ಕೊರೊನಾದಿಂದ ಮುಕ್ತಿಗಾಗಿ ವೀರಶೈವ ಲಿಂಗಾಯತರಿಂದ ಮನೆಯಲ್ಲೇ ಇಷ್ಟಲಿಂಗ ಪೂಜೆ
ಮೈಸೂರು

ಕೊರೊನಾದಿಂದ ಮುಕ್ತಿಗಾಗಿ ವೀರಶೈವ ಲಿಂಗಾಯತರಿಂದ ಮನೆಯಲ್ಲೇ ಇಷ್ಟಲಿಂಗ ಪೂಜೆ

April 14, 2020
  • ಸುತ್ತೂರು ಮಠ ಸೇರಿದಂತೆ ಮಠ-ಮಾನ್ಯಗಳಲ್ಲೂ ಲಿಂಗಪೂಜೆ

ಮೈಸೂರು, ಏ.13(ಎಸ್‍ಪಿಎನ್)-ಕೊರೊನಾ ಮಹಾಮಾರಿಯಿಂದ ಪ್ರಪಂಚಕ್ಕೆ ಬಂದೊದಗಿರುವ ಗಂಡಾಂತರದಿಂದ ಸರ್ವರನ್ನು ರಕ್ಷಿಸುವಂತೆ ಮೈಸೂರಿನ ವೀರಶೈವ-ಲಿಂಗಾಯತ ಸಮಾಜ ಬಾಂಧ ವರು ತಾವಿರುವ ಸ್ಥಳ(ಮನೆಯಿಂದಲೇ) ದಿಂದಲೇ ಸೋಮವಾರ ಸಂಜೆ ಭಕ್ತಿ-ಭಾವ ದಿಂದ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.

ಸೋಮವಾರ ಸಂಜೆ ತಾವಿರುವ ಸ್ಥಳ ದಿಂದಲೇ ಸಾಮಾಜಿಕ ಅಂತರ ಕಾಯ್ದು ಕೊಂಡು (ನಿಮ್ಮ ಮನೆ ಮತ್ತು ಮಠದಲ್ಲಿ) ಇಷ್ಟಲಿಂಗ ಪೂಜೆ ನೆರವೇರಿಸಿ, ಮಾರಕ ವೈರಸ್ ಕೊರೊನಾದಿಂದ ಸರ್ವರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು. ಏ.9 ರಂದು ರಾಜ್ಯದ ಎಲ್ಲಾ ಮಠಾಧೀಶರು, ವೀರ ಶೈವ ಲಿಂಗಾಯತ ಸಮುದಾಯ ಬಂದು ಗಳಲ್ಲಿ ಪತ್ರ ಮುನೇನ ಮನವಿ ಮಾಡಿದ್ದರು.

ಮಹಾಸಭಾದ ಮನವಿಗೆ ಸ್ಪಂದಿಸಿರುವ ಮೈಸೂರು ಜಿಲ್ಲಾ ಘಟಕದ ಸದಸ್ಯರು ಮನೆಯಲ್ಲಿಯೇ ಕುಳಿತು ಇಷ್ಟಲಿಂಗ ಪೂಜೆ ನೆರವೇರಿಸಿ, ಮಾರಕ ವೈರಸ್‍ನಿಂದ ಸರ್ವರಿಗೂ ಆರೋಗ್ಯ ಭಾಗ್ಯ ಲಭಿಸಲಿ ಎಂದು ಭಗವಂತನಲ್ಲಿ ಭಕ್ತಿ-ಭಾವದಿಂದ ಪ್ರಾರ್ಥಿಸಿದ್ದಾರೆ. ಅಲ್ಲದೆ, ಮೈಸೂರಿನ ಸುತ್ತೂರು ಮಠ, ಹೊಸಮಠ, ಕುದೇರು ಮಠ ಸೇರಿದಂತೆ ಜಿಲ್ಲೆಯ ಎಲ್ಲಾ ಮಠ ಗಳಲ್ಲೂ ಇಷ್ಟಲಿಂಗ ಪೂಜೆ ನೆರವೇರಿಸಿ ಸಮಾಜ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.

ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ನಿರ್ದೇಶಕ ಎಲ್.ವಿ.ಲೋಕೇಶ್ ಕುಮಾರ್, ನಮ್ಮ ಮನೆಯಲ್ಲಿ ಪ್ರತಿದಿನ ಬೆಳಿಗ್ಗೆ ಇಷ್ಟಲಿಂಗ ಪೂಜೆ ನೆರವೇರಿಸು ತ್ತೇವೆ. ಆದರೆ, ವೀರಶೈವ ಮಹಾಸಭಾದ ಮನವಿ ಮೇರೆಗೆ, ಇಂದು ನಮ್ಮ ಮನೆ ಯಲ್ಲಿಯೇ ಕುಟುಂಬ ಸದಸ್ಯರೊಂದಿಗೆ ಸರ್ವರಿಗೂ ಒಳಿತು ಮಾಡುವಂತೆ ಭಗ ವಂತನಲ್ಲಿ ಪ್ರಾರ್ಥಿಸಿ, ಇಷ್ಟಲಿಂಗ ಪೂಜೆ ನೆರವೇರಿಸಿದ್ದೇವೆ. ಅದರಂತೆ ಸುತ್ತಮುತ್ತ ಲಿನ ಇತರೆ ಸದಸ್ಯರಿಗೂ ಇದರ ಬಗ್ಗೆ ಮನವರಿಕೆ ಮಾಡಿ, ಪೂಜೆ ಸಲ್ಲಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ಮಹಾಸಭಾ ಮನವಿ ಮೇರೆಗೆ ಇಂದು ಸಂಜೆ ಮೈಸೂರು ಸೇರಿದಂತೆ ರಾಜ್ಯಾ ದ್ಯಂತ ಏಕಕಾಲಕ್ಕೆ ಇಷ್ಟಲಿಂಗ ಪೂಜೆಯನ್ನು ಬಹುತೇಕ ಸದಸ್ಯರು ನೆರವೇರಿಸಿದ್ದಾರೆ ಎಂದು ತಿಳಿಸಿದರಲ್ಲದೆ. ಕೊರೊನಾ ಮಹಾ ಮಾರಿ ತಡೆಗಟ್ಟಲು ಹಗಲು-ರಾತ್ರಿ ಶ್ರಮಿಸುತ್ತಿರುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಇದರ ಬಗ್ಗೆ ಪರಿಣಾಮಕಾರಿಯಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಮಾಧ್ಯಮವರಿಗೂ ಶುಭವಾಗಲಿ ಎಂದು ತಿಳಿಸಿದರು.

Translate »