ವ್ಯಕ್ತಿ ಹತ್ಯೆ ಪ್ರಕರಣ: ಇಬ್ಬರ ಬಂಧನ
ಮೈಸೂರು ಗ್ರಾಮಾಂತರ

ವ್ಯಕ್ತಿ ಹತ್ಯೆ ಪ್ರಕರಣ: ಇಬ್ಬರ ಬಂಧನ

April 7, 2020

ಮಲ್ಕುಂಡಿ, ಏ.6(ಚನ್ನಪ್ಪ)- ಜಮೀನಿಗೆ ದಾರಿ ಬಿಡುವ ವಿಚಾರದಲ್ಲಿ ಹಲ್ಲೆ ನಡೆಸಿ ವ್ಯಕ್ತಿ ಹತ್ಯೆಗೈದಿದ್ದ ಇಬ್ಬರು ಆರೋಪಿ ಗಳನ್ನು ಬಂಧಿಸುವಲ್ಲಿ ಹುಲ್ಲಹಳ್ಳಿ ಪೆÇಲೀಸರು ಯಶಸ್ವಿಯಾ ಗಿದ್ದು, ಮತ್ತೋರ್ವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ.

ನಂಜನಗೂಡು ತಾಲೂಕಿನ ರಾಜೂರು ಗ್ರಾಮದ ಅಶೋಕ್, ಚೇತನ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ಪರಶಿವ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳು ಜಮೀನಿಗೆ ದಾರಿ ಬಿಡುವ ವಿಚಾರದಲ್ಲಿ ಶನಿವಾರ ಆದೇ ಗ್ರಾಮದ, ದಾಯಾದಿಯೂ ಆದ ರಮೇಶ್ ಮೇಲೆ ಹಲ್ಲೆ ನಡೆÀಸಿ ಹತ್ಯೆಗೈದಿದ್ದರು ಎನ್ನಲಾಗಿದ್ದು, ಘಟನೆ ಬಳಿಕ ತಲೆ ಮರೆಸಿಕೊಂಡಿದ್ದರು. ಈ ಸಂಬಂಧ ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ಆರೋಪಿಗಳಾದ ಚೇತನ, ಅಶೋಕ್‍ರನ್ನು ಹೆಚ್.ಡಿ.ಕೋಟೆ ತಾಲೂಕಿನ ಚನ್ನಗೌಡನಹಳ್ಳಿ ಯಲ್ಲಿ ಸಿಪಿಐ ರಾಜಶೇಖರ ನೇತೃತ್ವದಲ್ಲಿ ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹುಲ್ಲಹಳ್ಳಿ ಠಾಣೆ ಎಸ್‍ಐ ಸುರೇಂದ್ರ ತಿಳಿಸಿದ್ದಾರೆ. ಕಾರ್ಯಚರಣೆಯಲ್ಲಿ ಸಿಬ್ಬಂದಿ ಗುರು, ಭರತ್ ಮಹೇಂದ್ರ ಭಾಗವಹಿಸಿದ್ದರು.

Translate »