ಪೂಜೆ ನೆಪದಲ್ಲಿ ಚಿನ್ನಾಭರಣ ಎಗರಿಸಿದ್ದ ಪೂಜಾರಿ ಬಂಧನ
ಮೈಸೂರು ಗ್ರಾಮಾಂತರ

ಪೂಜೆ ನೆಪದಲ್ಲಿ ಚಿನ್ನಾಭರಣ ಎಗರಿಸಿದ್ದ ಪೂಜಾರಿ ಬಂಧನ

November 3, 2020

21 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಹುಣಸೂರು, ನ.2 (ಕೆಕೆ)- ಚಿನ್ನದ ಒಡವೆ ಗಳನ್ನು ಪೂಜೆ ಮಾಡಿದರೆ ಗಂಡು ಮಗು ಆಗುತ್ತದೆ ಎಂದು ನಂಬಿಸಿ ಚಿನ್ನಾಭರಣ ಅಪಹರಿಸಿದ್ದ ಪೂಜಾರಿಯನ್ನು ಬಂಧಿಸುವಲ್ಲಿ ಬಿಳಿಕೆರೆ ಪೆÇೀಲಿಸರು ಯಾಶಸ್ವಿಯಾಗಿದ್ದಾರೆ.

ಕೆ.ಆರ್.ನಗರ ತಾಲೂಕಿನ ಸಾತಿ ಗ್ರಾಮದ ಚೌಡೇಶ್ವರಿ ದೇವಾಲಯದ ಪೂಜಾರಿ ಮನು (28) ಬಂಧಿತ ಆರೋಪಿಯಾಗಿದ್ದು, ಈತನಿಂದ 21 ಲಕ್ಷ ರೂ. ಮೌಲ್ಯದ 456 ಗ್ರಾಂ ಚಿನ್ನಾ ಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ವಿವರ: 2020ರ ಜೂನ್ ತಿಂಗಳ ಮೊದಲ ವಾರದಲ್ಲಿ ಹುಣಸೂರು ತಾಲೂಕಿನ ಊಯಿ ಗೌಡನಹಳ್ಳಿ ಗ್ರಾಮಕ್ಕೆ ಬಂದ ಪೂಜಾರಿ ನಿಂಗಪ್ಪ ಎಂಬುವರÀ ಮನೆಗೆ ಹೋಗಿ ಮನೆ ಯಲ್ಲಿ ಚಿನ್ನದ ಒಡವೆಗಳನ್ನು ಪೂಜೆ ಮಾಡಿ ದರೆ ನಿಮಗೆ ಗಂಡು ಮಗು ಆಗುತ್ತದೆ ಹಾಗೂ ಮನೆಗೆ ಒಳ್ಳೆಯದಾಗುತ್ತದೆ ಎಂದು ಅವರ ಮನವೊಲಿಸಿ ಒಳ್ಳೆಯ ದಿನವೊಂದನ್ನು ನಿಗದಿಪಡಿಸಿ ಪೂಜೆಗೆ ವ್ಯವಸ್ಥೆ ಮಾಡಿದ್ದ.

ಅಂದು ನಿಂಗಪ್ಪ ತನ್ನ ಮನೆಯಲ್ಲಿದ್ದ ಚಿನ್ನದ ಒಡವೆಗಳು ಹಾಗೂ ಗ್ರಾಮದ ಸಂಬಂಧಿಕ ರಾದ ಬಸಪ್ಪ, ಶಿವಲಿಂಗಪ್ಪ, ಪುಟ್ಟಪ್ಪ, ಭಾರತಿ, ಶಿಲಾ, ದೀಪಾ ಹಾಗೂ ಹುಣಸೂರಿನ ಸಂತೋಷ ಅವರುಗಳ ಮನೆ ಒಡವೆ ಗಳನ್ನು ತರಿಸಿ 456 ಗ್ರಾಂ ತೂಕದ 21 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಒಟ್ಟಿಗೆ ಇರಿಸಿ ಪೂಜೆ ಮಾಡಿಸಿದರು.

ನಿಮಗೆ ಗಂಡು ಮಗುವಾಗಲಿ ಮತ್ತು ನಿಮಗೆ ನಿಮ್ಮ ಕಡೆಯವರಿಗೆ ಒಳಿತಾಗಲಿ ಎಂದು ಪೂಜೆ ಮಾಡಿದ ಪೂಜಾರಿ ಮನು ಟವಲ್‍ವೊಂದರಲ್ಲಿ ಅಕ್ಕಿ ಸುರಿದು ಅದರಲ್ಲಿ ಚಿನ್ನದ ಒಡವೆಗಳನ್ನು ಇರಿಸಿ ನಂತರ ಒಡವೆಗಳ ಗಂಟನ್ನು ನಿಂಗಪ್ಪ ಮನೆಯ ರೂಮಿನಲ್ಲಿದ್ದ ಬೀರುವಿನಲ್ಲಿಟ್ಟು, ಇದನ್ನು ಆಯುಧ ಪೂಜೆ ವರೆಗೂ ಬಿಚ್ಚಬೇಡಿ ನಿರಂತರವಾಗಿ ಪೂಜೆ ಮಾಡಿ ಒಳ್ಳೆಯದಾಗುತ್ತೆ ಎಂದು ಹೇಳಿ ಹೊರ ಹೋದ.

ಮತ್ತೆ ಅದೇ ದಿನ ರಾತ್ರಿ 8.30ಕ್ಕೆ ವಾಪಸ್ ಬಂದು ನನ್ನ ಬಟ್ಟೆ ಮತ್ತು ಪೂಜೆ ಸಾಮಾನು ಗಳನ್ನು ನಿಮ್ಮ ರೂಂನಲ್ಲಿ ಬಿಟ್ಟಿದ್ದೇನೆ. ಅದನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿ ರೂಂಗೆ ಹೋದ ಪೂಜಾರಿ ಸಮಯ ಸಾಧಿಸಿ ಚಿನ್ನದ ಒಡವೆಗಳ ಗಂಟನ್ನು ಅಪಹರಿಸಿ ಬದಲಿಗೆ ಅದೇ ರೀತಿ ಬೇರೆ ಗಂಟನ್ನು ಇರಿಸಿ ಅಸಲಿ ಒಡವೆಗಳನ್ನು ಅಪಹರಿಸಿಕೊಂಡು ಹೋಗಿದ್ದ.

ಮುಗ್ದ ಮನೆಯವರು ಮರುದಿನ ಬೆಳಿಗ್ಗೆ ಯಿಂದ ನಿರಂತರವಾಗಿ ಆಯುಧಪೂಜೆವರೆಗೆ ಪೂಜೆ ಮಾಡಿ ನಂತರ ಅಕ್ಕಿ ಮೂಟೆ ಕಟ್ಟಿದ್ದ ಗಂಟನ್ನು ಬಿಚ್ಚಿ ನೋಡಿದಾಗ ಒಡವೆಗಳು ಇರಲಿಲ್ಲ. ಬರಿ ಅಕ್ಕಿ ಮಾತ್ರ ಇತ್ತು. ಇದರಿಂದ ಗಾಬರಿಯಾದ ಮನೆಯವರು ಬಿಳಿಕೆರೆ ಪೆÇಲೀಸ್ ಠಾಣೆಗೆ ದೂರು ನೀಡಿದರು.

ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ದಾಖ ಲಿಸಿಕೊಂಡು ಎಸ್‍ಪಿ ಸಿ.ಬಿ.ರಿಷ್ಯಂತ್, ಎಎಸ್ಪಿ ಶಿವಕುಮಾರ್ ನಿರ್ದೇಶನದಲ್ಲಿ ಡಿವೈಎಸ್ಪಿ ಕೆ.ಎಸ್.ಸುಂದರ್‍ರಾಜ್ ಮಾರ್ಗದರ್ಶನ ದಲ್ಲಿ ಸಿಪಿಐ ಕೆ.ಜಿ.ಪೂವಯ್ಯ ಮತ್ತು ಪ್ರಭಾರ ಸಿಪಿಐ ರವಿಕುಮಾರ್ ಮಾರ್ಗದರ್ಶನ ದಲ್ಲಿ ಪಿಎಸೈ ಜಯಪ್ರಕಾಶ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಾಶಸ್ವಿ ಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡ ಅ.27ರಂದು ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಕೆ.ಆರ್.ನಗರ ಬಸ್ ನಿಲ್ದಾಣದಲ್ಲಿ ಆರೋಪಿ ಮನುನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಈತ ಮನೆ ಯವರನ್ನು ವಂಚಿಸಿ ಅಪಹರಿಸಿದ್ದ 456 ಗ್ರಾಂ ಚಿನ್ನದ ಒಡವೆಗಳನ್ನು ಹುಣಸೂರು, ಮೈಸೂರು, ಕೆ.ಆರ್.ನಗರ ಸೇರಿದಂತೆ ಹಲವು ಕಡೆ ಮಾರ್ವಾಡಿಗಳ ಬಳಿ, ಫೈನಾನ್ಸ್ ಕಂಪನಿ ಗಳಲ್ಲಿ ಗಿರಿವಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಕಾರ್ಯಾಚರಣೆಯಲ್ಲಿ ಬಿಳಿಕೆರೆ ಎಸ್‍ಐ ಜಯಪ್ರಕಾಶ್, ಎಎಸ್‍ಐ ಸ್ವಾಮಿನಾಯಕ, ಸಿಬ್ಬಂದಿಗಳಾದ ಎಂ.ಡಿ.ತಮ್ಮಣ್ಣ, ಹೆಚ್.ಎನ್. ಅರುಣ, ಪ್ರಸನ್ನಕುಮಾರ್, ಜಿ.ಎಸ್. ಸತೀಶ, ಜಿ.ಎಸ್.ರವಿ, ಟಿ.ಮಹದೇವ, ವೃತ್ತ ನಿರೀಕ್ಷಕರ ಕಚೇರಿ ಸಿಬ್ಬಂದಿ ಪ್ರಸಾದ್, ಚಾಲಕರಾದ ಗೋವಿಂದ, ಚಿಕ್ಕಲಿಂಗು ಭಾಗವಹಿಸಿದ್ದÀರು.

Translate »