ಬೇಜವಾಬ್ದಾರಿ ವರ್ತನೆ: ಪಾಲಿಕೆ ಕಂಟ್ರೋಲ್ ರೂಂ ಸಿಬ್ಬಂದಿ ವಜಾ
ಮೈಸೂರು

ಬೇಜವಾಬ್ದಾರಿ ವರ್ತನೆ: ಪಾಲಿಕೆ ಕಂಟ್ರೋಲ್ ರೂಂ ಸಿಬ್ಬಂದಿ ವಜಾ

April 9, 2020

ಮೈಸೂರು, ಏ. 8(ಆರ್‍ಕೆ)- ನಾಗರಿಕರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸಿದ ಮೈಸೂರು ಮಹಾ ನಗರಪಾಲಿಕೆ ಕಚೇರಿ ಕಂಟ್ರೋಲ್ ರೂಂ ಹೊರ ಗುತ್ತಿಗೆ ನೌಕರರಾದ ಕು.ಲತಾಕುಮಾರಿ ಅವರನ್ನು ಸೇವೆಯಿಂದ ತೆಗೆದು ಹಾಕಲಾಗಿದೆ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ತಿಳಿಸಿದ್ದಾರೆ.

ಕೋವಿಡ್-19 ಸಂಬಂಧ ಸಾರ್ವಜನಿಕರ ಕರೆಗೆ ಸಮರ್ಪಕ ಉತ್ತರ ನೀಡದೆ, ಸಂಬಂಧಪಟ್ಟ ಅಧಿಕಾರಿ ಗಳ ಗಮನಕ್ಕೂ ತಾರದೆ ನಿರ್ಲಕ್ಷ್ಯ ವಹಿಸಿರುವುದು ಹಾಗೂ ಜನರೊಂದಿಗೆ ಬೇಜವಾಬ್ದಾರಿ ವರ್ತನೆ ಪ್ರದ ರ್ಶಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಂತರ ಆರೋಪ ಸಾಬೀ ತಾದ ಹಿನ್ನೆಲೆಯನ್ನು ಸೇವೆಯಿಂದ ವಜಾ ಮಾಡಲಾ ಗಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »