ಮೈಸೂರು ಗ್ರಾಮಾಂತರ

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಸೇವೆ ಅನನ್ಯ
ಮೈಸೂರು ಗ್ರಾಮಾಂತರ

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಸೇವೆ ಅನನ್ಯ

January 21, 2020

ನಂಜನಗೂಡು, ಜ.20(ರವಿ)- ಹನ್ನೊಂದು ವರ್ಷಗಳಿಂದ ಉಚಿತವಾಗಿ ಯೋಗ, ಧ್ಯಾನ ಹಾಗೂ ಆಧ್ಯಾತ್ಮವನ್ನು ನಿರಂತರವಾಗಿ ಕಲಿಸುವ ಮೂಲಕ ಸಂಸ್ಕಾರ ಯುತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅನನ್ಯ ಸೇವೆ ಸಲ್ಲಿಸುತ್ತಿದೆ ಎಂದು ಉದ್ಯಮಿ ಉಮೇಶ್ ಶರ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಹೌಸಿಂಗ್ ಬೋರ್ಡ್ ಕಾಲೋನಿ ಯಲ್ಲಿರುವ ಯೋಗ ಮಹಾಮನೆಯಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ನಂಜನಗೂಡು ಶಾಖೆಯ 11ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಯುವ ಸಮುದಾಯವನ್ನು ಸರಿದಾರಿ ಯಲ್ಲಿ ನಡೆಸುವ ಹಾಗೂ ಆರೋಗ್ಯವಂತ…

ಪಿಎಲ್‍ಡಿ ಬ್ಯಾಂಕ್ ಎದುರು ರೈತರ ಪ್ರತಿಭಟನೆ
ಮೈಸೂರು ಗ್ರಾಮಾಂತರ

ಪಿಎಲ್‍ಡಿ ಬ್ಯಾಂಕ್ ಎದುರು ರೈತರ ಪ್ರತಿಭಟನೆ

January 19, 2020

ತಿ.ನರಸೀಪುರ, ಜ.18(ಎಸ್‍ಕೆ)-ತಾಲೂಕು ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್(ಪಿಕಾರ್ಡ್@ ಪಿಎಲ್‍ಡಿ) ಅಧಿಕಾರಿಗಳು ಸಾಲ ವಸೂಲಾತಿಗಾಗಿ ರೈತರ ಮನೆ ಬಾಗಿಲಿಗೆ ತೆರಳಿ ಅಸಭ್ಯವಾಗಿ ವರ್ತಿ ಸುತ್ತಿರುವುದಾಗಿ ಆರೋಪಿಸಿ ಕಬ್ಬು ಬೆಳೆಗಾರರ ಸಂಘದ ನೇತೃತ್ವ ದಲ್ಲಿ ರೈತರು ಶನಿವಾರ ಪ್ರತಿಭಟಿಸಿದರು. ಪಟ್ಟಣದ ಪಿಕಾರ್ಡ್ @ ಪಿಎಲ್‍ಡಿ ಬ್ಯಾಂಕ್ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಬ್ಯಾಂಕ್‍ಗೆ ಬೀಗ ಜಡಿದು ಘೋಷಣೆ ಕೂಗಿದರು. ರೈತರೊಂದಿಗೆ ಅಸಭ್ಯವಾಗಿ ವರ್ತಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಉದ್ದೇಶಿಸಿ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರ…

ಸಲಗ ದಾಳಿ: ಹಸುವಿಗೆ ತೀವ್ರ ಗಾಯ
ಮೈಸೂರು ಗ್ರಾಮಾಂತರ

ಸಲಗ ದಾಳಿ: ಹಸುವಿಗೆ ತೀವ್ರ ಗಾಯ

January 19, 2020

ಹುಣಸೂರು, ಜ.18(ಹೆಚ್‍ಎಸ್‍ಎಂ)-ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಕಿಕ್ಕೇರಿಕಟ್ಟೆ ಗ್ರಾಮದಲ್ಲಿ ಒಂಟಿ ಸಲಗ ಹಸುವೊಂದರ ಮೇಲೆ ದಾಳಿ ನಡೆಸಿದೆ. ಗ್ರಾಮದ ಪ್ರಕಾಶ್ ಅವರಿಗೆ ಸೇರಿದ ಹಸು ಸಲಗ ದಾಳಿಯಿಂದ ಗಂಭೀರವಾಗಿ ಗಾಯ ಗೊಂಡಿದೆ. ಶುಕ್ರವಾರ ರಾತ್ರಿ ಉದ್ಯಾನದ ಹುಣ ಸೂರು ವಲಯದ ಅರಣ್ಯ ಪ್ರದೇಶದಿಂದ ನಾಡಿನತ್ತ ಬಂದಿರುವ ಶಂಕೆ ಇದ್ದು, ತಡರಾತ್ರಿ  ಪ್ರಕಾಶ್ ಮನೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ದಂತದಿಂದ ತಿವಿದಿದೆ. ಇದರಿಂದ ಕರುಳು ದೇಹದ ಹೊರ…

ಸರ್ಕಾರಿ ಆಸ್ಪತ್ರೆಗೆ ಕನ್ನ: ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ಉಪಕರಣಗಳ ಕಳವು
ಮೈಸೂರು ಗ್ರಾಮಾಂತರ

ಸರ್ಕಾರಿ ಆಸ್ಪತ್ರೆಗೆ ಕನ್ನ: ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ಉಪಕರಣಗಳ ಕಳವು

January 19, 2020

ತಿ.ನರಸೀಪುರ, ಜ.18(ಎಸ್‍ಕೆ)-ಆಸ್ಪತ್ರೆಯ ಬೀಗ ಮುರಿದು ಲಕ್ಷಾಂತರ ರೂ.ಮೌಲ್ಯದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಕಳವು ಮಾಡಿರುವ ಘಟನೆ ತಾಲೂಕಿನ ಕುಪ್ಯ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಕುಪ್ಯ ಗ್ರಾಮದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳವು ನಡೆದಿದೆ. ಆಸ್ಪತ್ರೆಯ ಬೀಗ ಮುರಿದಿರುವ ಕಳ್ಳರು ಒಂದು ಲಕ್ಷ ರೂ. ಮೌಲ್ಯದ ಕಂಪ್ಯೂಟರ್, ಯುಪಿಎಸ್, ಟಿ.ವಿ, ಜೆರಾಕ್ಸ್ ಮೆಷಿನ್, ಪ್ರಿಂಟರ್ ಸೇರಿದಂತೆ ಹಲವು ಬೆಲೆ ಬಾಳುವ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಪಟ್ಟಣ ಠಾಣೆ ಪೆÇಲೀಸರು ಸ್ಥಳ ಪರಿಶೀಲಿಸಿದರು. ಶ್ವಾನದಳ…

ಕೆರೆಯಲ್ಲಿ ಮುಳುಗಿ ಬಾಲಕ ಸಾವು
ಮೈಸೂರು ಗ್ರಾಮಾಂತರ

ಕೆರೆಯಲ್ಲಿ ಮುಳುಗಿ ಬಾಲಕ ಸಾವು

January 19, 2020

ಹುಣಸೂರು, ಜ.18(ಹೆಚ್‍ಎಸ್‍ಎಂ)- ಅಜ್ಜಿ ಮನೆಗೆ ಬಂದಿದ್ದ ಬಾಲಕನೋರ್ವ ಸ್ನೇಹಿತರೊಂದಿಗೆ ಕೆರೆಯಲ್ಲಿ ಆಟವಾಡಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಮ್ಮಿಗೆ ಕಾಲೋನಿಯಲ್ಲಿ ನಡೆದಿದೆ. ತಾಲೂಕಿನ ಹನಗೋಡು ಹೋಬಳಿಯ ಪಂಚವಳ್ಳಿ ಗ್ರಾಮದ ಪರಮೇಶ್-ರೇಷ್ಮಾ ದಂಪತಿ ಪುತ್ರ ಅಖಿಲ್(9) ಸಾವನ್ನಪ್ಪಿದ ಬಾಲಕ. ಈತ ಪಂಚವಳ್ಳಿ ಶಾಲೆಯ 3ನೇ ತರಗತಿ ವಿದ್ಯಾರ್ಥಿ. ಸಂಕ್ರಾಂತಿ ಹಬ್ಬಕ್ಕೆ ಅಜ್ಜಿ ಮನೆಗೆ ಬಂದಿದ್ದ. ಶನಿವಾರ ಮಧ್ಯಾಹ್ನ ಸಹಪಾಠಿ ಗಳೊಂದಿಗೆ ಆಟವಾಡಲು ತೆರಳಿದ್ದ ವೇಳೆ ಗ್ರಾಮದ ಕೆರೆಯಲ್ಲಿ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದ ತಕ್ಷಣ…

ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ಚೇತನ ಬಸವಣ್ಣ
ಮೈಸೂರು ಗ್ರಾಮಾಂತರ

ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ಚೇತನ ಬಸವಣ್ಣ

January 13, 2020

ಬನ್ನೂರು, ಜ12(ಪ್ರಭು)-12ನೇ ಶತಮಾನದಲ್ಲಿ ಸಮಾನತೆ, ಅಕ್ಷರ ಕ್ರಾಂತಿ, ವಚನ ಕ್ರಾಂತಿ, ಅನ್ನದಾಸೋಹದಂತಹ ಕಾರ್ಯಕ್ರಮವನ್ನು ನೀಡುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ಚೇತನ ಬಸವಣ್ಣನವರು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು. ಪಟ್ಟಣದ ಬಸ್‍ನಿಲ್ದಾಣದ ಸಮೀಪದಲ್ಲಿ ನೂತನ ಬಸವ ಭವನ ಉದ್ಘಾಟನೆ ಹಾಗೂ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಳಮಟ್ಟದಿಂದ ಮೇಲ್ವರ್ಗವರೆಗೆ ಎಲ್ಲರನ್ನು ಸಮಾನವಾಗಿ ಕಾಣುವ ಮೂಲಕ ಬಸವಣ್ಣನವರು ಅಸ್ಪøಶ್ಯದಂತ ಅನಿಷ್ಟ ಪದ್ಧತಿಯ ನಿರ್ಮೂಲನಕ್ಕೆ ನಾಂದಿ ಹಾಡಿದರು. ತಮ್ಮ ವಚನದ ಸಮಾಜದ ಬದಲಾವಣೆಗೆ ಶ್ರಮಿಸಿದರು…

ಭೀಮಾ ಕೋರೆಗಾಂವ್ ವಿಜಯೋತ್ಸವ ಜಾಗೃತಿ ಸಮಾವೇಶ
ಮೈಸೂರು ಗ್ರಾಮಾಂತರ

ಭೀಮಾ ಕೋರೆಗಾಂವ್ ವಿಜಯೋತ್ಸವ ಜಾಗೃತಿ ಸಮಾವೇಶ

January 13, 2020

ಧರ್ಮದ ಹೆಸರಿನಲ್ಲಿ ಕಂದಕ ಸೃಷ್ಟಿ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮಿಜೀ ವಿಷಾದ ನಂಜನಗೂಡು 12- ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಕಂದಕ ಸೃಷ್ಟಿಸಲಾಗುತ್ತಿದೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದರು. ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಪ್ರಯುಕ್ತ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಬೃಹತ್ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಶೇ.3ರಷ್ಟು ಇರುವ ಜನರು ಸಂವಿಧಾನದ ಆಶಯಗಳಿಗೆ ಅಪಚಾರ ಎಸಗಿ ಶಾಸನ ರೂಪಿಸುವ ಜಾಗದಲ್ಲಿದ್ದು, ಪ್ರಬುದ್ಧವಾಗಿರುವ ಭಾರತವನ್ನು…

ಆಯುಷ್ಮಾನ್ ಭಾರತ್ ಕರ್ನಾಟಕ ಆರೋಗ್ಯ ಕಾರ್ಡ್ ವಿತರಣೆ
ಮೈಸೂರು ಗ್ರಾಮಾಂತರ

ಆಯುಷ್ಮಾನ್ ಭಾರತ್ ಕರ್ನಾಟಕ ಆರೋಗ್ಯ ಕಾರ್ಡ್ ವಿತರಣೆ

January 13, 2020

ಹುಣಸೂರು, ಜ.12(ಕೆಕೆ)-ತಾಲೂಕಿನ ಹನಗೂಡು ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಪಿ.ಮಂಜುನಾಥ್ ನೋಂದಾಯಿತ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಕರ್ನಾಟಕ ಆರೋಗ್ಯ ಕಾರ್ಡ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ತಾಲೂಕಿನ 41 ಗ್ರಾಪಂನಲ್ಲಿಯೂ ಕೂಡ ಆಯುಷ್ಮಾನ್ ಭಾರತ್ ಕರ್ನಾಟಕ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ. 35 ರೂ. ನೀಡಿ ಕಾರ್ಡ್ ಪಡೆಯಬಹುದಾಗಿದೆ. ಎಲ್ಲರೂ ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಹನಗೋಡು ವ್ಯಾಪ್ತಿಯಲ್ಲಿ ಪ್ರಮುಖವಾಗಿ ಕಾಲೇಜು ಅಭಿವೃದ್ಧಿ, ಸೂಕ್ತ ಬಸ್ ನಿಲ್ದಾಣ ನಿರ್ಮಾಣವಾಗಬೇಕಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು…

1 16 17 18
Translate »