ನಾಳೆ ಮೈಸೂರು ವಿವಿ ಮಹಿಳಾ ಸ್ಪೋಟ್ರ್ಸ್ ಹಾಸ್ಟೆಲ್ ಕಟ್ಟಡ ಉದ್ಘಾಟನೆ
ಮೈಸೂರು

ನಾಳೆ ಮೈಸೂರು ವಿವಿ ಮಹಿಳಾ ಸ್ಪೋಟ್ರ್ಸ್ ಹಾಸ್ಟೆಲ್ ಕಟ್ಟಡ ಉದ್ಘಾಟನೆ

January 25, 2020

ಮೈಸೂರು: ಮೈಸೂರಿನ ಸರಸ್ವತಿಪುರಂನ ಡಾ.ಎಸ್.ರಾಧಾ ಕೃಷ್ಣನ್ ಅಧ್ಯಯನ ಕೇಂದ್ರದ ಪಕ್ಕದಲ್ಲಿ ನಿರ್ಮಿಸಿರುವ ಮಹಿಳಾ ಸ್ಪೋಟ್ರ್ಸ್ ಹಾಸ್ಟೆಲ್ ಕಟ್ಟಡ ಜನವರಿ 26ರಂದು ಉದ್ಘಾಟನೆಗೊಳ್ಳಲಿದೆ. ಭಾನುವಾರ ಬೆಳಿಗ್ಗೆ 8.30 ಗಂಟೆಗೆ ರಾಜವಂಶಸ್ಥ ಯದು ವೀರ ಕೃಷ್ಣದತ್ತ ಚಾಮರಾಜ ಒಡೆ ಯರ್ ಅವರು ಮೈಸೂರು ವಿಶ್ವವಿದ್ಯಾ ನಿಲಯದ ದೈಹಿಕ ಶಿಕ್ಷಣ ವಿಭಾಗದ ಮಹಿಳಾ ವಿದ್ಯಾರ್ಥಿನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸುವರು ಎಂದು ವಿಶ್ವವಿದ್ಯಾನಿಲಯದ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಕುಮಾರ್ ತಿಳಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯವು 1.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೆಲಮಹಡಿ ಮತ್ತು ಮೊದಲ ಮಹಡಿಯ ಕಟ್ಟಡದಲ್ಲಿ 18 ಕೊಠಡಿಗಳು, ಅಡುಗೆ ಮನೆ, ಡೈನಿಂಗ್ ಹಾಲ್ ಇವೆ. ಪ್ರತಿ ಕೊಠಡಿಯಲ್ಲಿ 6 ವಿದ್ಯಾರ್ಥಿನಿಯರು ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಮಹಿಳಾ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿ ನಿಯರ ಪ್ರವೇಶಕ್ಕೆ ಬೇಡಿಕೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಸರಸ್ವತಿಪುರಂನ ಗೆಸ್ಟ್‍ಹೌಸ್ ಆವರಣ ದಲ್ಲಿರುವ ರಮ್ಯ ಹೋಟೆಲ್ ಎದುರಿನ ಗೆಸ್ಟ್‍ಹೌಸ್ ಆವರಣದ ಖಾಲಿ ಜಾಗ ದಲ್ಲಿ ನೂತನ ಹಾಸ್ಟೆಲ್ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದೂ ಕುಮಾರ್ ತಿಳಿಸಿದರು.

Translate »