ತೆಲಂಗಾಣದ ಬೆಡಗಿ ಮಾನಸ ವಾರಣಾಸಿ ಮುಡಿಗೆ ಮಿಸ್ ಇಂಡಿಯಾ ಕಿರೀಟ
ಮೈಸೂರು

ತೆಲಂಗಾಣದ ಬೆಡಗಿ ಮಾನಸ ವಾರಣಾಸಿ ಮುಡಿಗೆ ಮಿಸ್ ಇಂಡಿಯಾ ಕಿರೀಟ

February 12, 2021

ಹೈದರಾಬಾದ್, ಫೆ.11- ತೆಲಂಗಾಣದ 23 ವರ್ಷದ ಬೆಡಗಿ ಮಾನಸ ವಾರಣಾಸಿ ಅವರು ವಿಎಲ್ ಸಿಸಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಕಿರೀಟ ಮುಡಿ ಗೇರಿಸಿಕೊಂಡಿದ್ದಾರೆ. ಬುಧವಾರ ರಾತ್ರಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ತೆಲಂಗಾಣದ ಎಂಜಿನಿ ಯರ್ ಮಾನಸ ವಾರಣಾಸಿ ಅವರು ಮಿಸ್ ಇಂಡಿಯಾ ವರ್ಲ್ಡ್ 2020 ಕಿರೀಟವನ್ನು ತಮ್ಮದಾಗಿಸಿಕೊಂಡರು. ಹರಿಯಾಣದ ಮಾಣಿಕಾ ಮಿಸ್ ಇಂಡಿಯಾ ಗ್ರ್ಯಾಂಡ್ 2020 ಆಗಿ ಹೊರಹೊಮ್ಮಿದರೆ, ಉತ್ತರ ಪ್ರದೇಶದ ಮಾನ್ಯ ಸಿಂಗ್ ರನ್ನರ್ ಅಪ್ ಆಗಿದ್ದಾರೆ. ಮಾನಸ ವಾರಣಾಸಿ ಅವರು ಈ ವರ್ಷ ಡಿಸೆಂಬರ್ ನಲ್ಲಿ ನಡೆಯಲಿರುವ 70ನೇ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತ ವನ್ನು ಪ್ರತಿನಿಧಿಸಲಿದ್ದಾರೆ.

Translate »