ರಾಜ್ಯ ಬಜೆಟ್‍ನಲ್ಲಿ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಅನುದಾನ ಕೋರಿಕೆ
ಮೈಸೂರು

ರಾಜ್ಯ ಬಜೆಟ್‍ನಲ್ಲಿ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಅನುದಾನ ಕೋರಿಕೆ

February 12, 2021

ಮೈಸೂರು, ಫೆ.11(ಆರ್‍ಕೆ)-ಕೈಗಾರಿಕೆ, ಹೋಟೆಲ್, ಟ್ರಾವೆಲ್ಸ್, ಪ್ರವಾಸೋದ್ಯಮ ಸೇರಿದಂತೆ ಮೈಸೂರಿನ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‍ನಲ್ಲಿ ಅನುದಾನ ಮೀಸಲಿಡುವಂತೆ ವಿವಿಧ ಸಂಘ-ಸಂಸ್ಥೆಗಳು ಫೆಬ್ರವರಿ 13ರಂದು ಮೈಸೂರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಿವೆ ಎಂದು ಮಾಜಿ ಶಾಸಕ ವಾಸು ತಿಳಿಸಿದ್ದಾರೆ.

ಮೈಸೂರಿನ ಸಿದ್ಧಾರ್ಥ ಹೋಟೆಲಿನಲ್ಲಿ ಇಂದು ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಶನಿವಾರ ಸಂಜೆ ಕಲಾಮಂದಿರದಲ್ಲಿ ಏರ್ಪಡಿಸಿರುವ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಕೈಗಾರಿಕೆಗಳಿಗೆ ತಡರಹಿತ ವಿದ್ಯುತ್ ಸರಬರಾಜು, ನೀರು ಪೂರೈಕೆ, ಫುಡ್ ಪಾರ್ಕ್, ಟೆಕ್ಸ್‍ಟೈಲ್, ಐಟಿ ಪಾರ್ಕ್, ಕೈಗಾರಿಕೆಗಳನ್ನು ನಡೆಸಲು ಪಡೆದ ಸಾಲದ ಮೇಲಿನ ಬಡ್ಡಿ ದರ ಕಡಿತ, ಹುಣಸೂರು ಹೆದ್ದಾರಿ ಮತ್ತು ಹೆಚ್.ಡಿ. ಕೋಟೆ ರಸ್ತೆಯಲ್ಲಿ ಕೈಗಾರಿಕೆ ಸ್ಥಾಪನೆಗೆ 3 ಸಾವಿರ ಹೆಕ್ಟೇರ್ ಭೂಮಿಯನ್ನು ಮೀಸಲಿರಿಸಬೇಕೆಂಬ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕಾತ್ನಿ ಅಸೋಸಿಯೇಷನ್: ಕೃಷಿ ಸಂಬಂಧಿತ ಅಗ್ರೋ ಪ್ರೋಸೆಸ್ ಇಂಡಸ್ಟ್ರಿಗಳಿಗೆ ಶೇ.35ರಷ್ಟು ರಿಯಾಯಿತಿ ನೀಡು ತ್ತಿದ್ದ ಕೈಗಾರಿಕಾ ನೀತಿಯನ್ನು ಅಮಾನತು ಮಾಡಿರು ವುದರಿಂದ ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗಿದ್ದು, ಅದನ್ನು ಮತ್ತೆ ಜಾರಿಗೊಳಿಸಬೇಕು ಹಾಗೂ ನಂಜನಗೂಡು ಭಾಗದ ಕೈಗಾರಿಕಾ ಪ್ರದೇಶಗಳ ಉದ್ಯಮಗಳು ಹಾಗೂ ಕಾರ್ಮಿಕರ ರಕ್ಷಣೆಗಾಗಿ ಪ್ರತ್ಯೇಕ ಪೊಲೀಸ್ ಠಾಣೆ ಅಥವಾ ಔಟ್‍ಪೋಸ್ಟ್ ಸ್ಥಾಪಿಸಿ ಪೆಟ್ರೋಲಿಂಗ್ ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ಕಾತ್ನಿ ಇಂಡಸ್ಟ್ರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಹೆಚ್.ರಾಮಕೃಷ್ಣೇಗೌಡ ತಿಳಿಸಿದ್ದಾರೆ.
ಟ್ರಾವೆಲ್ಸ್ ಅಸೋಸಿಯೇಷನ್: ಹೊರ ರಾಜ್ಯಗಳಿಂದ ಬರುವ ಪ್ರವಾಸಿ ವಾಹನಗಳ ದುಬಾರಿ ¥
À್ರವೇಶ ತೆರಿಗೆ (ಇಟಿಣಡಿಥಿ ಖಿಚಿx)ಯನ್ನು ಕಡಿಮೆ ಮಾಡಬೇಕು. ಪ್ರಸ್ತುತ ತೆರಿಗೆಯಿಂದ ಪ್ರವಾಸೋದ್ಯಮಕ್ಕೆ ತೊಂದರೆಯಾಗಿದೆ ಎಂದ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಕಾರ್ಯ ದರ್ಶಿ ಜಯಕುಮಾರ, ಉತ್ತರ ಭಾರತದ ರಾಜ್ಯಗಳಂತೆ ದಕ್ಷಿಣದಲ್ಲೂ ಏಕ ರೂಪದ ಪ್ರವೇಶ ತೆರಿಗೆಯನ್ನು ನಿಗದಿ ಪಡಿಸಬೇಕೆಂಬ ಮನವಿ ಪತ್ರ ಸಲ್ಲಿಸುತ್ತೇವೆ ಎಂದರು.

ಹೋಟೆಲ್ ಅಸೋಸಿಯೇಷನ್: ಮೈಸೂರು ದಸರಾ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಪ್ರಾಧಿಕಾರಗಳನ್ನು ರಚಿಸಬೇಕು. ಪ್ರವಾಸಿ ವಾಹನಗಳ ಎಂಟ್ರಿ ಟ್ಯಾಕ್ಸಿ ಕಡಿತ ಗೊಳಿಸಬೇಕು ಹಾಗೂ ಸಿಆರ್ ನೀಡಿದ ಕಟ್ಟಡಗಳಿಗೆ ಮೂರರಷ್ಟು ತೆರಿಗೆ ಪಡೆಯುತ್ತಿರುವ ಪಾಲಿಕೆಯು, ಕಟ್ಟಡಗಳಿಗೆ ಸಿಆರ್ ನೀಡಲು ಸರ್ಕಾರ ನಿರ್ದೇಶನ ನೀಡಬೇಕು ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡರು ತಿಳಿಸಿದ್ದಾರೆ.

ಎಂಸಿಸಿಐ: ರಿಂಗ್ ರಸ್ತೆಯ ರೈಲ್ವೇ ಕೆಳ ಸೇತುವೆ (ಖUಃ) ಗಳನ್ನು ವಿಸ್ತರಿಸಬೇಕು. ಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ಕಾರ್ಪಸ್ ನಿಧಿ ಸ್ಥಾಪಿಸಿ, ಆ ಹಣವನ್ನು ಕೈಗಾರಿಕೆಗಳ ಪುನಶ್ಚೇತನಕ್ಕೆ ಬಳಸುವಂತೆ ನಾವು ಮನವಿ ಮಾಡುತ್ತೇವೆ ಎಂದು ಮೈಸೂರು ವಾಣ ಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎ.ಎಸ್.ಸತೀಶ್ ತಿಳಿಸಿದರು.

ಸಾಹಿತ್ಯ ಪರಿಷತ್ತು: ಪ್ರವಾಸಿ ತಾಣಗಳ ಕುರಿತ ಪುಸ್ತಕ ಬಿಡುಗಡೆ ವೇಳೆ ಮೈಸೂರಿನ ಸಮಗ್ರ ಅಭಿವೃದ್ಧಿಗಾಗಿ ಬಜೆಟ್‍ನಲ್ಲಿ ಅನುದಾನ ಮೀಸಲಿರಿಸುವ ಬಗ್ಗೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ಹೇಳಿದರು.

Translate »