ಮಗಳ ಮದುವೆಯಲ್ಲೂ ಸಾರ್ಥಕತೆ ಮೆರೆದ ಗ್ರಾಪಂ ಸದಸ್ಯ
ಮೈಸೂರು

ಮಗಳ ಮದುವೆಯಲ್ಲೂ ಸಾರ್ಥಕತೆ ಮೆರೆದ ಗ್ರಾಪಂ ಸದಸ್ಯ

November 3, 2020

ನೂರಾರು ಕೊರೊನಾ ವಾರಿಯರ್ಸ್‍ಗೆ ಸನ್ಮಾನ

ಮೈಸೂರು, ನ.2(ಎಂಟಿವೈ)- ಕೊರೊನಾ ವಾರಿಯರ್ಸ್‍ಗಳನ್ನು ಸನ್ಮಾನಿಸುವ ಮೂಲಕ ಮೈಸೂರು ತಾಲೂಕಿನ ಬೋಗಾದಿ ಗ್ರಾಪಂ ಸದಸ್ಯರೊಬ್ಬರು ತಮ್ಮ ಪುತ್ರಿಯ ವಿವಾಹ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಬೋಗಾದಿ ಗ್ರಾ.ಪಂ ಸದಸ್ಯ ಎಂ. ನಾಗ ರಾಜು ಹಾಗೂ ಶಶಿಕಲಾ ದಂಪತಿಯ ಪುತ್ರಿ ಎನ್.ರಶ್ಮಿ ಹಾಗೂ ಮಳವಳ್ಳಿ ತಾಲೂಕು ಅಣಸಾಲೆ ಗ್ರಾಮದ ಮಹದೇವಮ್ಮ, ಲೇ. ಗೋಪಾಲ್ ಅವರ ಪುತ್ರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಅರಣ್ಯ ರಕ್ಷಕರಾಗಿ ರುವ ಜಿ.ನವೀನ ಅವರ ವಿವಾಹ ಮಹೋತ್ಸ ವವೇ ವಿಭಿನ್ನ ವಿವಾಹವೆಂಬ ಹೆಗ್ಗಳಿಕೆಗೆ ಪಾತ್ರವಾಗಿ ಕೊರೊನಾ ವಾರಿಯರ್ಸ್‍ಗಳ ಉತ್ಸವ ಎಂಬಂತೆ ಮಾರ್ಪಾಡಾಗಿತ್ತು. ಬೋಗಾದಿ ಯ ಜಿ.ಎಲ್.ಎನ್.ಕನ್ವೆನ್‍ಶನ್ ಹಾಲ್‍ನಲ್ಲಿ ನ.2ರಂದು ನಡೆದ ಎನ್.ರಶ್ಮಿ ಹಾಗೂ ಜಿ.ನವೀನ ವಿವಾಹದಲ್ಲಿ 100ಕ್ಕೂ ಹೆಚ್ಚು ಮಂದಿ ಕೊರೊನಾ ವಾರಿಯರ್ಸ್‍ಗಳನ್ನು ಸನ್ಮಾನಿಸಿ, ವಾರಿಯರ್ಸ್‍ಗಳಿಂದಲೇ ನವ ವಧು-ವರರಿಗೆ ಆಶೀರ್ವದಿಸಲಾಯಿತು.

ಸಾಂಕ್ರಾಮಿಕ ಪಿಡುಗಾಗಿ ಕಾಡುತ್ತಿರುವ ಕೊರೊನಾ ಸೋಂಕಿನ ವಿರುದ್ಧ ಹೋರಾಡು ತ್ತಿರುವ ಎಲ್ಲಾ ವರ್ಗದ ವಾರಿಯರ್ಸ್‍ಗಳನ್ನು ಸನ್ಮಾನಿಸಿದ್ದು ವಿಶೇಷ. ನಾಲ್ವರು ಮಾಜಿ ಸೈನಿಕರು, ಇಬ್ಬರು ಆಸ್ಪತ್ರೆ ಭದ್ರತಾ ಸಿಬ್ಬಂದಿ, 15 ಮಂದಿ ಪೌರ ಕಾರ್ಮಿಕರು, ಸವಿತಾ ಸಮಾಜದ ಒಬ್ಬರು, ಮೂವರು ವಿಶ್ವಕರ್ಮ ಸಮಾಜದವರು, ಮೂವರು ಅಂಗನವಾಡಿ ಕಾರ್ಯಕರ್ತೆಯರು, ಆರು ಮಂದಿ ಆಶಾ ಕಾರ್ಯಕರ್ತೆಯರು, ಇಬ್ಬರು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, 5 ಮಂದಿ ಅಂಚೆ ಇಲಾಖೆ ಸಿಬ್ಬಂದಿ, 10 ಮಂದಿ ಶುಶ್ರೂ ಷಕಿಯರು, ಮೂವರು ಮುಖ್ಯೋಪಾಧ್ಯಾ ಯರು, 26 ಮಂದಿ ವೈದ್ಯರು, 32 ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಗಳು, 11 ಮಂದಿ ಪತ್ರಕರ್ತರು ಹಾಗೂ ವಿಡಿಯೋಗ್ರಾಫರ್ಸ್‍ಗಳನ್ನು ಮದುವೆಯಲ್ಲಿ ಸನ್ಮಾನಿಸಲಾಯಿತು.

ಸಮಾಜ ಸೇವೆ ಮಾಡುವುದೇ ನನ್ನ ತುಡಿತ: ಬೋಗಾದಿ ಗ್ರಾಪಂ ಸದಸ್ಯ, ವಧುವಿನ ತಂದೆ ಎಂ.ನಾಗರಾಜು `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಮೊದಲಿನಿಂದಲೂ ಸಮಾಜ ಸೇವೆ ಮಾಡಿ, ನೊಂದವರ ಪರ ಧ್ವನಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮಗಳ ಮದುವೆಯಲ್ಲಿ ಕೊರೊನಾ ವಾರಿ ಯರ್ಸ್‍ಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ಕೊರೊನಾ ವಾರಿಯರ್ಸ್‍ಗಳ ಸೇವೆ ಅಪರಿ ಮಿತ. ಸಮೀಪದ ಬಡಾವಣೆಯಲ್ಲಿ ಮೂವ ರಿಗೆ ಕೊರೊನಾ ಸೋಂಕು ತಗುಲಿತ್ತು. ಅವರ ಮನೆಯವರೇ ಸೋಂಕಿನಿಂದ ದೂರ ಇದ್ದರು. ಆದರೆ ಪೌರಕಾರ್ಮಿಕರು ಮಾತ್ರ ಸ್ವಚ್ಛಗೊಳಿಸುವ ಕಾಯಕವನ್ನು ಪ್ರತಿದಿನ ಮಾಡುತ್ತಿದ್ದರು. ಕೊರೊನಾ ಸೋಂಕಿನಿಂದ ಸಂಬಂಧಗಳೇ ಹಾಳಾಗಿದೆ. ಇದನ್ನು ಮನ ಗಂಡು ಮಗಳ ಮದುವೆಯನ್ನು ಅದ್ಧೂರಿ ಯಾಗಿ ಮಾಡಲು ಮಾತ್ರ ಸೀಮಿತವಾಗದೆ ಕೊರೊನಾ ವಾರಿಯರ್ಸ್‍ಗಳನ್ನು ಸನ್ಮಾನಿಸುವು ದಾಗಿ ಬೀಗರಿಗೆ ತಿಳಿಸಿದ್ದೆ. ಅದಕ್ಕೆ ಬೀಗರ ಮನೆಯಿಂದಲೂ ಸಹಮತ ವ್ಯಕ್ತವಾಯಿತು. 150ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್ ಗಳನ್ನು ಸನ್ಮಾನಿಸುವ ಉದ್ದೇಶ ನನ್ನಲ್ಲಿತ್ತು. ಅದರಲ್ಲಿ ಕೆಲವರು ಗೈರು ಹಾಜರಾದರು ಎಂದು ತಿಳಿಸಿದರು. ಮಗಳ ಮದುವೆಯಲ್ಲಿ ಕೊರೊನಾ ವಾರಿಯರ್ಸ್‍ಗಳಿಗೆ ಸನ್ಮಾನಿಸು ತ್ತಿರುವ ವಿಷಯವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೆ. ಇದಕ್ಕೆ ಅವರು ಖುಷಿಪಟ್ಟು ನನ್ನನ್ನು ಪ್ರೇರೇಪಿಸಿದರು. ಮೊದಲಿಂದಲೂ ಸಿದ್ದರಾಮಯ್ಯ ಅವರ ಮಾರ್ಗದರ್ಶನ ದಲ್ಲಿಯೇ ಸಮಾಜಮುಖಿ ಕೆಲಸ ಮಾಡಿ ಕೊಂಡು ಬಂದಿದ್ದೇನೆ. ಲಾಕ್‍ಡೌನ್ ಅವಧಿ ಯಲ್ಲೂ ನನ್ನ ಫ್ಲೋರ್ ಮಿಲ್‍ನಲ್ಲಿ ಎರಡು ತಿಂಗಳ ಕಾಲ ಉಚಿತ ಸೇವೆ ನೀಡಿದ್ದೇನೆ. ಅಲ್ಲದೆ ಮದುವೆ ಆಹ್ವಾನ ನೀಡಿದ್ದವರಿಗೆ ಉಡುಗೊರೆ ತರದಂತೆ ವಿಶೇಷ ಸೂಚನೆ ನೀಡಲಾಗಿತ್ತು. ಕೆಲವರು ಉಡುಗೊರೆ ತಂದಿ ದ್ದರು. ಆದರೆ ಅದನ್ನು ನಾವು ಸ್ವೀಕರಿಸದೆ ವಾಪಸ್ಸು ಕಳುಹಿಸಿದ್ದೇವೆ. ಸಂಕಷ್ಟದಲ್ಲೂ ಅವಿರತ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್‍ಗಳಿಂದ ನವ ವಧು-ವರರಿಗೆ ಆಶೀರ್ವಾದ ದೊರೆತಿರುವುದು ಸಂತಸ ತಂದಿದೆ ಎಂದು ವಿವರಿಸಿದರು.

 

 

 

Translate »