ಕೋವಿಡ್ ವ್ಯಾಕ್ಸಿನೇಷನ್ ಮುಗಿದ ತಕ್ಷಣ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ
ಮೈಸೂರು

ಕೋವಿಡ್ ವ್ಯಾಕ್ಸಿನೇಷನ್ ಮುಗಿದ ತಕ್ಷಣ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ

February 12, 2021

ಪಶ್ಚಿಮ ಬಂಗಾಳ,ಫೆ.11-ದೇಶದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಮುಗಿದ ತಕ್ಷಣ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ(ಸಿಎಎ) ಜಾರಿಗೊಳಿಸುವ ಮೂಲಕ ನಿಮ್ಮೆ ಲ್ಲರಿಗೂ ಪೌರತ್ವ ನೀಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಠಾಕೂರ್ ನಗರದ ಮಾಟುವಾ ಕೋಟೆಯಲ್ಲಿ ಸಾರ್ವ ಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಸಿಎಎಗೆ ಮುಸ್ಲಿಮರ ಪೌರತ್ವ ಕಸಿದು ಕೊಳ್ಳುವ ಯಾವುದೇ ನಿಬಂಧನೆ ಇಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಕಳೆದ 70 ವರ್ಷ ಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಜನರಿಗೆ ಪೌರತ್ವ ನೀಡಲು ನಾವು ಬಯಸುತ್ತೇವೆ. ವದಂತಿಗಳಿಗೆ ಗುರಿಯಾಗಬೇಡಿ” ಎಂದು ಅಮಿತ್ ಶಾ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಅಲ್ಪಸಂಖ್ಯಾತರ ದಾರಿ ತಪ್ಪಿಸುತ್ತಿವೆ. ಸಿಎಎ ಜಾರಿಗೊಳಿಸುವುದರಿಂದ ಯಾವುದೇ ಅಲ್ಪ ಸಂಖ್ಯಾತರ ಪೌರತ್ವಕ್ಕೆ ಸಮಸ್ಯೆಯಾಗುವುದಿಲ್ಲ ಎಂದು ಭರವಸೆ ನೀಡಿದರು. 1.8 ಕೋಟಿ ಪ್ರಬಲ ಮಾಟುವಾ ಸಮುದಾಯ ಪಶ್ಚಿಮ ಬಂಗಾಳದ ಸುಮಾರು 70 ವಿಧಾನಸಭಾ ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಪೌರತ್ವ ನೀಡುವ ಭರವಸೆ ನೀಡಿದ ನಂತರ 2019ರಲ್ಲಿ ಈ ಮಾಟುವಾ ಸಮುದಾಯ ತಮ್ಮ ನಿಷ್ಠೆಯನ್ನು ಟಿಎಂಸಿಯಿಂದ ಬಿಜೆಪಿಗೆ ಶಿಫ್ಟ್ ಮಾಡಿದ್ದಾರೆ.

Translate »