ಕೊರೊನಾ ಹಿನ್ನೆಲೆ; ಮೈಸೂರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸರಳ ಆಚರಣೆ
ಮೈಸೂರು

ಕೊರೊನಾ ಹಿನ್ನೆಲೆ; ಮೈಸೂರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸರಳ ಆಚರಣೆ

April 15, 2020
  • ಕೊರೊನಾಕ್ಕೆ ಕಡಿವಾಣ ಹಾಕಲು ವಿಶೇಷಾಧಿಕಾರಿಯಾಗಿ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ
  • ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಏ.14(ಪಿಎಂ)- ಕೊರೊನಾ ಸೋಂಕು ಪರಿಣಾಮಕಾರಿಯಾಗಿ ನಿಯಂತ್ರಿಸಿ, ಅಗತ್ಯ ಸಲಹೆ-ಸೂಚನೆ ನೀಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರನ್ನು ಜಿಲ್ಲೆಯ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಮೈಸೂರಿನ ಪುರಭವನದ ಆವರಣ ದಲ್ಲಿ ಜಿಲ್ಲಾಡಳಿತದ ವತಿಯಿಂದ ಮಂಗಳ ವಾರ ಕೊರೊನಾ ಹಿನ್ನೆಲೆಯಲ್ಲಿ ಸರಳ ವಾಗಿ ಏರ್ಪಡಿಸಿದ್ದ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಆವರಣದಲ್ಲಿನ ಡಾ.ಬಿ. ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಬಳಿಕ ಮಾಧ್ಯಮದವ ರೊಂದಿಗೆ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿ ಮೇಲ್ವಿಚಾರಣೆಗೆ ಒಬ್ಬರು ಪ್ರತ್ಯೇಕ ಅಧಿಕಾರಿ ನೇಮಕ ಮಾಡುವ ಅಗತ್ಯವಿತ್ತು. ಕಾರಣ ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ ಕೊರೊನಾ ಸೋಂಕಿತರು ಹೆಚ್ಚಿರುವ ಮೂಲಕ ಮೈಸೂರು ಎರಡನೇ ಸ್ಥಾನದಲ್ಲಿದೆ. ಹೀಗಾಗಿ ದಕ್ಷ ಹಾಗೂ ಪ್ರಾಮಾ ಣಿಕ ಅಧಿಕಾರಿ ನೇಮಕ ಮಾಡಿದರೆ ಸಮಗ್ರ ಮೇಲ್ವಿಚಾರಣೆ ಸಾಧ್ಯ ಎಂಬ ಉದ್ದೇಶ ದಿಂದ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕೊರೊನಾ ತಡೆ ಗಟ್ಟುವ ಸಂಬಂಧ ಸೂಕ್ತ ಸಲಹೆ ಹಾಗೂ ಸೂಚನೆ ನೀಡಲಿದ್ದಾರೆ ಎಂದು ಹೇಳಿದರು.

ನಂಜನಗೂಡು ಕೈಗಾರಿಕಾ ಪ್ರದೇಶದ ಜ್ಯುಬಿಲಂಟ್ ಕಾರ್ಖಾನೆಗೆ ಕೊರೊನಾ ಸೋಂಕು ಹೇಗೆ ಬಂತು ಎಂಬುದು ಇನ್ನೂ ತನಿಖೆ ಹಂತದಲ್ಲಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರು ಈ ಬಗ್ಗೆ ಕೂಲಂಕುಷವಾಗಿ ವಿಚಾ ರಣೆ ಹಾಗೂ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ಸೂಕ್ಷ್ಮವಾಗಿದ್ದು, ತನಿಖೆ ಮೂಲ ಕವೇ ಎಲ್ಲಾ ಬೆಳಕಿಗೆ ಬರಬೇಕಿದೆ ಎಂದ ಸಚಿವರು, ಕಾರ್ಖಾನೆಗಳು ಬಂದ್ ಆಗಿರುವ ಕಾರಣಕ್ಕೆ ಕಾರ್ಮಿಕರ ವೇತನಕ್ಕೆ ತಡೆ ಮಾಡುವಂತಿಲ್ಲ ಎಂದು ಕಾರ್ಮಿಕ ಇಲಾಖೆ ಆಯುಕ್ತರು ಈಗಾಗಲೇ ಆದೇಶ ಮಾಡಿ ದ್ದಾರೆ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಕೇರಳ ಗಡಿ ತೆರೆಯುವ ವಿಚಾರ: ಮೈಸೂರು ಭಾಗದ ರೈತರ ಬೆಳೆಗಳನ್ನು ಕೇರಳಕ್ಕೆ ಸಾಗ ಣಿಕೆ ಮಾಡುವ ಸಂಬಂಧ ಕೇರಳ ಗಡಿ ತೆರೆಯುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರಧಾನಿಗಳ ಘೋಷಣೆ ಆಧರಿಸಿ ಮುಖ್ಯ ಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಕೇರಳ ಬಿಟ್ಟು ಉಳಿದೆಲ್ಲಾ ಗಡಿಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ವಿನಾಯಿತಿ ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರ ಈಗಾಗಲೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ದಿನಸಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಸಾಗಾ ಣಿಕೆಗೆ ಅವಕಾಶ ನೀಡಿದ್ದು, ಈ ಸಂಬಂಧ ಚೆಕ್‍ಪೋಸ್ಟ್‍ನಲ್ಲಿ ತಡೆಯಬಾರದು ಎಂದು ಕೇಂದ್ರ ಗೃಹ ಸಚಿವರು ಆದೇಶ ಮಾಡಿ ದ್ದಾರೆ. ಆದರೆ ಸರಿಯಾದ ದಾಖಲಾತಿ ಇರಬೇಕು ಎಂಬ ಷರತ್ತಿದೆ. ಲೋಡಿಂಗ್ ಹಾಗೂ ಅನ್ ಲೋಡಿಂಗ್ ಎರಡಕ್ಕೂ ಅವಕಾಶವಿದೆ. ಬೇರೆ ರಾಜ್ಯದಿಂದ ಏನಾದರೂ ತರಲು ಇಲ್ಲಿಂದ ಖಾಲಿ ವಾಹನ ತೆರ ಳಲೂ ಅವಕಾಶವಿದೆ ಎಂದು ತಿಳಿಸಿದರು.

ಎಲ್ಲಾ ಕಡೆ ಮಾರುಕಟ್ಟೆ ವ್ಯವಸ್ಥೆ ಮಾಡು ತ್ತಿದ್ದೇವೆ. ತರಕಾರಿ, ಹಣ್ಣ ಹಂಪಲು ಸಾಗ ಣಿಕೆ ವಾಹನಕ್ಕೆ ಅನುಮತಿಯೂ ಬೇಕಾ ಗಿಲ್ಲ. ರೈತರು ಎಪಿಎಂಸಿಯಲ್ಲಿ ಮಾರಾಟ ಮಾಡಬಹುದು. ಇಲ್ಲವೇ ಮೈಸೂರು ಸುತ್ತಮುತ್ತ ಅವರೇ ನೇರವಾಗಿ ವ್ಯಾಪಾರ ಮಾಡಬಹುದು ಎಂದರು. ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮಾಜಿ ಸಚಿವ ಎ.ಹೆಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಮೇಯರ್ ತಸ್ನೀಂ, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶವಿದ್ದರೂ ಕೊರೊನಾ ಹಿನ್ನೆಲೆ ಯಲ್ಲಿ ಅತ್ಯಂತ ಸರಳವಾಗಿ ಆಚರಿಸುವ ಸನ್ನಿವೇಶ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಅಗತ್ಯವಿರುವ ಪ್ರತಿ ಯೊಬ್ಬರಿಗೂ ಊಟ ವ್ಯವಸ್ಥೆ ಮಾಡುವ ಹಾಗೂ ದಿನಸಿ ಪದಾರ್ಥ ವಿತರಿಸುವ ಕಾರ್ಯಕ್ರಮ ರೂಪಿಸಲು ಉದ್ದೇಶಿಸಲಾಗಿದೆ. -ಎಸ್.ಟಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವರು.

 

ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜನ್ಮದಿನವನ್ನು ಸರಳವಾಗಿ ಆಚ ರಣೆ ಮಾಡುವ ಅನಿವಾರ್ಯ ಎದುರಾ ಗಿದೆ. ಅದಾಗ್ಯೂ ಇಂದು ಎಲ್ಲರ ಮನೆ ಮನೆಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸಲಾಗುತ್ತಿದೆ. ಜೊತೆಗೆ ಇಂದು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಸ್ವಚ್ಛತೆ ಮಹತ್ವ ಸಾರಲಾಗುತ್ತಿದೆ. ವಿವಿಧ ಸಾಮಾಜಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ. – ಎಸ್.ಎ.ರಾಮದಾಸ್, ಮಾಜಿ ಸಚಿವರು, ಶಾಸಕರು.

Translate »