ಕೊರೊನಾ ಭಯದಲ್ಲೂ ಜನ್‘ಧನ್’ಗೆ ಮುಗಿಬಿದ್ದ ಜನ
ಮೈಸೂರು

ಕೊರೊನಾ ಭಯದಲ್ಲೂ ಜನ್‘ಧನ್’ಗೆ ಮುಗಿಬಿದ್ದ ಜನ

April 9, 2020
  • ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳುವಂತೆ ಮಾಡುವಲ್ಲಿ ಬ್ಯಾಂಕ್ ಸಿಬ್ಬಂದಿ ಹೈರಾಣ
  • ಮಿನಿ ಹಾಗೂ ಮೈಕ್ರೋ ಎಟಿಎಂಗಳ ಮೂಲಕ ಹಣ ನೀಡಲು ಮುಂದಾದ ಬ್ಯಾಂಕ್
  • ಮೈಸೂರು ಜಿಲ್ಲೆಯಲ್ಲಿ 91 ಸಾವಿರ ಮಹಿಳಾ ಜನ್‍ಧನ್, 3,97,580 ಪಿಂಚಣಿದಾರರ ಖಾತೆ

ಮೈಸೂರು,ಏ.8- ನೊವೆಲ್ ಕೊರೊನಾ ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಮಾಡಿ ಜನಸಂಚಾರಕ್ಕೆ ಬ್ರೇಕ್ ಹಾಕಿರುವ ನಡುವೆಯೂ `ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ’ ಮೂಲಕ ಮಹಿಳಾ ಜನ್‍ಧನ್ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ಜಮೆ ಮಾಡಿರುವ 500 ರೂ. ಪಡೆದು ಕೊಳ್ಳಲು ಖಾತೆದಾರರು ಮುಗಿಬೀಳುತ್ತಿರು ವುದು ಜಿಲ್ಲಾಡಳಿತ ಹಾಗೂ ಬ್ಯಾಂಕ್ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ಜನ್‍ಧನ್ ಖಾತೆ ಹೊಂದಿರುವ ಮಹಿಳೆ ಯರಿಗೆ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ತಲಾ 500 ರೂ. ಜಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗಾ ಗಲೇ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊ ರೇಷನ್ ಆಫ್ ಇಂಡಿಯಾ ಮೂಲಕ ಜನ್‍ಧನ್ ಮಹಿಳಾ ಖಾತೆದಾರರಿಗೆ 500 ರೂ. ಹಣ ಸಂದಾಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರ ಸೇರಿ ದಂತೆ ಜಿಲ್ಲೆಯ ವಿವಿಧ ಬ್ಯಾಂಕ್‍ಗಳ ಮುಂದೆ ಜನ್‍ಧನ್ ಖಾತೆಯ ಪಾಸ್‍ಬುಕ್ ಹಿಡಿದು ಮಹಿಳೆಯರು ಸಾಲುಗಟ್ಟಿ ನಿಲ್ಲುತ್ತಿದ್ದು, ಇದು ಜಿಲ್ಲಾಡಳಿತಕ್ಕೆ ತಲೆ ಬಿಸಿ ಮಾಡಿದೆ.

ಕಳೆದ 3 ತಿಂಗಳಿಂದ ಸ್ಥಗಿತಗೊಂಡಿದ್ದ ವಿಧವಾ ವೇತನ, ಅಂಗವಿಕಲರ ವೇತನ, ವೃದ್ಧಾಪ್ಯ ವೇತನ, ಮನಸ್ವಿನಿ ಯೋಜನೆ ಯಲ್ಲಿ ಮಂಗಳಮುಖಿಯರಿಗೆ ನೀಡುವ ಪಿಂಚಣಿಯನ್ನೂ ಫಲಾನುಭವಿಗಳ ಖಾತೆಗೇ ನೇರ ಜಮಾ ಮಾಡಲಾಗುತ್ತಿದೆ. ನಿವೃತ್ತ ಸರ್ಕಾರಿ ನೌಕರರು, ಕುಟುಂಬ ಪಿಂಚಣಿ ದಾರರು ಸಹ ಬ್ಯಾಂಕ್‍ಗಳಿಗೆ ಹಣ ಡ್ರಾ ಮಾಡಲು ಬರುತ್ತಿರುವುದರಿಂದ ಬ್ಯಾಂಕ್ ಗಳ ಮುಂದೆ ಸರದಿ ಸಾಲು ಕಂಡು ಬರುತ್ತಿದೆ.

ಮೈಸೂರು ನಗರ ಸೇರಿದಂತೆ ಜಿಲ್ಲೆ ಯಲ್ಲಿ ವಿವಿಧ ಬ್ಯಾಂಕ್‍ಗಳ 592 ಶಾಖೆ ಗಳಿವೆ. ಅದರಲ್ಲೂ ಕರ್ನಾಟಕ ಗ್ರಾಮೀಣ ಬ್ಯಾಂಕ್, ಎಸ್‍ಬಿಐ, ಕೆನರಾ ಬ್ಯಾಂಕ್‍ಗಳಲ್ಲಿ ಅತೀ ಹೆಚ್ಚು ಜನ್‍ಧನ್ ಖಾತೆ ತೆರೆಯಲಾ ಗಿದೆ. ಪ್ರಮುಖವಾಗಿ ಮೂರೇ ಬ್ಯಾಂಕ್‍ಗಳ ಎಲ್ಲಾ ಶಾಖೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ್‍ಧನ್ ಖಾತೆದಾರರಿದ್ದಾರೆ. ಜಿಲ್ಲೆಯಲ್ಲಿ 1.25 ಲಕ್ಷಕ್ಕೂ ಅಧಿಕ ಜನ್‍ಧನ್ ಖಾತೆದಾರ ರಿದ್ದಾರೆ. ಅವರಲ್ಲಿ 91 ಸಾವಿರ ಮಹಿಳಾ ಖಾತೆದಾರರೇ ಇರುವುದು ವಿಶೇಷ. ನಿವೃತ್ತ ಸರ್ಕಾರಿ ನೌಕರರು, ಕುಟುಂಬ ಪಿಂಚಣಿದಾ ರರು ಸೇರಿದಂತೆ ಪಿಂಚಣಿ ಪಡೆಯುವ 3,97,580 ಖಾತೆದಾರರಿದ್ದಾರೆ. ಇವರಲ್ಲಿ ಬಹುತೇಕರು ಬ್ಯಾಂಕ್‍ಗಳಿಗೆ ಬರುತ್ತಿರು ವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಸಾಲು ಸಾಲು: ಮೈಸೂರು ನಗರ, ತಾಲೂಕು ಕೇಂದ್ರದಲ್ಲಿರುವ ಬ್ಯಾಂಕ್‍ಗಳ ಮುಂದೆ ಮಹಿಳೆಯರು ಸಾಲುಗಟ್ಟಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ. ಲಾಕ್ ಡೌನ್‍ನಿಂದಾಗಿ ಜನರು ಮನೆಯಿಂದ ಹೊರ ಬರದಂತೆ ಪೊಲೀಸರು ಹರಸಾಹಸ ಮಾಡು ತ್ತಿದ್ದರೆ, ಬ್ಯಾಂಕ್‍ಗಳ ಮುಂದೆ ಜನದಟ್ಟಣೆ ಕಂಡು ಬೇಸ್ತು ಬೀಳುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಿಲ್ಲುವಂತೆ ಬ್ಯಾಂಕ್ ಭದ್ರತಾ ಸಿಬ್ಬಂದಿ ಸಲಹೆ ನೀಡಿದರೂ ಖಾತೆ ದಾರರು ಮಾತ್ರ ಆತುರ ಪ್ರದರ್ಶಿಸುತ್ತಿ ದ್ದಾರೆ. ಈ ಹಿಂದೆ ಬ್ಯಾಂಕ್ ಕೌಂಟರ್‍ಗಳ ಮುಂದೆ ಗ್ರಾಹಕರು ನಿಲ್ಲುತ್ತಿದ್ದ ರೀತಿ ಈಗ ಅವ ಕಾಶ ನೀಡುತ್ತಿಲ್ಲ. ಸರದಿ ಸಾಲಿನಲ್ಲಿ ನಿಂತಿರುವ ಮೂರ್ನಾಲ್ಕು ಮಂದಿಗೆ ಮಾತ್ರ ಬ್ಯಾಂಕ್ ಒಳಗೆ ಕರೆದು ಅವರ ಕೆಲಸ ಮುಗಿದ ನಂತರವಷ್ಟೇ ಬೇರೆ ಗ್ರಾಹಕರಿಗೆ ಅವಕಾಶ ನಿಡಲಾಗುತ್ತಿದೆ.

ಜಿಲ್ಲಾಧಿಕಾರಿ ಸಭೆ: ಬ್ಯಾಂಕ್‍ಗಳ ಮುಂದೆ ಜನದಟ್ಟಣೆ ಕಂಡು ಬಂದ ಹಿನ್ನೆಲೆಯಲ್ಲಿ ಕೊರೊನಾ ವೈರಾಣು ಹರಡುವ ಸಾಧ್ಯತೆ ಮನಗಂಡು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಲೀಡ್ ಬ್ಯಾಂಕ್ ಮ್ಯಾನೇಜರ್ ನೇತೃತ್ವದಲ್ಲಿ ವಿವಿಧ ಬ್ಯಾಂಕ್‍ಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೋವಿಡ್-19 ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು. ಹಣ ಡ್ರಾ ಮಾಡಲು ಏಕಕಾಲ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುವುದನ್ನು ತಡೆಗಟ್ಟಲು ಮಿನಿ ಅಥವಾ ಮೈಕ್ರೋ ಎಟಿಎಂಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಗ್ರಾಹಕರನ್ನು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿ, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

2-3 ದಿನ ಸಹಕರಿಸಿ
ಜನ್‍ಧನ್ ಖಾತೆಯ ಮಹಿಳಾ ಗ್ರಾಹಕರಿಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 3 ತಿಂಗಳಲ್ಲಿ ತಲಾ 500 ರೂ. ಜಮೆ ಮಾಡಲಿದೆ. ಮೊಬೈಲ್‍ಗೆ ಸಂದೇಶ ಬಂದಿರುವ ಕಾರಣ ವಿವಿಧ ಬ್ಯಾಂಕ್ ಶಾಖೆಗಳ ಮುಂದೆ ಖಾತೆದಾರರು ಹಣ ಡ್ರಾ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಹಣ ನಿಮ್ಮ ಖಾತೆಯಲ್ಲಿಯೇ ಇರುತ್ತದೆ.

ಕೊರೊನಾ ವೈರಸ್ ವ್ಯಾಪಿಸುತ್ತಿರುವುದರಿಂದ ಒಂದೆಡೆ ಹೆಚ್ಚು ಜನ ಸೇರಲು ನಿರ್ಬಂಧವಿದೆ. ಇದನ್ನು ಖಾತೆದಾರರು ಅರಿತು ಕೊಳ್ಳಬೇಕು. ಈಗಾಗಲೇ ಕೆನರಾ ಬ್ಯಾಂಕ್ ವತಿಯಿಂದ ಆಟೋರಿಕ್ಷಾಗಳಲ್ಲಿ ಮಿನಿ ಎಟಿಎಂ ಮೂಲಕ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಗ್ರಾಹಕರ ಅನುಕೂಲಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಲವಾಲ, ಬಿಳಿಕೆರೆಯಲ್ಲೂ ಮೈಕ್ರೋ ಎಟಿಎಂ ಹಾಗೂ ಮಿನಿ ಎಟಿಎಂ ಯೂನಿಟ್ ಬಳಸಿಯೂ ಹಣ ನೀಡುತ್ತಿದ್ದೇವೆ. ಹಲವು ಮಂದಿಗೆ ಹಣ ಜಮೆ ಆಗದಿದ್ದರೂ ಬ್ಯಾಂಕ್ ಮುಂದೆ ಬರುತ್ತಿದ್ದಾರೆ. ಇನ್ನು 2-3 ದಿನ ಮನೆಯಲ್ಲಿಯೇ ಇದ್ದರೆ, ನಿಮ್ಮ ಬಡಾವಣೆಗಳಲ್ಲೇ ಹಣ ಡ್ರಾ ಮಾಡುವ ವ್ಯವಸ್ಥೆ ಮಾಡುತ್ತೇವೆ. – ವೆಂಕಟಾಚಲಪತಿ, ಲೀಡ್ ಬ್ಯಾಂಕ್ ಮ್ಯಾನೇಜರ್.

 

ಎಂ.ಟಿ.ಯೋಗೇಶ್ ಕುಮಾರ್

Translate »