ಮೈಸೂರಲ್ಲಿ ಮತ್ತೋರ್ವ ಕೊರೊನಾ ಸೋಂಕಿತ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ
ಮೈಸೂರು

ಮೈಸೂರಲ್ಲಿ ಮತ್ತೋರ್ವ ಕೊರೊನಾ ಸೋಂಕಿತ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

April 14, 2020

ಕೊರೊನಾ ಮಹಾಮಾರಿಯಿಂದ ಮುಕ್ತಿಗೊಂಡವರ ಸಂಖ್ಯೆ 10ಕ್ಕೇರಿಕೆ
ಮೈಸೂರು, ಏ.13(ಆರ್‍ಕೆ)- ಮೈಸೂರಿ ನಲ್ಲಿ ಕೊರೊನಾ ಮಹಾಮಾರಿಯಿಂದ ಮುಕ್ತರಾದವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದರಿಂದ ಜನರಲ್ಲಿ ಆತಂಕ ನಿಧಾನವಾಗಿ ದೂರವಾಗುತ್ತಿದೆ.

ಭಾನುವಾರ ಒಂದೇ ದಿನ 7 ಮಂದಿ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆ ಯಿಂದ ಬಿಡುಗಡೆಗೊಂಡ ಬೆನ್ನಲ್ಲೇ, ಇಂದು ಜುಬಿಲಂಟ್ ಕಾರ್ಖಾನೆ ನೌಕರ ಪೂರ್ಣ ಗುಣಮುಖರಾಗಿ ಬಿಡುಗಡೆ ಆಗಿದ್ದು, ಈವರೆಗೆ ಈ ಮಹಾಮಾರಿ ಸೋಂಕಿನಿಂದ ಒಟ್ಟು 10 ಮಂದಿ ಮುಕ್ತಿಯಾದಂತಾಗಿದೆ.

ಈ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, 35 ವರ್ಷದ ಜುಬಿಲಂಟ್ ಕಾರ್ಖಾನೆ ನೌಕರನನ್ನು ಪುನರಾವರ್ತಿತ ಪರೀಕ್ಷೆಗೊಳಪಡಿಸಿದಾಗ ಕೋವಿಡ್-19 ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಷ್ಟಾಚಾರದಂತೆ ವಿಧಿ-ವಿಧಾನ ಪೂರ್ಣ ಗೊಳಿಸಿ ಆಸ್ಪತ್ರೆಯಿಂದ ಮನೆಗೆ ಕಳುಹಿಸ ಲಾಗಿದೆ ಎಂದು ತಿಳಿಸಿದ್ದಾರೆ.

ಸಂಪೂರ್ಣ ಗುಣಮುಖರಾಗಿ, ಆಸ್ಪತ್ರೆ ಯಿಂದ ಬಿಡುಗಡೆ ಆಗಿರುವ ವ್ಯಕ್ತಿ ಈಗ ಆರೋಗ್ಯದಿಂದಿದ್ದು, ಆಸ್ಪತ್ರೆಯಲ್ಲಿ ತಮ್ಮನ್ನು ವೈದ್ಯರು ಪ್ರೀತಿಯಿಂದ ನೋಡಿಕೊಂಡ ಬಗ್ಗೆ ಕೃತಜ್ಞತೆ ಸಲ್ಲಿಸಿ ಜಿಲ್ಲಾಧಿಕಾರಿಗಳಿಗೆ ಆ ವ್ಯಕ್ತಿ ಪತ್ರವನ್ನು ಸಹ ಬರೆದಿದ್ದಾರೆ.

ವೈದ್ಯರು, ದಾದಿಯರು, ಆಸ್ಪತ್ರೆಯಲ್ಲಿ ತೋರಿದ ಪ್ರೀತಿ, ಕಾಳಜಿಯನ್ನು ಪದ ಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ನಾನು ಈ ಮೂಲಕ ನಮಸ್ಕಾರ ತಿಳಿಸಬಯಸು ತ್ತಿದ್ದೇನೆ. ನನ್ನ ಬಗ್ಗೆ ಕಳಕಳಿ ತೋರಿಸಿದ ಜುಬಿಲಂಟ್ ಕಾರ್ಖಾನೆ ಅಧಿಕಾರಿಗಳಿಗೂ ನಾನು ಚಿರಋಣಿಯಾಗಿದ್ದೇನೆ ಎಂದಿರುವ ಆ ವ್ಯಕ್ತಿಯು ಸರ್ವರೀತಿಯಲ್ಲೂ ಸಹಕರಿ ಸಿದ ಜಿಲ್ಲಾಡಳಿತ ಹಾಗೂ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Translate »