ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಸೇವೆ ಅನನ್ಯ
ಮೈಸೂರು ಗ್ರಾಮಾಂತರ

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಸೇವೆ ಅನನ್ಯ

January 21, 2020

ನಂಜನಗೂಡು, ಜ.20(ರವಿ)- ಹನ್ನೊಂದು ವರ್ಷಗಳಿಂದ ಉಚಿತವಾಗಿ ಯೋಗ, ಧ್ಯಾನ ಹಾಗೂ ಆಧ್ಯಾತ್ಮವನ್ನು ನಿರಂತರವಾಗಿ ಕಲಿಸುವ ಮೂಲಕ ಸಂಸ್ಕಾರ ಯುತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅನನ್ಯ ಸೇವೆ ಸಲ್ಲಿಸುತ್ತಿದೆ ಎಂದು ಉದ್ಯಮಿ ಉಮೇಶ್ ಶರ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಹೌಸಿಂಗ್ ಬೋರ್ಡ್ ಕಾಲೋನಿ ಯಲ್ಲಿರುವ ಯೋಗ ಮಹಾಮನೆಯಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ನಂಜನಗೂಡು ಶಾಖೆಯ 11ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಯುವ ಸಮುದಾಯವನ್ನು ಸರಿದಾರಿ ಯಲ್ಲಿ ನಡೆಸುವ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ದಿಶೆಯಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಸೇವಾ ಕಾರ್ಯ ಮಾದರಿಯಾಗಿದೆ. ನಂಜನ ಗೂಡನ್ನು ಯೋಗ ನಗರಿಯನ್ನಾಗಿ ಮಾಡು ತ್ತಿರುವ ಸಮಿತಿಯ ಆಶಯಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದರು.

ಹಿರಿಯ ಪತ್ರಕರ್ತ ಎಂ.ಎನ್.ಮೋಹನ್ ಕುಮಾರ್ ಮಾತನಾಡಿದರು. ಕಾರ್ಯ ಕ್ರಮದಲ್ಲಿ ವಿವಿಧ ಶಾಲೆಗಳ 50 ಪ್ರತಿ ಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸ ಲಾಯಿತು. ಸಮಿತಿ ವ್ಯಾಪ್ತಿಗೆ ಬರುವ ಮಹಾ ಮನೆ, ಸುಶ್ರುತಾ, ಕಪಿಲಾ, ಕಾವೇರಿ, ಅಕ್ಕ ಮಹಾದೇವಿ, ಸರಸ್ವತಿ ಹಾಗೂ ಯಮುನಾ ಶಾಖೆಯ ಯೋಗಬಂಧುಗಳು ಯೋಗ ಪ್ರದರ್ಶಿಸಿದರು. ಮಾತೃಭೋಜನ ಕಾರ್ಯ ಕ್ರಮದಲ್ಲಿ 25ಕ್ಕೂ ಹೆಚ್ಚು ಮಹಿಳೆಯರು ಬಗೆಬಗೆಯ ತಿನಿಸುಗಳನ್ನು ಕೈತುತ್ತಿನ ಮೂಲಕ ಉಣಬಡಿಸಿದರು. ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ. ರೇವಣ್ಣ, ಕಾರ್ಯದರ್ಶಿ ಗಣೇಶ್‍ಮೂರ್ತಿ, ಮಹಾಗುರು ಪ್ರಕಾಶ್, ಉದ್ಯಮಿ ಸುಕುಮಾರ್ ಉಪಸ್ಥಿತರಿದ್ದರು.

Translate »