ತೈಲಬೆಲೆ ಏರಿಕೆ ಖಂಡಿಸಿ ಎಸ್‍ಡಿಪಿಐ ಪ್ರತಿಭಟನೆ
ಹಾಸನ

ತೈಲಬೆಲೆ ಏರಿಕೆ ಖಂಡಿಸಿ ಎಸ್‍ಡಿಪಿಐ ಪ್ರತಿಭಟನೆ

September 9, 2018

ಹಾಸನ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಹೇಮಾವತಿ ಪ್ರತಿಮೆ ಬಳಿ ಜಮಾ ಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲದ ಬೆಲೆಯೊಂದಿಗೆ ಹೋಲಿಸಿದರೆ ಭಾರ ತೀಯರು ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಮಾಡುತ್ತಿರುವ ವೆಚ್ಚ ಹೆಚ್ಚಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪೆಟ್ರೋ ಲಿಯಂ ಉತ್ಪನ್ನ ಬೆಲೆ ಹೆಚ್ಚುವ ಮೂಲಕ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹಣ ಕಸಿಯುತ್ತಿದೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರವು ತನ್ನದೇ ದೇಶ ವಾಸಿ ಗಳಿಗೆ ನಿಗದಿಪಡಿಸಿದ ದರದಲ್ಲಿ ಅರ್ಧ ಕ್ಕಿಂತ ಕಡಿಮೆ ಬೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡು ತ್ತಿದೆ. ಅಧಿಕಾರಕ್ಕೆ ಬರುವ ಮೊದಲು ಪೆಟ್ರೋಲ್ ಬೆಲೆಯ ವಿರುದ್ಧ ಕೂಗಾಡಿ ರಸ್ತೆಗಳಲ್ಲಿ ಪ್ರದ ರ್ಶನ, ಪ್ರತಿಭಟನೆ ನಾಟಕಗಳನ್ನು ಮಾಡಿದ ಬಿಜೆಪಿ ಪಕ್ಷದವರು ಈಗ ಅವರದೇ ಸರ್ಕಾರದ ಆಡಳಿತದಲ್ಲಿ ಮೌನವಾಗಿದೆ ಎಂದು ಆರೋಪಿಸಿದರು.

ಪ್ರತಿನಿತ್ಯ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆಯಾಗಿ ಜೀವನ ನಡೆಸುವುದೇ ಕಷ್ಟಕರ ವಾಗಿದೆ. ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆ ಮಾಡುತ್ತಿರುವುದರಿಂದ ಜನಸಾಮಾ ನ್ಯರು ತಲ್ಲಣಗೊಂಡಿದ್ದಾರೆ. ಕೂಡಲೇ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದರು.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಫೈರೋಜ್ ಪಾಷಾ, ಉಪಾಧ್ಯಕ್ಷ ಅಮೀರ್ ಜಾನ್, ಟಿಪ್ಪು ಸೇನೆ ಜಿಲ್ಲಾಧ್ಯಕ್ಷ ಅಕ್ಮಲ್ ಜಾವೀದ್, ಪಿಎಫ್‍ಐ ಜಿಲ್ಲಾಧ್ಯಕ್ಷ ಸೂಫಿ ಇಬ್ರಾಹಿಂ, ವೀರ ಕನ್ನಡಿಗರ ಸೇನೆ ತೋಫಿಕ್ ಪಾಷ, ಸಯ್ಯಾದ್ ಅನ್ಸರ್ ಪ್ರತಿಭಟನೆಯಲ್ಲಿದ್ದರು.

Translate »