ನಮಗೂ ಸಂಚಾರಕ್ಕೆ ಅವಕಾಶ ನೀಡಿ: ಆಟೋ ಚಾಲಕರ ಅಹವಾಲು
ಮೈಸೂರು

ನಮಗೂ ಸಂಚಾರಕ್ಕೆ ಅವಕಾಶ ನೀಡಿ: ಆಟೋ ಚಾಲಕರ ಅಹವಾಲು

April 9, 2020

ಮೈಸೂರು,ಏ.8(ವೈಡಿಎಸ್)-ಕೊರೊನಾ ಹರಡುವು ದನ್ನು ತಡೆಗಟ್ಟಲು ಏ.14ರವರೆಗೆ ಲಾಕ್ ಡೌನ್‍ಗೆ ಆದೇಶಿಸಿದ್ದು ಸ್ವಾಗತಾರ್ಹ. ಅಂದಿನಿಂದ ನಾವೂ ಮನೆಯಲ್ಲೇ ಉಳಿದಿದ್ದೇವೆ. ಆದರೆ, ದುಡಿಮೆ ಇಲ್ಲದಂತಾಗಿದ್ದರಿಂದ ಜೀವನ ನಡೆ ಸುವುದೇ ಕಷ್ಟÀವಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸುವುದು ಹೇಗೆಂಬ ಯೋಚನೆ ದಿನವೂ ಬಾಧಿಸುತ್ತಿದೆ. ಹಾಗಾಗಿ ಜಿಲ್ಲಾಡಳಿತ ವೃದ್ಧರು, ರೋಗಿ ಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಅವಕಾಶ ಕಲ್ಪಿಸಿದರೆ ನಮಗೂ ದುಡಿಮೆ ಆಗಲಿದೆ… ಕೆ.ಜಿ.ಕೊಪ್ಪಲಿನ ನಿವಾಸಿ, ಚಾಮರಾಜನಗರ ಮೂಲದ ಆಟೋ ಚಾಲಕ ಚಂದ್ರಶೇಖರ್ ಬೇಸರದ ಮಾತುಗಳು.

45 ವರ್ಷಗಳಿಂದ ಮೈಸೂರಿನಲ್ಲಿ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದೇನೆ. ನನಗೆ ಯಾವುದೇ ಆಸ್ತಿ ಇಲ್ಲ. ಇಬ್ಬರು ಹೆಣ್ಣುಮಕ್ಕಳೇ ನನ್ನ ಆಸ್ತಿ. ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದೇನೆ. ಲಾಕ್‍ಡೌನ್‍ಗೂ ಮೊದಲು ಪ್ರತಿ ದಿನ 500-600 ರೂ. ಸಂಪಾದನೆ ಆಗುತ್ತಿತ್ತು. ಅದರಲ್ಲಿ 200 ರೂ. ಗ್ಯಾಸ್‍ಗೆ ಖರ್ಚಾ ದರೂ 400 ರೂ. ಉಳಿಯುತ್ತಿತ್ತು. ಅದರಿಂದ ಹೇಗೋ ಜೀವನ ನಡೆಯುತ್ತಿತ್ತು.

ಮನೆಯಲ್ಲೇ ಲಾಕ್‍ಡೌನ್ ಆಗಿರುವುದರಿಂದ ಖರ್ಚಿಗೂ ಹಣವಿಲ್ಲದೆ ಪರಿತಪಿಸುವಂತಾಗಿದೆ. ಒಂದೊಂದು ದಿನವೂ ತಿಂಗಳನ್ನು ಕಳೆದಂತೆ ಅನು ಭವವಾಗುತ್ತಿದೆ. ಜೀವನ ನಿರ್ವಹಣೆ, ಬಾಡಿಗೆಗೆಂದು ಪ್ರತಿ ತಿಂಗಳೂ 10 ಸಾವಿರ ರೂ. ಮೀಸಲಿಡಬೇಕು. ಏ.14ರ ನಂತರವೂ ಲಾಕ್‍ಡೌನ್ ಮುಂದುವರೆದರೆ ಜೀವನವನ್ನೇ ನಡೆಸುವುದೋ ಅಥವಾ ಮಕ್ಕಳನ್ನು ಶಾಲೆಗೆ ಸೇರಿಸುವುದೋ ಎಂಬ ಆತಂಕ ಶುರು ವಾಗಿದೆ ಎಂದು ಅಳಲು ತೋಡಿಕೊಂಡರು.

ಲಾಕ್‍ಡೌನ್ ಮಧ್ಯೆಯೂ ಅಗತ್ಯ ವಸ್ತುಗಳಾದ ತರಕಾರಿ, ದಿನಸಿ ಅಂಗಡಿಗಳಿಗೆ ಅನುಮತಿ ನೀಡಿರುವು ದರಿಂದ ವರ್ತಕರು ಹೇಗೋ ವ್ಯಾಪಾರ ಮಾಡಿ ಜೀವನ ನಡೆಸಬಹುದು. ಆದರೆ, ವಾಹನಗಳ ಸಂಚಾರ ಬಂದ್ ಮಾಡಿದ್ದರಿಂದ ನನ್ನಂತಹ ಆಟೊ ಚಾಲಕರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಭವಿಷ್ಯದ ಚಿಂತೆ ಕಾಡು ತ್ತಿದೆ. ಹಾಗಾಗಿ ಜಿಲ್ಲಾಡಳಿತ ವಯೋವೃದ್ಧರು, ಸಾಮಾನ್ಯ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೋಗಳಿಗೆ ಅನುಮತಿ ನೀಡಿದರೆ ನಮ್ಮ ಜೀವನವೂ ಸುಧಾರಿ ಸುತ್ತದೆ ಎಂದರು. ಆಟೋ ಚಾಲಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಸರ್ಕಾರ, ಸಂಘ-ಸಂಸ್ಥೆಗಳು ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು.

Translate »