ಕೊರೊನಾ ಮಹಾಮಾರಿ ಉಲ್ಬಣಕ್ಕೆ ಗ್ರಹಗತಿಗಳ ಮೇಲಾಟ ಕಾರಣವೇ?
ಮೈಸೂರು

ಕೊರೊನಾ ಮಹಾಮಾರಿ ಉಲ್ಬಣಕ್ಕೆ ಗ್ರಹಗತಿಗಳ ಮೇಲಾಟ ಕಾರಣವೇ?

April 7, 2020

ಮೈಸೂರು, ಏ.6- ಮನುಕುಲವು ಎದುರಿಸುತ್ತಿರುವ ಕೊರೊನಾ ಸಂಕಟಕ್ಕೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಛಾಯಾ ಗ್ರಹಗಳಾದ (ಮೂಲತಃ ಚಂದ್ರ ಮತ್ತು ಭೂಮಿಯ ಅಕ್ಷದ ಛೇದಕ ಬಿಂದುಗಳು) ರಾಹು ಮತ್ತು ಕೇತುಗಳೇ ಕಾರಣವೆಂದು ಮೈಸೂರು ಜ್ಯೋತಿಷ್ಯಾಲಯದ ಜ್ಯೋತಿಷಿ ಶಿವಪ್ರಕಾಶ್ ತಿಳಿಸಿದ್ದು, ಯಾರೂ ಊಹಿಸಲಾಗದಷ್ಟು ಸಂಕಷ್ಟಕ್ಕೆ ಎಲ್ಲರನ್ನೂ ತುತ್ತಾಗಿಸಬಲ್ಲ ಶಕ್ತಿ ಈ ಎರಡು ಗ್ರಹಗಳಿಗೆ ಇದೆ ಎಂದಿದ್ದಾರೆ.

ರವಿ ಈ ಪಿಡುಗನ್ನು (ವೈರಸ್ ಮತ್ತು ಬ್ಯಾಕ್ಟೀರಿಯಾ) ಎದುರಿಸುವ ಸಾಮರ್ಥ್ಯ ಹೊಂದಿದ್ದು, ನಾವು ಈ ಸಂಕಷ್ಟ ಸಮಯವನ್ನು ಎದುರಿಸಲು ರವಿ, ರಾಹು, ಕೇತು ಮತ್ತು ಇತರ ಗ್ರಹಗಳ ಸ್ಥಾನಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಹುವು ಸೆಪ್ಟೆಂಬರ್ 13, 2019 ರಂದು ಆರಿದ್ರಾ ನಕ್ಷತ್ರ ಪ್ರವೇಶಿಸಿ ಪ್ರಬಲನಾಗಿದ್ದು, ಈ ಸಾಂಕ್ರಾಮಿಕವು ಅಂದಿನಿಂದಲೇ ಎಲ್ಲೆಡೆ ಹರಡಲು ಆರಂಭಿಸಿದರೂ, ಇದರ ಸುಳಿವು ಯಾರೂ ಅರಿಯಲಾಗಲಿಲ್ಲ. ನಂತರ ಜನವರಿ 15, 2020 ರಂದು ರವಿ ತನ್ನ ವೈರಿ ಶನಿಯ ಕ್ಷೇತ್ರವಾದ ಮಕರವನ್ನು ಪ್ರವೇಶಿಸಿದ್ದರಿಂದ ಈ ಪಿಡುಗಿನ ವಿರುದ್ಧ ಹೋರಾಡಲಾಗದೆ ದುರ್ಬಲಗೊಂಡ.

ಮೂಲಾ ನಕ್ಷತ್ರದ ಅಧಿಪತಿ ಕೇತು ಜನವರಿ 17, 2020 ರಂದು ಮೂಲಾ ನಕ್ಷತ್ರಕ್ಕೆ ಬಂದು ಸೇರಿದ. ದುರ್ಬಲನಾದ ರವಿ ಹಾಗೂ ವಿನಾಶಕಾರಿ ಗ್ರಹಗಳಾದ ರಾಹು ಮತ್ತು ಕೇತು ಗಳು ಪ್ರಬಲವಾದ ಕಾರಣದಿಂದ ಸಮಸ್ಯೆ ಉಲ್ಭಣಿಸಲು ಆರಂಭವಾಯಿತು. ಇದರಿಂದ ಇಡೀ ವಿಶ್ವವೇ ಈ ಪಿಡುಗಿ ನಿಂದ ತತ್ತರಿಸಲು ಶುರುವಾಯಿತು ಎಂದು ಹೇಳಿದ್ದಾರೆ.

ಫೆಬ್ರವರಿ 24, 2020ರಂದು ಕುಜನು ಕೇತುವನ್ನು ದಾಟಿ ದಾಗ ಕಾಲಸರ್ಪದೋಷ ಉಂಟಾಗಲು ಕಾರಣವಾದ (ವೇಗವಾಗಿ ಚಲಿಸುವ ಚಂದ್ರನನ್ನು ಹೊರತುಪಡಿಸಿ ಉಳಿದ ಎಲ್ಲಾ ಗ್ರಹಗಳು) ರಾಹು ಮತ್ತು ಕೇತುಗಳ ಒಂದೇ ಬದಿಯಲ್ಲಿ ಇದ್ದವು. ಹೀಗಾಗಿ ರಾಹು ಮತ್ತು ಕೇತು ಮತ್ತಷ್ಟು ಪ್ರಬಲರಾದರು. ರವಿ ಇನ್ನಷ್ಟು ದುರ್ಬಲಗೊಂಡು ವಿಶ್ವದ ಸ್ಥಿತಿ ಮತ್ತಷ್ಟು ವಿಷಮವಾಯಿತು ಎಂದಿದ್ದಾರೆ. ಮಾರ್ಚ್ 14, 2020 ರಂದು ರವಿಯು ತನ್ನ ಮಿತ್ರ ಗುರುವಿನ ಕ್ಷೇತ್ರವಾದ ಮೀನ ರಾಶಿಯನ್ನು ಪ್ರವೇ ಶಿಸಿದಾಗ ಇಡೀ ಜಗತ್ತು ಎಚ್ಚೆತ್ತು ಈ ಪಿಡುಗನ್ನು ಎದು ರಿಸಲು ಸನ್ನದ್ಧಗೊಂಡಿತಾ ದರೂ ಅಷ್ಟೊತ್ತಿಗಾಗಲೇ ಪರಿಸ್ಥಿತಿ ಕೈಮೀರಿತ್ತು.

ಏಪ್ರಿಲ್ 13, 2020 ರಂದು ರವಿಯು ತನ್ನ ಮಿತ್ರ ಕ್ಷೇತ್ರ ಹಾಗೂ ಉಚ್ಛ ಸ್ಥಾನವಾದ ಮೇಷವನ್ನು ಪ್ರವೇಶಿಸಲಿದ್ದು, ಆಗ ಮತ್ತೆ ಪ್ರಬಲಗೊಳ್ಳಲಿದ್ದಾನೆ. ಮೇ 4 ರವರೆಗೆ ಸೂರ್ಯ ಮೇಷ ರಾಶಿಯಲ್ಲಿಯೇ ಇರಲಿದ್ದು, ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದಾಗಿದೆ ಎಂದು ಶಿವಪ್ರಕಾಶ್ ತಿಳಿಸಿದ್ದಾರೆ.

ಮೇ 22ರಂದು ರಾಹುವು ಕುಜನ ಕ್ಷೇತ್ರವಾದ ಮೃಗಶಿರಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದು, ಅಲ್ಲಿ ದುರ್ಬಲಗೊಳ್ಳಲಿದ್ದಾನೆ. ಮೇ 29ರಂದು ಬುಧನು ರಾಹುವನ್ನು ದಾಟಿ ಮುಂದೆ ಸಾಗÀಲಿದ್ದು, ಆಗ ಕಾಲಸರ್ಪದೋಷ ಕೊನೆಗೊಳ್ಳಲಿದೆ. ಅಷ್ಟು ಹೊತ್ತಿಗೆ ಈ ಮಹಾಮಾರಿಯನ್ನು ಎದುರಿಸಲು ನಾವು ನಿರ್ಣಾಯಕವಾಗ ಬಲ್ಲ ಕೆಲವು ನಿರ್ಧಾರಗಳನ್ನು ತೆಗೆದುಕೊಂಡು ಕೋವಿಡ್-19 ಅನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಲಿದ್ದೇವೆ ಎಂದು ತಿಳಿಸಿದ್ದಾರೆ.

Translate »