Tag: Mysore

ವಿಶ್ವಾಸಮತ ಯಾಚನೆಗೆ ಇಂದು ಮಧ್ಯಾಹ್ನ 1.30ರ ಗಡುವು
ಮೈಸೂರು

ವಿಶ್ವಾಸಮತ ಯಾಚನೆಗೆ ಇಂದು ಮಧ್ಯಾಹ್ನ 1.30ರ ಗಡುವು

ಇಂದು ರಾತ್ರಿ ರಾಜಭವನದಿಂದ ಮುಖ್ಯ ಮಂತ್ರಿಗಳಿಗೆ ರಾಜ್ಯಪಾಲರಿಂದ ಮೂರು ಪುಟಗಳ ಅಧಿಕೃತ ಪತ್ರ ರವಾನೆಯಾ ಗಿದ್ದು, 224 ಶಾಸಕರ ಬಲ ಹೊಂದಿರುವ ವಿಧಾನಸಭೆಯಲ್ಲಿ 117 ಶಾಸಕರ ಬೆಂಬಲದಿಂದ ನೀವು ಸರ್ಕಾರ ರಚಿಸಿದ್ದೀರಿ. ಜು.1ರಂದು ಕಾಂಗ್ರೆಸ್‍ನ ಆನಂದ್‍ಸಿಂಗ್, ಜು.6 ರಂದು ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಜೆಡಿಎಸ್‍ನ ಗೋಪಾಲಯ್ಯ, ಎ.ಹೆಚ್. ವಿಶ್ವನಾಥ್, ನಾರಾಯಣಗೌಡ, ಕಾಂಗ್ರೆಸ್‍ನ ಭೈರತಿ ಬಸವರಾಜು, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಬಾರ್, ಮುನಿರತ್ನ, ರೋಷನ್‍ಬೇಗ್, ಜು.10ರಂದು ಡಾ. ಕೆ. ಸುಧಾಕರ್, ಎಂಟಿಬಿ ನಾಗರಾಜು, ಪ್ರತಾಪ್‍ಗೌಡ ಪಾಟೀಲ್ ಮತ್ತು…

ರಾಜ್ಯಪಾಲರ ಆದೇಶ ಧಿಕ್ಕರಿಸಿದರೆ ಸರ್ಕಾರದ ಅಮಾನತಿಗೆ ಸಿದ್ಧತೆ
ಮೈಸೂರು

ರಾಜ್ಯಪಾಲರ ಆದೇಶ ಧಿಕ್ಕರಿಸಿದರೆ ಸರ್ಕಾರದ ಅಮಾನತಿಗೆ ಸಿದ್ಧತೆ

ಬೆಂಗಳೂರು, ಜು.18(ಕೆಎಂಶಿ, ಎಸಿಪಿ)- ರಾಜ್ಯಪಾಲರ ಸೂಚನೆಯಂತೆ ನಾಳೆ (ಜು.19) ಮಧ್ಯಾಹ್ನದೊಳಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸರ್ಕಾರವನ್ನು ಅಮಾನತುಪಡಿಸಿ, ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿ ಮಾಡಲು ಅಗತ್ಯವಿರುವ ಸಿದ್ಧತೆಗಳು ರಾಜಭವನದಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದರೂ ಆಡಳಿತದಲ್ಲಿ ಮುಂದುವರೆಯುತ್ತಿರುವುದರಿಂದ ರಾಜ್ಯದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ ಎಂಬ ಕಾರಣವನ್ನು ಮುಂದಿಟ್ಟು, ರಾಜ್ಯ ಪಾಲರು ತಮ್ಮ ಅಧಿಕಾರವನ್ನು ಚಲಾಯಿಸಿ ಸರ್ಕಾರದ ಅಮಾನತಿಗೆ ಶಿಫಾರಸು ಮಾಡಲು ಎಲ್ಲಾ ಸಿದ್ಧತೆಗಳು ನಡೆದಿವೆ ಎಂದು ಹೇಳಲಾಗಿದೆ….

ವಿಧಾನಸಭೆಯಲ್ಲೇ ಬಿಜೆಪಿ ಶಾಸಕರ ಅಹೋರಾತ್ರಿ ಧರಣಿ
ಮೈಸೂರು

ವಿಧಾನಸಭೆಯಲ್ಲೇ ಬಿಜೆಪಿ ಶಾಸಕರ ಅಹೋರಾತ್ರಿ ಧರಣಿ

ಬೆಂಗಳೂರು, ಜು.18- ತಕ್ಷಣವೇ ಸದನದಲ್ಲಿ ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚಿಸಬೇಕೆಂದು ಆಗ್ರಹಿಸಿ ಬಿಜೆಪಿ ಶಾಸಕರು ಇಂದು ರಾತ್ರಿ ವಿಧಾನಸಭೆಯಲ್ಲೇ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸ ಲಾಗಿದ್ದು, ಊಟದ ನಂತರ ಶಾಸಕರು ವಿಧಾನಸೌಧದ ಮುಂದೆ ವಾಯುವಿಹಾರ ನಡೆಸಿದರು. ಇಂದು ಬೆಳಿಗ್ಗೆ ಸದನ ಆರಂಭ ವಾದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದರು. ಆ ವೇಳೆ ಪ್ರಸ್ತಾವನೆ ಮೇಲೆ ಚರ್ಚೆ ನಡೆಸಲು ಸ್ಪೀಕರ್ ರಮೇಶ್‍ಕುಮಾರ್ ಅವಕಾಶ ನೀಡಿದರು. ಮುಖ್ಯಮಂತ್ರಿಗಳು ಮಾತನಾಡುತ್ತಿರುವಂತೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ…

ಬಿಜೆಪಿ ಅಸ್ತ್ರಕ್ಕೆ ದೋಸ್ತಿ `ವಿಪ್’ ಪ್ರತ್ಯಸ್ತ್ರ: ಕಲಾಪ ಕಾಲಹರಣ
ಮೈಸೂರು

ಬಿಜೆಪಿ ಅಸ್ತ್ರಕ್ಕೆ ದೋಸ್ತಿ `ವಿಪ್’ ಪ್ರತ್ಯಸ್ತ್ರ: ಕಲಾಪ ಕಾಲಹರಣ

ಬೆಂಗಳೂರು, ಜು.18(ಕೆಎಂಶಿ)- ಕಾಂಗ್ರೆಸ್-ಜೆಡಿಎಸ್‍ನ 15 ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥಗೊಳ್ಳುವವರೆಗೂ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಬಾರದು ಎಂದು ಸಿಎಲ್‍ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಎತ್ತಿದ ಕ್ರಿಯಾಲೋಪ ಇಂದು ಇಡೀ ದಿನದ ಕಲಾಪವನ್ನೇ ಬಲಿ ತೆಗೆದುಕೊಂಡಿತು. ಸಿದ್ದರಾಮಯ್ಯ ಅವರ ಕ್ರಿಯಾಲೋಪ ಅಂಗೀಕರಿಸಬೇಕೇ ಇಲ್ಲ ತಿರಸ್ಕರಿಸಬೇಕೇ ಅಥವಾ ಸುಪ್ರೀಂಕೋರ್ಟ್‍ನಲ್ಲೇ ಶಾಸಕರ ರಾಜೀನಾಮೆಯ ಸಂಶಯವನ್ನು ನಿವಾರಿಸಿಕೊಳ್ಳಬೇಕೇ ಎಂಬ ಬಗ್ಗೆ ರಾಜ್ಯ ಅಡ್ವೊಕೇಟ್ ಜನರಲ್ ಅವರಿಂದ ಮಾಹಿತಿ ಪಡೆದು, ನಂತರ ನಾನು ನಿರ್ಧಾರ ಪ್ರಕಟಿಸುತ್ತೇನೆ ಎಂಬ ನಿರ್ಧಾರಕ್ಕೆ ಸ್ಪೀಕರ್ ರಮೇಶ್…

ಮೈಸೂರು ಅರಮನೆಯಲ್ಲಿ ಶ್ರೀಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಆಚರಣೆ
ಮೈಸೂರು

ಮೈಸೂರು ಅರಮನೆಯಲ್ಲಿ ಶ್ರೀಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಆಚರಣೆ

ಮೈಸೂರು,ಜು.18(ಎಂಟಿವೈ)- ಅಧಿಕಾರ ಪಡೆಯಲು ಹಾಗೂ ಕೈಯಲ್ಲಿರುವ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುವವರು ಮೈಸೂರು ಸಂಸ್ಥಾನದ ಕೊನೆಯ ಅರಸ ಜಯಚಾಮರಾಜ ಒಡೆಯರ್ ಅವರ ಆದರ್ಶ ಅರ್ಥೈಸಿಕೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಅರಮನೆ ದರ್ಬಾರ್ ಹಾಲ್ ನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆ ಯರ್ ಫೌಂಡೇಶನ್ ವತಿಯಿಂದ ಗುರು ವಾರ ನಡೆದ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಹಲವು ರಾಜಮನೆತನಗಳನ್ನು ಕಂಡ ದೇಶವಾಗಿದೆ….

ಒಡೆಯರ್ ಸಂಗೀತ ಪ್ರೀತಿ ನೆನೆದ ಸತ್ಯವತಿ
ಮೈಸೂರು

ಒಡೆಯರ್ ಸಂಗೀತ ಪ್ರೀತಿ ನೆನೆದ ಸತ್ಯವತಿ

ಮೈಸೂರು,ಜು.18(ವೈಡಿಎಸ್)-ಜಯ ಚಾಮರಾಜ ಒಡೆಯರ್ ಅವರು ಕರ್ನಾ ಟಕ ಸಂಗೀತದ ಮೇಲೆ ಅಪಾರ ಹಿಡಿತ ಹೊಂದಿದ್ದರು ಎಂದು ಸಂಗೀತ ವಿದ್ವಾಂಸೆ ಡಾ.ಟಿ.ಎಸ್.ಸತ್ಯವತಿ ತಿಳಿಸಿದರು. ಮೈಸೂರು ಅರಮನೆಯ ದರ್ಬಾರ್ ಹಾಲ್‍ನಲ್ಲಿ ಆಯೋಜಿಸಿದ್ದ ಜಯಚಾಮ ರಾಜ ಒಡೆಯರ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಸಂಗೀತ ಕಾರ್ಯಕ್ರಮ ದಲ್ಲಿ ಜಯಚಾಮರಾಜ ಒಡೆಯರ್ ಅವರ ಸಂಗೀತ ಸಂಯೋಜನೆಗಳನ್ನು ಕುರಿತು ಮಾತನಾಡಿ, ಜಯಚಾಮರಾಜ ಒಡೆ ಯರ್ ಅವರು ಪಾಶ್ಚಾತ್ಯ ಹಾಗೂ ಕರ್ನಾ ಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮಹ ತ್ವದ ಸಾಧನೆ ಮಾಡಿದ್ದು, 94 ಸಂಗೀತ ಕೃತಿಗಳನ್ನು…

ಇಂದಿನಿಂದ ಗೋವಾ, ಕೊಚ್ಚಿನ್, ಹೈದರಾಬಾದ್‍ಗೆ ವಿಮಾನ ಹಾರಾಟ
ಮೈಸೂರು

ಇಂದಿನಿಂದ ಗೋವಾ, ಕೊಚ್ಚಿನ್, ಹೈದರಾಬಾದ್‍ಗೆ ವಿಮಾನ ಹಾರಾಟ

ಮೈಸೂರು, ಜು.18(ಎಸ್‍ಬಿಡಿ)- ಮೈಸೂ ರಿನಿಂದ ಕೊಚ್ಚಿ, ಗೋವಾ ಹಾಗೂ ಹೈದರಾಬಾದ್‍ಗೆ ನಾಳೆ(ಜು.19)ಯಿಂದ ವಿಮಾನ ಹಾರಾಟ ಆರಂಭವಾಗಲಿದೆ. ಉಡಾನ್-3 ಯೋಜನೆಯಡಿ ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆ ಈ ಸೇವೆ ಒದಗಿಸುತ್ತಿದ್ದು, ಎಟಿಆರ್ 72 ಆಸನಗಳ ವಿಮಾನ ವಿವಿಧ ನಗರಗಳನ್ನು ಸಂಪರ್ಕಿಸಲಿದೆ. ಇದರೊಂದಿಗೆ ಮೈಸೂ ರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ದಿನವಿಡೀ ಚಟುವಟಿಕೆ ಗರಿಗೆದರಲಿದೆ. ಹೈದರಾಬಾದ್‍ನಿಂದ ಬೆಳಿಗ್ಗೆ 6.05ಕ್ಕೆ ಹೊರಡುವ ವಿಮಾನ 7.50ಕ್ಕೆ ಮೈಸೂ ರಿಗೆ ತಲುಪಲಿದೆ. ಬೆಳಿಗ್ಗೆ 8.15ಕ್ಕೆ ಮೈಸೂರಿನಿಂದ ಹೊರಟು 9.45ಕ್ಕೆ ಕೊಚ್ಚಿನ್‍ಗೆ ತಲುಪಲಿದೆ. ಹಾಗೆಯೇ…

ಮತ್ತೆ ಕೇರಳ ತ್ಯಾಜ್ಯ ಮೈಸೂರಿಗೆ!
ಮೈಸೂರು

ಮತ್ತೆ ಕೇರಳ ತ್ಯಾಜ್ಯ ಮೈಸೂರಿಗೆ!

ಮೈಸೂರು,ಜು.18(ವೈಡಿಎಸ್)- ಕೇರಳದಿಂದ ಮೈಸೂರಿಗೆ ತ್ಯಾಜ್ಯ ತುಂಬಿ ಕೊಂಡು ಬಂದಿದ್ದ ಲಾರಿ ಮತ್ತು ಚಾಲಕ ಜಾಫರ್‍ನನ್ನು ಪಾಲಿಕೆ ಅಧಿಕಾರಿಗಳು ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಕೇರಳದಿಂದ ತ್ಯಾಜ್ಯವನ್ನು ತುಂಬಿ ಕೊಂಡು ಮೈಸೂರಿಗೆ ಬರುತ್ತಿದ್ದ ಲಾರಿಯನ್ನು ಟೋಲ್‍ಗೇಟ್ ಬಳಿ ತೆರಿಗೆ ಅಧಿ ಕಾರಿ ಗಳು ತಪಾಸಣೆ ನಡೆಸಿದಾಗ ಶಾಂತಿ ನಗ ರದ ಟ್ರೇಡರ್ಸ್‍ನ ಮಾಲೀಕ ಹಕೀಬ್ ಎಂಬು ವರ ಜಿಎಸ್‍ಟಿ ಸಂಖ್ಯೆಯನ್ನು ಬಳಸಿ ಬಿಲ್ ಮಾಡಿದ್ದರು. ಈ ಕುರಿತು ಅಧಿಕಾರಿ ಗಳು ಹಕೀಬ್ ಅವರಿಗೆ ಕರೆ ಮಾಡಿ ತಿಳಿಸಿದ್ದು, ಅವರು…

ಬೆಂಗಳೂರಿನಲ್ಲಿ ಎದೆ ನೋವು! ಮುಂಬೈನಲ್ಲಿ ಚಿಕಿತ್ಸೆ..!!‘ಕೈ’ ಕೊಟ್ರಾ ಶಾಸಕ ಶ್ರೀಮಂತ್ ಪಾಟೀಲ್!!!
ಮೈಸೂರು

ಬೆಂಗಳೂರಿನಲ್ಲಿ ಎದೆ ನೋವು! ಮುಂಬೈನಲ್ಲಿ ಚಿಕಿತ್ಸೆ..!!‘ಕೈ’ ಕೊಟ್ರಾ ಶಾಸಕ ಶ್ರೀಮಂತ್ ಪಾಟೀಲ್!!!

ಬೆಂಗಳೂರು, ಜು.18- ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನ ಮತ್ತು ರಾಜಕೀಯ ಮುಖಂಡರ ರೆಸಾರ್ಟ್ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಾತ್ರೋ ರಾತ್ರಿ ನಾಪತ್ತೆ ಯಾಗುವ ಮೂಲಕ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಿದ್ದ ಶಾಸಕ ಶ್ರೀಮಂತ್ ಪಾಟೀಲ್ ಇದೀಗ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷ ರಾಗಿದ್ದಾರೆ. ನಿನ್ನೆ ಕಾಂಗ್ರೆಸ್ ಶಾಸಕರೊಂದಿಗೆ ಬೆಂಗಳೂರಿನ ಪ್ರಕೃತಿ ರೆಸಾರ್ಟ್‍ನಲ್ಲಿ ತಂಗಿದ್ದ ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ರಾತ್ರೋರಾತ್ರಿ ರೆಸಾರ್ಟ್‍ನಿಂದ ನಾಪತ್ತೆಯಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಶ್ರೀಮಂತ ಪಾಟೀಲ್…

ವ್ಹಿಪ್ ಸಂಬಂಧ ಹೇಳಿಕೆ: ಬಿಎಸ್‍ವೈ ಇಕ್ಕಟ್ಟಿಗೆ
ಮೈಸೂರು

ವ್ಹಿಪ್ ಸಂಬಂಧ ಹೇಳಿಕೆ: ಬಿಎಸ್‍ವೈ ಇಕ್ಕಟ್ಟಿಗೆ

ಬೆಂಗಳೂರು, ಜು.18(ಕೆಎಂಶಿ)- ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಕಾಂಗ್ರೆಸ್-ಜೆಡಿಎಸ್ ಸದಸ್ಯರಿಗೆ ಸಂಬಂಧಪಟ್ಟ ಪಕ್ಷಗಳು ವ್ಹಿಪ್ ಜಾರಿ ಮಾಡುವಂತಿಲ್ಲ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಹೇಳಿಕೆ ನೀಡಿ, ಇಕ್ಕಟ್ಟಿಗೆ ಸಿಲುಕಿದರು. ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ನ್ಯಾಯಾಲಯ ವ್ಹಿಪ್ ನೀಡಬಾರದು ಎಂದು ಹೇಳಿದೆ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಯನ್ನು ಯಡಿಯೂರಪ್ಪ ನವರಿಗೆ ತೋರಿಸಿ, ಅವರ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು….

1 2 3 103