆ. ಮುಡಾ 5 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿತ್ತು. ಆದರೆ ಹಣ ಬಿಡುಗಡೆ ಮಾಡಿ ರಲಿಲ್ಲ. ಉಳಿತಾಯ ಮಾಡಿರುವ 7 ಕೋಟಿ, ಮುಡಾ ನೀಡಲು ಉದ್ದೇಶಿಸಿರುವ 5 ಕೋಟಿ ರೂ. ಯಾವುದಕ್ಕೆ ಬಳಕೆ ಮಾಡಬೇಕು ಎನ್ನು ವುದನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.

ಸರಳ ದಸರಾ ಮಹೋತ್ಸವದಲ್ಲೂ ರಾಜ ವಂಶಸ್ಥರಿಗೆ 40 ಲಕ್ಷ ರೂ. ನೀಡುವ ಅಗತ್ಯ ವಿತ್ತೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮ ಶೇಖರ್, ಈ ಹಿಂದೆ ನಡೆದು ಬಂದಿರುವ ಪದ್ದತಿಯನ್ನೇ ಈ ಬಾರಿಯೂ ಅನುಸರಿಸ ಲಾಗಿದೆ. ನಾನು ಯಾವುದನ್ನೂ ಹೊಸ ದಾಗಿ ಆಚರಣೆಗೆ ತಂದಿಲ್ಲ ಎಂದು ಸ್ಪಷ್ಟಪಡಿ ಸಿದರು. ವೇದಿಕೆ ನಿರ್ಮಾಣಕ್ಕೆ 41 ಲಕ್ಷ ರೂ. ವೆಚ್ಚವಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವ ಎಸ್‍ಟಿಎಸ್ ಪ್ರತಿಕ್ರಿಯಿಸಿ ಲೋಕೋಪಯೋಗಿ ಇಲಾಖೆ ನಿಗಧಿ ಮಾಡಿರುವ ದರಕ್ಕೆ ಅನು ಗುಣವಾಗಿ ಹಣ ನೀಡಲಾಗಿದೆ ಎಂದರು.

 

Translate »