ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮೈಸೂರಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮೈಸೂರಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

January 25, 2020

ಮೈಸೂರು: ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಕಾಯ್ದೆ ಜಾರಿ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಧರಣಿ ನಡೆಸಿದ ಪ್ರತಿಭಟ ನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಿಎಎ ಕಾಯ್ದೆ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುತ್ತದೆ. ಈ ಕಾಯ್ದೆ ಸಂವಿಧಾನದ ಅನುಚ್ಛೇದ 14ರ ನೀತಿಸಂಹಿತೆ ಉಲ್ಲಂ ಘಿಸುತ್ತದೆ. ಅನುಚ್ಛೇದ 14ರ ಅನುಸಾರ ಕಾನೂನಿನ ಮುಂದೆ ಎಲ್ಲರೂ ಸಮಾನರು. ಆದರೆ ಸಿಎಎ ಧರ್ಮದ ಆಧಾರದಲ್ಲಿ ಮುಸ್ಲಿಂರನ್ನು ಪ್ರತ್ಯೇಕತೆ ಮತ್ತು ತಾರ ತಮ್ಯದಿಂದ ನೋಡುತ್ತದೆ ಎಂದು ಪ್ರತಿ ಭಟನಾಕಾರರು ಆರೋಪಿಸಿದರು.

ಅಲ್ಲದೆ ಅವರಿಗೆ ಸಮಾನತೆ ಕಲ್ಪಿಸುವು ದಿಲ್ಲ. ಭಾರತದ ನೆರೆ ದೇಶಗಳಾದ ಪಾಕಿ ಸ್ತಾನದಲ್ಲಿ ಅಹಮದೀಯರು, ಶ್ರೀಲಂಕಾ ದಲ್ಲಿ ತಮಿಳರು, ಮಯನ್ಮಾರ್‍ನಲ್ಲಿ ರೋಹಿಂಗ್ಯ, ಆಫ್ಘಾನಿಸ್ತಾನದಲ್ಲಿ ಹಜಾರ ಸಮುದಾಯಗಳು ಅಲ್ಪಸಂಖ್ಯಾತರಾಗಿ ದ್ದಾರೆ. ಆದರೆ ಇವರನ್ನು ಪರಿಗಣಿಸಿಲ್ಲ. ಮುಸ್ಲಿಂರನ್ನು ಒಳಗೊಂಡಂತೆ ಇವರೆಲ್ಲಾ ಭಾರತಕ್ಕೆ ಬಂದರೆ ಅವರಿಗೆ ಪೌರತ್ವ ದೊರೆ ಯುವುದಿಲ್ಲ. ಇವರನ್ನು ಅಕ್ರಮ ವಲಸಿ ಗರು ಎಂದು ಹಣೆಪಟ್ಟಿ ಕಟ್ಟುತ್ತಾರೆ. ಇದು ಮಾನವೀಯತೆಯಲ್ಲ ಎಂದು ಕಿಡಿಕಾರಿದರು.

ಈ ಕಾಯ್ದೆ ಭಾರತದ ನಾಗರಿಕರನ್ನು ಹಿಂದೂ ವರ್ಸಸ್ ಮುಸ್ಲಿಂ ಎಂದು ವಿಭ ಜನೆ ಮಾಡುತ್ತದೆ. ಪಾಕಿಸ್ತಾನ, ಆಫ್ಘಾನಿ ಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧರ್ಮದ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾದವರಿಗೆ ಪೌರತ್ವ ಎಂದು ಈ ಸಿಎಎ ಕಾಯ್ದೆಯಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಆದರೆ ಬಹಿರಂಗವಾಗಿ ಮೋದಿ-ಶಾ ಮತ್ತು ಬಿಜೆಪಿ ಯವರು ಧರ್ಮದ ಕಾರಣಕ್ಕೆ ದೌರ್ಜ ನ್ಯಕ್ಕೆ ಒಳಗಾದವರು ಎಂದು ತಪ್ಪಾಗಿ, ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಈ ಸಿಎಎ ಕೇವಲ ಕೊಡುತ್ತದೆ ಆದರೆ ಕಸಿದುಕೊಳ್ಳುವುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ ಎನ್‍ಆರ್‍ಸಿ ಮೂಲಕ ಇಲ್ಲಿ ನೂರಾರು ವರ್ಷಗಳಿಂದ ಬದುಕಿದ ತಳ ಸಮುದಾಯ ಗಳು, ಮುಸ್ಲಿಮರು, ಆದಿವಾಸಿಗಳು, ಅಲೆ ಮಾರಿಗಳ ಪೌರತ್ವವನ್ನು ಕಸಿದು ಕೊಳ್ಳು ತ್ತದೆ ಎಂದು ವಿಷಾದಿಸಿದರು.

ಎನ್‍ಆರ್‍ಸಿಯಲ್ಲಿ ದೇಶದಲ್ಲಿ ನೆಲೆಸಿ ರುವ ಜನರು ತಮ್ಮ ಪೌರತ್ವ ಸಾಬೀತು ಪಡಿಸಬೇಕು. ಆ ಮೂಲಕ ದೇಶದ ನಾಗರಿ ಕರೆಂದು ನೋಂದಣಿ ಮಾಡಿಕೊಳ್ಳಬೇಕು. ನೂರಾರು ವರ್ಷಗಳಿಂದ ನಮ್ಮ ಪೆÇೀಷ ಕರು ನೆಲೆಸಿದ್ದಾರೆ. ನಾವೂ ಇಲ್ಲಿ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಕಾರ್ಡ್, ಪಾಸ್‍ಪೆÇೀರ್ಟ್‍ಗಳನ್ನು ಹೊಂದಿz್ದÉೀವೆ. ಅಧಿಕೃತವಾಗಿ ಇಲ್ಲಿನ ಪೌರರೆಂದು ಪರಿ ಗಣಿಸಲಾಗಿದೆ. ಹೀಗಿದ್ದರೂ ನಮ್ಮ ಪೌರತ್ವ ಪ್ರಶ್ನಿಸಲು ಪ್ರಭುತ್ವಕ್ಕೆ ಯಾವ ಅಧಿಕಾರವೂ ಇಲ್ಲ. ಇದು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮಾನವತೆಯ ವಿರೋಧಿಯಾಗಿ ರುವ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಎನ್ನುವ ಕರಾಳ ಶಾಸನಗಳಿಂದ ಭಾರತ ವನ್ನು ರಕ್ಷಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಬಡಗಲ ಪುರ ನಾಗೇಂದ್ರ, ದಸಂಸದ ಕಾರ್ಯ ಬಸ ವಣ್ಣ, ದೊಡ್ಡಸಿದ್ದು ಹಾದನೂರು, ಸೋಮಣ್ಣ ಬನ್ನಹಳ್ಳಿ, ಚಾಮರಾಜು ಇಲವಾಲ, ಪುಟ್ಟ ಲಕ್ಷ್ಮಮ್ಮ, ಚಂದ್ರುಕಳ್ಳಿ ಮುದ್ದನಹಳ್ಳಿ, ವಸಂತ ವನ್ನೇನಹಳ್ಳಿ, ನಾಗರಾಜು ಅಶೋಕಪುರಂ, ಸುನೀತ, ಶಿವಕುಮಾರ್, ಬಸವರಾಜು ದೇವರಸನಹಳ್ಳಿ, ಕಿರಿಚಾಜಿ ಗಜೇಂದ್ರ, ಬಸವರಾಜು ಬನ್ನಹಳ್ಳಿ, ಮಹದೇವು ಗಂಧನಹಳ್ಳಿ, ಮಾದೇಶ್ ಟೈಲರ್ ಸೇರಿ ದಂತೆ ಹಲವರು ಪಾಲ್ಗೊಂಡಿದ್ದರು.

Translate »