ತಂಬಾಕು ಬೆಳೆಗಾರರ ಸಮಸ್ಯೆ ಸಂಬಂಧ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇಂದು ಸಭೆ
ಮೈಸೂರು

ತಂಬಾಕು ಬೆಳೆಗಾರರ ಸಮಸ್ಯೆ ಸಂಬಂಧ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇಂದು ಸಭೆ

April 15, 2020

ಮೈಸೂರು, ಏ.14(ಪಿಎಂ)- ತಂಬಾಕು ಬೆಳೆಗಾರರ ಸಮಸ್ಯೆ ಪರಿಹರಿಸಲು ಏ.15 ರಂದು ಮೈಸೂರಿನಲ್ಲಿ ಸಭೆ ನಡೆಸು ವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಹುಣಸೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿ ಗಳ ಸಭೆ ನಡೆಸಿದ ಅವರು, ತಂಬಾಕು ಬೆಳೆಯುವ ರೈತರು, ಖರೀದಿದಾರರು, ಶಾಸಕರು ಹಾಗೂ ಸಂಸದರ ಒಳಗೊಂ ಡಂತೆ ಮೈಸೂರು ಜಿಪಂ ಸಭಾಂಗಣ ದಲ್ಲಿ ನಾಳೆ (ಏ.15) ಮಧ್ಯಾಹ್ನ 3ಕ್ಕೆ ಸಭೆ ಏರ್ಪಡಿಸಲಾಗುವುದು ಎಂದು ಹೇಳಿದರು.

ನಂತರ ಈ ಪ್ರದೇಶಗಳ ವ್ಯಾಪ್ತಿಯ ನಾಲ್ವರು ಸಂಸದರು, 6 ಮಂದಿ ಶಾಸಕರು ಹಾಗೂ ತಂಬಾಕು ಮಂಡಳಿ ಅಧಿಕಾರಿ ಗಳ ಸಭೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಸಲು ಕ್ರಮ ವಹಿಸಲಾ ಗುವುದು. ಮುಖ್ಯಮಂತ್ರಿಗಳ ಅಧ್ಯಕ್ಷತೆ ಯಲ್ಲಿ ನಡೆಯುವ ಸಭೆಯಲ್ಲಿ ಕೈಗೊಂಡ ನಿರ್ಧಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು 2.5 ಲಕ್ಷ ಅರ್ಜಿ ಗಳು ಸಲ್ಲಿಕೆಯಾಗಿದ್ದು, ಈ ಕುಟುಂಬ ಗಳಿಗೂ ಪಡಿತರ ವಿತರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಎರಡು ಮೂರು ದಿನದಲ್ಲಿ ಇದು ಅನುಷ್ಠಾನಗೊಳ್ಳಲಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾವುದೇ ಕಾರ್ಖಾನೆಯವರು ಕಾರ್ಮಿಕರ ವೇತನ ಕಡಿತ ಮಾಡುವಂತಿಲ್ಲ. ಜೊತೆಗೆ ಕೆಲಸ ದಿಂದ ತೆಗೆಯುವಂತಿಲ್ಲ ಎಂದು ಆದೇ ಶಿಸಲಾಗಿದೆ ಎಂದು ತಿಳಿಸಿದರು.

ಲಾಕ್‍ಡೌನ್ ಅವಧಿ ಮೇ 3ರವರೆಗೆ ವಿಸ್ತರಣೆಯಾಗಿದೆ. ಈವರೆಗೂ ಲಾಕ್ ಡೌನ್ ಆದೇಶವನ್ನು ಜಿಲ್ಲಾಡಳಿತ ಅಚ್ಚು ಕಟ್ಟಾಗಿ ನಿರ್ವಹಿಸಿದ್ದು, ಜನರೂ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಕಟ್ಟು ನಿಟ್ಟಿನ ಲಾಕ್‍ಡೌನ್ ಜಾರಿಗೊಳಿಸಿ, ಕೊರೊನಾ ತಡೆಗೆ ಕ್ರಮ ವಹಿಸಲಾಗುವುದು ಎಂದರು.

ಸಣ್ಣಪುಟ್ಟ ಕಾಯಿಲೆಗೆ ಚಿಕಿತ್ಸೆ ನೀಡಲು ಅನುವಾಗುವಂತೆ ಖಾಸಗಿ ಕ್ಲಿನಿಕ್‍ಗಳನ್ನು ತೆರೆಯುವಂತೆ ಈಗಾಗಲೇ ಜಿಲ್ಲಾಧಿಕಾರಿ ಗಳು ಖಾಸಗಿ ವೈದ್ಯರಿಗೆ ಸೂಚನೆ ನೀಡಿ ದ್ದಾರೆ. ಕುಡಿಯುವ ನೀರಿನ ಸಮಸ್ಯೆಗಳ ನಿವಾರಣೆಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾವುದೇ ಸಮಸ್ಯೆಯಾಗ ದಂತೆ ಎಚ್ಚರ ವಹಿಸಲಾಗುವುದು ಎಂದರು.

ಶಾಸಕ ಹೆಚ್.ಪಿ.ಮಂಜುನಾಥ್, ಮಾಜಿ ಸಚಿವ ಎ.ಹೆಚ್.ವಿಶ್ವನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಪಂ ಸಿಇಓ ಪ್ರಶಾಂತ್ ಕುಮಾರ್ ಮಿಶ್ರ, ಹುಣಸೂರು ಉಪವಿಭಾಗಾಧಿಕಾರಿ ವೀಣಾ ಮತ್ತಿ ತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಾವು ಫಸಲು ಸಾಗಾಣಿಕೆ ಸಂಬಂಧ ಸಭೆ…
ಮಾವಿನ ಬೆಳೆ ಕಟಾವಿಗೆ ಬರುತ್ತಿದ್ದು, ರಾಜ್ಯದ ಒಳಗೆ ಹಾಗೂ ಹೊರಗೆ ಮಾವಿನ ಫಸಲು ಸಾಗಣಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ವರ್ತಕರ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಅಧಿಕಾರಿಗಳು ಅಚ್ಚುಕಟ್ಟಾಗಿ ಕ್ರಮ ವಹಿಸಿದ್ದಾರೆ. ಪಡಿತರ ವಿತರಣೆ ಸಂಬಂಧ ಎದುರಾದ ಸಣ್ಣಪುಟ್ಟ ಸಮಸ್ಯೆ ನಿವಾರಿಸಿ, ಪ್ರತಿ ಕುಟುಂಬಕ್ಕೂ ಪಡಿತರ ಸಿಗುವಂತೆ ಕ್ರಮ ವಹಿಸಲಾಗಿದೆ.
-ಎಸ್.ಟಿ.ಸೋಮಶೇಖರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು

Translate »