ಮೈಸೂರು ಗ್ರಾಮಾಂತರ

ತಿ.ನರಸೀಪುರದಲ್ಲಿ ಬಿಜೆಪಿ ರೈತಮೋರ್ಚಾ ಪದಾಧಿಕಾರಿಗಳ ಪದಗ್ರಹಣ

November 3, 2020

ಕೃಷಿ, ಎಪಿಎಂಸಿ ಕಾಯಿದೆಗಳಿಂದ ರೈತರಿಗೆ ಅನುಕೂಲ ಮಾಜಿ ಶಾಸಕ ಡಾ.ಎನ್.ಎಲ್.ಭಾರತೀಶಂಕರ್ ವಿವರಣೆ
ತಿ.ನರಸೀಪುರ, ನ.2(ಎಸ್‍ಕೆ)- ಬಿಜೆಪಿ ನೇತೃ ತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಮಸೂದೆ, ಎಪಿಎಂಸಿ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿವೆ ಎಂದು ಮಾಜಿ ಶಾಸಕ ಡಾ.ಎನ್. ಎಲ್.ಭಾರತೀಶಂಕರ್ ಅಭಿಪ್ರಾಯಪಟ್ಟರು.

ಪಟ್ಟಣದ ಮಹದೇವಪ್ಪ ಸ್ಮಾರಕ ಭವನ ದಲ್ಲಿ ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ನೇಮ ಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

ರೈತ ಮೋರ್ಚಾ ಘಟಕ ಬಿಜೆಪಿ ಪ್ರಮುಖ ಅಂಗವಾಗಿದೆ. ಪದಾಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆ ಗಳನ್ನು ಗ್ರಾಪಂ ಚುನಾವಣೆ ವೇಳೆ ಪ್ರತಿ ಗ್ರಾಮದಲ್ಲೂ ಪ್ರಚುರ ಪಡಿಸುವ ಮೂಲಕ ಹೆಚ್ಚಿನ ಸ್ಥಾನ ಗಳಿಸಿ, ಪಕ್ಷ ಸಂಘಟನೆಗೆ ಮುಂದಾಗಬೇಕೆಂದು ಕರೆ ನೀಡಿದರು.

ರೈತಪರ ಕಾಳಜಿ ಹೊಂದಿರುವ ಪ್ರಧಾನಿ ಮೋದಿ ಅವರು ಕೃಷಿ, ಎಪಿಎಂಸಿ ಹಾಗೂ ಕಾರ್ಮಿಕ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಕ್ರಾಂತಿಕಾರಿ ಹೆಜ್ಜೆಯಿಟ್ಟರು. ರಾಜ್ಯ ದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಕೃಷಿ ಬಜೆಟ್ ಅನ್ನು ಮಂಡಿಸುವ ಮೂಲಕ ಇತಿಹಾಸ ಸೃಷ್ಟಿಸಿದರು ಎಂದು ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆ ಬಣ್ಣಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ರಮೇಶ್ ಮಾತನಾಡಿ, ರೈತ ಮೋರ್ಚಾ ಯಾವುದೇ ಒಂದು ರಾಜಕೀಯ ಪಕ್ಷದ ಬಹು ಮಖ್ಯ ಅಂಗವಾಗಿದ್ದು, ಇದಕ್ಕೆ ಪಕ್ಷ ಹೆಚ್ಚಿನ ಬೆಂಬಲ ನೀಡಿದೆ. ನೂತನವಾಗಿ ಆಯ್ಕೆಯಾಗಿ ರುವ ಪದಾಧಿಕಾರಿಗಳು ತಮಗೆ ವಹಿಸಿ ರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಗ್ರಾಮೀಣ ಭಾಗ ದಲ್ಲಿ ಪಕ್ಷದ ಬಲವರ್ಧನೆಗೆ ಮುಂದಾಗ ಬೇಕೆಂದು ಕಿವಿಮಾತು ಹೇಳಿದರು.

ಕ್ಷೇತ್ರಾಧ್ಯಕ್ಷ ಲೋಕೇಶ್ ಚಿಕ್ಕಮಾದ ನಾಯಕ ಮಾತನಾಡಿ, ಪದಾಧಿಕಾರಿಗಳ ಸಮೂಹ ರೈತರಿಗಾಗಿ ಲಭ್ಯವಿರುವ ಸಕಲ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿ ಸುವ ವ್ಯವಸ್ಥೆಯನ್ನು ಪ್ರಾಮಾಣಿಕತೆ ಯಿಂದ ಮಾಡಬೇಕಾಗಿದೆ. ಉದ್ಯಮ ಕ್ಷೇತ್ರ ದಲ್ಲಿ ಬೇರೆ ಬೇರೆ ಕಾರಣಗಳಿಂದ ಸಂಕಷ್ಟದ ಪರಿಸ್ಥಿತಿಯಿರುವ ಪ್ರಸ್ತುತ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವುದು ಉತ್ತಮ ಎಂದರು.

ರೈತ ಮೋರ್ಚಾ ಪದಾಧಿಕಾರಿಗಳು ಗ್ರಾಮೀಣ ಭಾಗದ ಕೃಷಿ ಕಾರ್ಮಿಕರಿಗೆ ಪೆÇ್ರೀತ್ಸಾಹ ನೀಡುವುದರೊಂದಿಗೆ ಪಕ್ಷ ಸಂಘಟನೆಗೆ ಪೂರಕವಾದ ಕೆಲಸ ನಿರ್ವಹಿಸಬೇಕು. ಮುಂಬ ರುವ ಗ್ರಾಪಂ, ಜಿಪಂ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಪಕ್ಷ ಬಲ ಪಡಿಸುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಜಿಪಂ ಸದಸ್ಯ ಸದಾನಂದ, ಕ್ಷೇತ್ರ ರೈತ ಮೋರ್ಚಾ ಅಧ್ಯಕ್ಷ ಶಿವಕುಮಾರ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಿವ ಶಂಕರ್, ಜಿಲ್ಲಾ ಕಾರ್ಯದರ್ಶಿ ಬಸವರಾಜು, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ, ಮಹದೇವಯ್ಯ, ರೈತ ಮೋರ್ಚಾ ಉಪಾಧ್ಯಕ್ಷ ಎಸ್‍ಬಿಟಿ ಸುರೇಶ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ್ ಕುಮಾರ್, ಓಬಿಸಿ ಮೋರ್ಚಾ ಅಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಕಿಟ್ಟಿ, ಲೋಕೇಶ್‍ಗೌಡ, ರೇಚಣ್ಣ, ಸಿದ್ದರಾಜು, ಮೋಹನ್, ಕುಮಾರ್, ದಯಾನಂದ ಪಟೇಲ್ ಮತ್ತಿತರರಿದ್ದರು.

 

 

 

Translate »