ದೀಪದ ಸಂಕಲ್ಪ
ಮೈಸೂರು

ದೀಪದ ಸಂಕಲ್ಪ

April 6, 2020

ನವದೆಹಲಿ,ಏ.5: ಕೊರೊನಾ ಎಂಬ ಕತ್ತಲೆ ಭೀತಿ ಯನ್ನು ತೊಲಗಿಸಿ ಬೆಳಕಿನೆಡೆಗೆ ಸಾಗೋಣ, ಲಾಕ್‍ಡೌನ್ ನಿಂದ ಉಂಟಾಗಿರುವ ಏಕಾಂಗಿತನ ಭಾವನೆ ನಿವಾರಿ ಸುವುದರ ಜೊತೆಗೆ ಯಾರೂ ಏಕಾಂಗಿಯಲ್ಲ ‘ತಮ ಸೋಮ ಜ್ಯೋತಿರ್ಗಮಯ’ ಸಂದೇಶ ವಿನಿಮಯ ಮಾಡಿಕೊಳ್ಳುವ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ವಿದ್ಯುತ್ ದೀಪಗಳ ಆರಿಸಿ ಜ್ಯೋತಿ ಬೆಳಗಿಸಬೇಕೆಂದು ನೀಡಿದ್ದ ಕರೆಯನ್ನು ಇಡೀ ದೇಶವೇ ಚಾಚೂ ತಪ್ಪದೇ ಪಾಲಿಸಿದೆ.

ರಾತ್ರಿ 9 ಗಂಟೆಗೆ ಸರಿಯಾಗಿ ಪ್ರಧಾನಿ ಮೋದಿ, ಸಂಸ್ಕೃತ ಶ್ಲೋಕ ಪಠಿಸುವ ಮೂಲಕ ಆರೋಗ್ಯ, ಬುದ್ಧಿ, ಸಂಪತ್ತು ವೃದ್ಧಿಸಲಿ, ಶತ್ರು ಸಂಹಾರವಾಗಲಿ ಎಂದು ಪ್ರಾರ್ಥಿಸುತ್ತ ದೀಪ ಬೆಳಗಿದರು.

ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಡಿ.ವಿ. ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬಾ ರಾಮ್‍ದೇವ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ, ಸೂಪರ್‍ಸ್ಟಾರ್ ರಜನಿಕಾಂತ್, ಬಾಲಿವುಡ್ ನಟ ರಾದ ಅಕ್ಷಯ್‍ಕುಮಾರ್, ಅರ್ಜುನ್ ರಾಮ್‍ಪಾಲ್, ರಣ ವೀರ್ ಸಿಂಗ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕೃತಿ ಸನೋನಿ, ರವೀನಾ ತಂಡನ್, ಕನ್ನಡ ಚಿತ್ರ ರಂಗದ ನಟ-ನಟಿಯರಾದ ಸುದೀಪ್, ರಾಧಿಕಾ, ತಾರಾ ಸೇರಿದಂತೆ ಕೇಂದ್ರ, ರಾಜ್ಯ ಸಚಿವರು, ಶಾಸಕರು ಹಾಗೂ ಸಮಾಜದ ಎಲ್ಲಾ ಸ್ತರದ ಜನತೆ ದೀಪ ಬೆಳಗಿಸುವ ಮೂಲಕ ಮಹಾಮಾರಿ ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಪ್ರಧಾನಿ ಮೋದಿ ಅವರ ತಾಯಿ ಹೀರಾ ಬೆನ್ ತಮ್ಮ ನಿವಾಸದಲ್ಲಿ ಎಲ್ಲಾ ವಿದ್ಯುತ್ ದೀಪಗಳನ್ನು ನಂದಿಸಿ, ಮಣ್ಣಿನ ದೀಪಗಳನ್ನು ಬೆಳಗಿಸಿದ್ದಾರೆ. ಈಗಾಗಲೇ ದೇಶಾದ್ಯಂತ 3000ಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿತರಿದ್ದು, 83ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ವಿದೇಶಗಳಲ್ಲಿ ಕೊರೊನಾ ಮಹಾಮಾರಿ ಈಗಾಗಲೇ ಲಕ್ಷಾಂತರ ಜನರನ್ನು ಪೀಡಿಸುತ್ತಿದ್ದು, ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಇದರಿಂದ ಎಚ್ಚೆತ್ತ ಪ್ರಧಾನಿ ಮೋದಿ ಕೊರೊನಾಗೆ ಕಡಿವಾಣ ಹಾಕಲು ಇಡೀ ದೇಶದಲ್ಲೇ ಲಾಕ್‍ಡೌನ್ ವಿಧಿಸಿದ್ದಾರೆ. ಪ್ರಧಾನಿ ಮೋದಿ ಅವರ ಕರೆಯಂತೆ ಮಾರ್ಚ್ 22ರಂದು ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಎಚ್ಚರ ಮೂಡಿಸುವುದರ ಜೊತೆಗೆ ಈ ಮಹಾಮಾರಿಯ ವಿರುದ್ಧ ಸೆಣಸುತ್ತಿರುವ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರನ್ನು ಅಭಿನಂದಿಸಲಾಗಿತ್ತು. ಇದಾದ ನಂತರ ಇಂದು ದೀಪ ಬೆಳಗಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಜನರ ಸಹಕಾರದ ಜೊತೆಗೆ ಸಹಭಾಗಿತ್ವವನ್ನು ಪಡೆಯುವ ಪ್ರಯತ್ನವಾಗಿ ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಸದುದ್ದೇಶಿತ ಮಾರ್ಗವನ್ನು ಅನುಸರಿಸಿದರು.

ಇದಕ್ಕೆ ವಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾದರೂ ದೇಶದ ಜನತೆ ಪ್ರಧಾನಿಯವರ ಸಂದೇಶವನ್ನು ಚಾಚೂ ತಪ್ಪದೇ ಪಾಲಿಸಿ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಇತಿಶ್ರೀ ಹಾಡುವ ಸಂಕಲ್ಪ ತೊಟ್ಟಿದ್ದಾರೆ. ಮಕ್ಕಳಿಂದ ಹಿಡಿದು ವಯೋವೃದ್ಧರಾದಿಯಾಗಿ ದೀಪ ಬೆಳಗಿಸಿ, ದೇಶಕ್ಕೆ ಒದಗಿರುವ ಅಪಾಯ ದೂರ ಮಾಡುವ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ.

Translate »