ಕೊರೊನಾ ಎಂಬ ಸೈತಾನನ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ
ಮೈಸೂರು

ಕೊರೊನಾ ಎಂಬ ಸೈತಾನನ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ

April 9, 2020

ಮೈಸೂರು,ಏ.8(ಆರ್‍ಕೆ)- ಕೊರೊನಾ ವೈರಸ್ ಎಂಬ ಮಾರಣಾಂತಿಕ ಸೈತಾನ ನನ್ನು ತೊಲಗಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಲು ಸಹಕರಿಸಿ ಎಂದು ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್. ಪ್ರಕಾಶ್ ಗೌಡ ಅವರು ಮುಸ್ಲಿಂ ಸಮುದಾಯದ ಮುಖಂಡರಿಗೆ ಮನವಿ ಮಾಡಿದ್ದಾರೆ.

ಮೈಸೂರಿನ ಮಿಲಾದ್ ಬಾಗ್ ಪಾರ್ಕ್, ಉದಯಗಿರಿ, ಶಾಂತಿನಗರ, ರಾಜೀವ್ ನಗರ ಸೇರಿದಂತೆ ವಿವಿಧ ಭಾಗದಲ್ಲಿ ಮಂಗಳ ವಾರ ಮತ್ತು ಬುಧವಾರ ಧಾರ್ಮಿಕ ಮುಖಂಡರೊಂದಿಗೆ ಕೊರೊನಾ ವೈರಸ್ ಸೋಂಕಿನ ಕುರಿತು ಜಾಗೃತಿ ಹಾಗೂ ಸೌಹಾದರ್À ಸಭೆಗಳಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಈ ಮಾರಣಾಂತಿಕ ರೋಗ ವಯಸ್ಸಾದವರು, ರೋಗಿಗಳು ಹಾಗೂ ಮಕ್ಕಳಿಗೆ ಸುಲಭವಾಗಿ ಹಾಗೂ ವೇಗ ವಾಗಿ ಹರಡುವುದರಿಂದ ಅದನ್ನು ಹೋಗ ಲಾಡಿಸಲು ಸಾಮಾಜಿಕ ಅಂತರ ಕಾಯ್ದು ಕೊಳ್ಳವುದೊಂದೇ ದಾರಿ ಎಂದರು.

ಸೋಂಕಿಗೆ ಔಷಧ ಲಭ್ಯವಿಲ್ಲದ ಕಾರಣ, ಹರಡದಂತೆ ತಡೆಯಲು ಸರ್ಕಾರ, ವೈದ್ಯರು, ಪೊಲೀಸರು, ಆರೋಗ್ಯ ಸಿಬ್ಬಂದಿಯಷ್ಟೇ ಅಲ್ಲದೆ, ಎಲ್ಲರೂ ಒಗ್ಗಟ್ಟಾಗಿ ಸಹಕರಿಸ ಬೇಕು. ಅನಿವಾರ್ಯ ಸಂದರ್ಭ ಹೊರತು ಪಡಿಸಿ ಉಳಿದ ಸಂದರ್ಭದಲ್ಲಿ ಮನೆಯಲ್ಲೇ ಉಳಿದು ಕೋವಿಡ್ ಅನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ನುಡಿದರು.

ಇದು ಯಾವುದೇ ಜಾತಿ, ವರ್ಗದ, ವ್ಯಕ್ತಿಯ ಅಥವಾ ಸಮುದಾಯದ ವಿರು ದ್ಧದ ಹೋರಾಟವಲ್ಲ. ಮನುಷ್ಯನ ಪ್ರಾಣ ವನ್ನು ಬಲಿ ತೆಗೆದುಕೊಳ್ಳುತ್ತಿರುವ ಕೊರೊನಾ ವೈರಸ್‍ನಿಂದ ಮುಕ್ತಿ ಪಡೆಯಲು ಪ್ರತಿ ಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು. ದೇವರಾಜ ಉಪ ವಿಭಾಗದ ಎಸಿಪಿ ಶಶಿಧರ, ಎನ್.ಆರ್. ಉಪವಿಭಾಗದ ಎಂ.ಶಿವಶಂಕರ್, ಪೊಲೀಸ್ ಇನ್ಸ್‍ಪೆಕ್ಟರ್‍ಗಳು ಸೌಹಾರ್ದ ಹಾಗೂ ಜಾಗೃತಿ ಸಭೆಗಳಲ್ಲಿ ಪಾಲ್ಗೊಂಡಿದ್ದರು.

Translate »