ಆರೋಪಿ ಆದಿತ್ಯರಾವ್ ಮಾನಸಿಕ  ಅಸ್ವಸ್ಥ ಎಂದು ಪ್ರಕರಣ ಮುಚ್ಚಿ ಹಾಕುವ ಯತ್ನ
ಮೈಸೂರು

ಆರೋಪಿ ಆದಿತ್ಯರಾವ್ ಮಾನಸಿಕ ಅಸ್ವಸ್ಥ ಎಂದು ಪ್ರಕರಣ ಮುಚ್ಚಿ ಹಾಕುವ ಯತ್ನ

January 25, 2020

ಮೈಸೂರು: ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಬಾಂಬ್ ಇರಿ ಸುವ ಮೂಲಕ ಇಡೀ ನಗರವನ್ನೇ ತಲ್ಲಣ ಗೊಳಿಸಿದ್ದ ಆದಿತ್ಯ ರಾವ್‍ನನ್ನು ಮಾನ ಸಿಕ ಅಸ್ವಸ್ಥ ಎಂದು ಹೇಳುವ ಮೂಲಕ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿರುವ ಗೃಹ ಸಚಿವ ಬಸವ ರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡಬೇಕು ಎಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಒತ್ತಾಯಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಬಾಂಬ್ ಇರಿಸಿದ್ದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಆತನ ಪೂರ್ವಾಪರ ಪರಿಶೀಲಿಸದೇ, ಪ್ರಕರಣದ ತನಿಖಾ ಹಂತ ದಲ್ಲಿರುವಾಗಲೇ ಸಚಿವರ ಇಂತಹ ಹೇಳಿಕೆ ಆಕ್ಷೇಪಾರ್ಹವಾಗಿದೆ ಎಂದು ಟೀಕಿಸಿದರು.

ಬಾಂಬ್ ಇರಿಸಿದ್ದಾತ ಆದಿತ್ಯರಾವ್ ಬದಲು ಯಾವುದಾದರೂ ಖಾನ್ ಆಗಿ ದ್ದಲ್ಲಿ ಯಾವ ರೀತಿ ನೋಡಲಾಗುತ್ತಿತ್ತು ಎಂಬುದನ್ನೂ ಊಹಿಸಬಹುದಾಗಿದೆ. ಅದೊಂದು ಭಯೋತ್ಪಾದಕ ಪ್ರಕರಣ ಎಂದು ಪರಿಗಣಿಸದೇ ಇರುವುದು ಸಹ ಪ್ರಶ್ನಾರ್ಹವಾಗಿದೆ ಎಂದರು.

ಮಂಗಳೂರಿನಲ್ಲಿ ನಡೆದ ಗಲಭೆಗೆ ಪ್ರತೀ ಕಾರವಾಗಿ ಯಾರೋ ಬಾಂಬ್ ಇಟ್ಟಿರ ಬಹುದು ಎಂದು ಹೇಳಿರುವ ಪ್ರಹ್ಲಾದ ಜೋಷಿ ಕ್ಷಮೆ ಕೇಳಬೇಕು. ಮಸೀದಿಗಳಲ್ಲಿ ಬಾಂಬ್ ಇದೆ ಎಂದು ಹೇಳಿಕೆ ನೀಡಿರುವ ಶಾಸಕ ರೇಣುಕಾಚಾರ್ಯ ಅವರು ಅವು ಎಲ್ಲಿದೆ ಎಂಬುದನ್ನು ತೋರಿಸುವಂತೆ ಪೊಲೀಸರು ಕೇಳಬೇಕು. ಧರ್ಮದ ಆಧಾ ರದ ಮೇಲೆ ಅಪರಾಧ ಕೃತ್ಯ ಅಳೆಯುವು ದನ್ನು ಮಾಧ್ಯಮಗಳು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಪ್ರಕರಣದ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಪ್ರತಾಪ್‍ಸಿಂಹ ಇನ್ನಿತರರು ಮೌನ ವಹಿಸಿರುವುದು ಪ್ರಶ್ನಾರ್ಹವಾಗಿದೆ ಎಂದರು.

ಪದಾಧಿಕಾರಿ ಪುಟ್ಟನಂಜಯ್ಯ ಮಾತ ನಾಡಿ, ಒಂದು ಧರ್ಮವನ್ನು ಸೀಮಿತ ಗೊಳಿಸಿ, ಸಂಘಟನೆಗಳ ವಿರುದ್ಧ ಲಂಗು ಲಗಾಮಿಲ್ಲದೇ ಮಾತನಾಡುತ್ತಿರುವ ಗೃಹ ಸಚಿವರನ್ನು ಮುಖ್ಯಮಂತ್ರಿ ಯಡಿ ಯೂರಪ್ಪ ಕೂಡಲೇ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಅಮ್ಜದ್ ಖಾನ್, ಮನ್ಸೂರ್ ಉಪಸ್ಥಿತರಿದ್ದರು.

Translate »