ನಿರಾಶ್ರಿತರ ಆಶ್ರಯ ತಾಣದಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ
ಮೈಸೂರು

ನಿರಾಶ್ರಿತರ ಆಶ್ರಯ ತಾಣದಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

April 15, 2020

ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ಸಂತ್ರಸ್ತರಿಗೆ ಆಹಾರ, ಔಷಧ ವಿತರಣೆ
ಮೈಸೂರು,ಏ.14(ಎಂಟಿವೈ)- ಮೈಸೂರಿನ ಗಂಗೋತ್ರಿ ಬಡಾವಣೆಯಲ್ಲಿರುವ ಯೂತ್ ಹಾಸೆÀ್ಟಲ್ ಆವರಣದಲ್ಲಿ ಮಂಗಳವಾರ ಬಿ.ವೈ.ವಿಜಯೇಂದ್ರ ಅಭಿಮಾನಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜನ್ಮ ದಿನವನ್ನು ಆಚರಿಸಿ, ಇಲ್ಲಿ ಆಶ್ರಯ ಪಡೆದಿರುವ ವಸತಿಹೀನರಿಗೆ ಮಧ್ಯಾಹ್ನದ ಭೋಜನ ಹಾಗೂ ಅಗತ್ಯವುಳ್ಳವರಿಗೆ ಔಷಧಿ ವಿತರಿಸಿದರು.

ಯೂತ್ ಹಾಸೆÀ್ಟಲ್ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಲಾಕ್ ಡೌನ್‍ನಿಂದಾಗಿ ನಿರಾಶ್ರಿತರಾಗಿ, ಯೂತ್ ಹಾಸೆÀ್ಟಲ್ ನಲ್ಲಿ ಆಶ್ರಯ ಪಡೆದಿರುವ 63 ಮಂದಿಗೂ ಮಾಸ್ಕ್, ಸ್ಯಾನಿಟೈಸರ್, 13 ಮಂದಿಗೆ ಅಗತ್ಯ ಔಷಧಿ, 20 ಮಂದಿಗೆ ವಿಕ್ಸ್, ಅಮೃತಾಂಜನ್, ಕ್ರೋಸಿನ್ ವಿತರಿಸಿದರು.

ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಸಾರ್ವಜನಿಕರು ಸಹಕರಿಸ ಬೇಕು. ಸಮುದಾಯಕ್ಕೆ ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿಗಳಿಗೆ ಕಿವಿ ಗೊಡದೇ ಜನರು ಕೊರೊನಾ ವಿರುದ್ಧ ಹೋರಾಡು ತ್ತಿರುವ ಸರ್ಕಾರಕ್ಕೆ ಬೆಂಬಲ ನೀಡಬೇಕು. ಲಾಕ್ ಡೌನ್‍ನಿಂದಾಗಿ ಮನೆಯಲ್ಲಿಯೇ ಇರುವ ಮೂಲಕ ತಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯ ಕಾಪಾ ಡಲು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವ ಸ್ವಾಮಿ ಮಾತನಾಡಿ, ಲಾಕ್‍ಡೌನ್ ನಡುವೆಯೂ ದೇಶ ಕಂಡ ಅಪ್ರತಿಮ ನಾಯಕ, ವಿಶ್ವದಲ್ಲೇ ಶ್ರೇಷ್ಟ ಸಂವಿಧಾನ ಕೊಡುಗೆ ನೀಡಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನವನ್ನು ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗದ ವತಿ ಯಿಂದ ಸರಳ, ಅರ್ಥಗರ್ಭಿತವಾಗಿ ಆಚರಿಸಲಾಗು ತ್ತಿದೆ. ಅಂಬೇಡ್ಕರ್ ಅವರ ವಿಚಾರಧಾರೆ, ತತ್ವ, ಸಿದ್ಧಾಂತ ಯುವ ಪೀಳಿಗೆಗೆ ಆದರ್ಶಪ್ರಾಯ. ಮೌಲ್ಯ ಕಳೆದುಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಮ್ಮೆಲ್ಲರಿಗೂ ಶ್ರೇಷ್ಠ ವ್ಯಕ್ತಿತ್ವವಾಗಿ ಅಂಬೇಡ್ಕರ್ ಕಾಣುತ್ತಾರೆ. ಈ ನಿಟ್ಟಿನಲ್ಲಿ ಲಾಕ್‍ಡೌನ್‍ನಿಂದಾಗಿ ಜನ್ಮ ದಿನಾಚರಣೆ ಸ್ಥಗಿತಗೊಳಿಸಬಾರದು ಎಂಬ ಕಾರಣಕ್ಕೆ ಯೂತ್ ಹಾಸೆÀ್ಟಲ್‍ನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಆ ಮೂಲಕ ಪುನರ್ವಸತಿ ಕೇಂದ್ರ ದಲ್ಲಿ ಆಶ್ರಯ ಪಡೆದಿರುವವರಿಗೆ ಅಂಬೇಡ್ಕರ್ ವಿಚಾರ ಧಾರೆ ತಿಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆ ದಿರುವವರಿಗೆ ಅಂಬೇಡ್ಕರ್ ಜಯಂತಿ ಹಿನ್ನೆಲೆ ಯಲ್ಲಿ ಪಾಯಸ, ಕೋಸಂಬರಿ, ಅನ್ನ, ಸಾಂಬಾರ್ ನೀಡಲಾಗಿದೆ. ಅಲ್ಲದೆ ಅನಾರೋಗ್ಯ ಸಮಸ್ಯೆ ಇದ್ದವರಿಗೆ ವೈದ್ಯರು ಶಿಫಾರಸ್ಸು ಮಾಡಿದ ಔಷಧ, ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಲಕ್ಷ್ಮೀದೇವಿ, ಆನಂದ್, ನಿಖಿಲ್, ಜಸ್ವಂತ್, ವಕೀಲ ಪ್ರಸನ್ನ, ಯೂತ್ ಹಾಸ್ಟೆಲ್ ಉಸ್ತುವಾರಿ ಮಧು, ಯೋಗಿ, ನಂದೀಶ್, ಅರುಣ್, ಅಶೋಕ್, ಉಮೇಶ್, ಗಂಗಾಧರ, ಮಹೇಶ್ ಹಾಗೂ ಇನ್ನಿತರರು ಇದ್ದರು.

Translate »