ಅಗತ್ಯ ವಸ್ತು ಮಾರಾಟಕ್ಕೆ ಆನ್‍ಲೈನ್‍ನಲ್ಲಿ ಪಾಸ್ ವಿತರಣೆ
ಮೈಸೂರು

ಅಗತ್ಯ ವಸ್ತು ಮಾರಾಟಕ್ಕೆ ಆನ್‍ಲೈನ್‍ನಲ್ಲಿ ಪಾಸ್ ವಿತರಣೆ

April 9, 2020

https//docs.google.com  ಆನ್‍ಲೈನ್  ಲಿಂಕ್ ಮೂಲಕ ಅರ್ಜಿ ಸಲ್ಲಿಸಿ
ಮೈಸೂರು,ಏ.8(ಆರ್‍ಕೆ)- ಅಗತ್ಯ ದಿನಬಳಕೆ ವಸ್ತುಗಳಾದ ದಿನಸಿ, ಹಣ್ಣು-ತರಕಾರಿ, ಔಷಧಿಗಳನ್ನು ಮಾರಾಟ ಮಾಡುವ ವರ್ತಕರಿಗೆ ಮೈಸೂರು ನಗರಪಾಲಿಕೆಯಿಂದ ಆನ್‍ಲೈನ್ ಮೂಲಕ ಪಾಸ್‍ಗಳನ್ನು ವಿತರಿಸಲಾಗುವುದು ಎಂದು ನಗರಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ತಿಳಿಸಿದ್ದಾರೆ. ಅದೇ ರೀತಿ ಬಡವರು, ಕಟ್ಟಡ ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಸಲುವಾಗಿ ದಾನಿಗಳು ಮನೆ ಮನೆಗಳಿಗೆ ದಿನಬಳಕೆ ವಸ್ತುಗಳನ್ನು ಸರಬ ರಾಜು ಮಾಡುವುದಕ್ಕಾಗಿ ಹಾಗೂ ದಿನಬಳಕೆ ವಸ್ತುಗಳನ್ನು ವಿತರಿಸಲು ಬಯಸಿದಲ್ಲಿ hಣಣಠಿs//ಜoಛಿs.googಟe.ಛಿom ಆನ್‍ಲೈನ್ ಲಿಂಕ್ ಓಪನ್ ಮಾಡಿ ನಮೂನೆಯಲ್ಲಿ ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿದರೆ ಷರತ್ತಿನನ್ವಯ ಪಾಸ್‍ಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.

Translate »