ಸಚಿವ ಹೆಚ್.ಡಿ.ರೇವಣ್ಣ ತಾಲೂಕಿಗೆ ಮಾತ್ರ ಉಸ್ತುವಾರಿ
ಹಾಸನ

ಸಚಿವ ಹೆಚ್.ಡಿ.ರೇವಣ್ಣ ತಾಲೂಕಿಗೆ ಮಾತ್ರ ಉಸ್ತುವಾರಿ

September 9, 2018

ಹೊಳೆನರಸೀಪುರ:  ಲೋಕೋ ಪಯೋಗಿ ಸಚಿವರು ಕೇವಲ ಅವರ ತಾಲೂಕಿಗೆ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾರಮೇಶ್ ಟೀಕಿಸಿದರು.

ತಾಲೂಕಿನ ಗುಡ್ಡೇನಹಳ್ಳಿ ಏತನೀರಾ ವರಿ ಯೋಜನಾ ಯಂತ್ರಾಗಾರದ ಬಳಿ ವಿದ್ಯುತ್ ಟಿಸಿ ದುರಸ್ತಿಗಾಗಿ ಹಳ್ಳಿಮೈಸೂರು ಹೋಬಳಿ ಕಾರ್ಯಕರ್ತರು ಹಮ್ಮಿಕೊಂ ಡಿದ್ದ ಪ್ರತಿಭಟನೆ ನೇತೃತ್ವ ವಹಿಸಿದ್ದ ಅವರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ಏತನೀರಾವರಿ ಯೋಜನೆ ಮೂಲಕ ಹಳ್ಳಿಮೈಸೂರು ಹೋಬಳಿಯ ಎಲ್ಲಾ ಕೆರೆ ಗಳಿಗೂ ನೀರು ತುಂಬಿಸುವ ಯೋಜನೆಗೆ ಸಚಿವ ಹೆಚ್.ಡಿ.ರೇವಣ್ಣ ಪ್ರಚಾರಕ್ಕೋಸ್ಕರ ಅದ್ಧೂರಿ ಚಾಲನೆ ನೀಡಿದರು. ಆದರೆ ಕಿರು ನಾಲೆಗಳಲ್ಲಿ ಹೂಳು ತುಂಬಿ ಕೊನೆ ಹಂತ ದವರೆಗೂ ನೀರು ತಲುಪಿಲ್ಲದ ಕಾರಣ ರೈತರು ಬೆಳೆದ ಪೈರು ಒಣಗುತ್ತಿದೆ. ಕ್ಷೇತ್ರದ ಶಾಸಕರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಯಾವುದೇ ಟೆಂಡರ್ ಕರೆಯದೇ ಕೇವಲ ಪೊಳ್ಳು ಭರವಸೆಗಳನ್ನು ನೀಡಿ ರೇವಣ್ಣ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕ್ಷೇತ್ರದ ಶಾಸಕರಾದ ಸಚಿವ ರೇವಣ್ಣ ರಿಗೆ ಸಮಗ್ರ ಅಭಿವೃದ್ಧಿಯ ಯೋಜನೆಯಿಲ್ಲ. ಇವರು ಬರಿ ಭರವಸೆಗಳನ್ನು ನೀಡುತ್ತಾ, ಅಭಿವೃದ್ಧಿಯ ಮಹಾಪೂರವನ್ನೇ ಹರಿಸು ತ್ತಿದ್ದು, ಕಾರ್ಯಕರ್ತರನ್ನು ಓಲೈಸಲು ಗ್ರಾಪಂ ಮಟ್ಟದಲ್ಲಿ ನೆಪ ಮಾತ್ರಕ್ಕೆ ಮಾತ್ರ ಅಧಿ ಕಾರಿಗಳ ಸಭೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಗಂಗನಾಳು ಏತ ನೀರಾವರಿ ಯೋಜನೆ ಯಡಿಯಲ್ಲಿ 33 ಕೆರೆಗಳಿದ್ದು, ಈ ಕೆರೆಗಳಿಗೆ ಇದುವರೆಗೂ ಸಂಪೂರ್ಣವಾಗಿ ನೀರು ಹರಿಸಿಲ್ಲ. ಮಾಜಿ ಸಚಿವ ಎ.ಮಂಜು ಹಾದಿ ಯನ್ನೇ ಆ ಕ್ಷೇತ್ರದ ಶಾಸಕ ಎ.ಟಿ.ರಾಮ ಸ್ವಾಮಿ ಅವರೂ ಅನುಸರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದುವರೆಗೂ ಆಶ್ರಯ ಯೋಜನೆ ಯಡಿ ಬಡವರಿಗೆ ನಿವೇಶನ, ಮನೆ ಕೊಡುವ ಬಗ್ಗೆ ರೇವಣ್ಣ ಚಕಾರವೆತ್ತುತ್ತಿಲ್ಲ. ಈ ಭಾಗದ ಬೆಳೆಗಳಾದ ಹೊಗೆಸೊಪ್ಪು, ಜೋಳ, ಆಲೂ ಗೆಡ್ಡೆ, ಅತಿವೃಷ್ಟಿಯ ಪರಿಣಾಮ ಹಾಳಾ ಗಿದ್ದು, ನಮ್ಮದು ರೈತಪರ ಸರ್ಕಾರ ಎಂದು ಕೊಚ್ಚಿಕೊಳ್ಳುವ ರೇವಣ್ಣ ರೈತರಿಗೆ ಬಿಡಿಗಾಸನ್ನು ನೀಡಿಲ್ಲ. ಸಕಲೇಶಪುರ ತಾಲೂಕಿನಲ್ಲಿ 3 ಸಾವಿರ ಕೋಟಿ ರೂ. ಯಷ್ಟು ನಷ್ಟವಾಗಿದ್ದು, ಇದರ ಬಗ್ಗೆ ಆ ಕ್ಷೇತ್ರದ ಶಾಸಕರು ಚಕಾರವೆತ್ತಿಲ್ಲ. ಸಚಿವ ಹೆಚ್.ಡಿ.ರೇವಣ್ಣನವರ ವಿರುದ್ಧ ಧ್ವನಿ ಎತ್ತುವ ಧೈರ್ಯ ಜಿಲ್ಲೆಯ ಜೆಡಿಎಸ್‍ನ ಯಾವುದೇ ಶಾಸಕರಿಗೂ ಇಲ್ಲ ಎಂದು ಕುಟುಕಿದ ಯೋಗಾರಮೇಶ್, ರೈತರ ಕಣ್ಣೊ ರೆಸಲು ಬರಿ ಅಧಿಕಾರಿಗಳ ಸಭೆ ಮಾಡಿ ದರೆ ಸಾಲದು ಶೀಘ್ರವೇ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.

ಸದ್ಯ ಟಿಸಿ ಹಾಳಾಗಿರುವುದರಿಂದ ರೈತರು ಕಂಗಾಲಾಗಿದ್ದು, ಶೀಘ್ರವೇ ದುರಸ್ತಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ವಾರದ ಗಡುವು ನೀಡಿದರಲ್ಲದೆ, ನಿರ್ಲಕ್ಷ್ಯ ತೋರಿ ದರೆ ಉಪವಾಸ ಸತ್ಯಾಗ್ರಹ ಕೂರುವು ದಾಗಿ ಇದೇ ವೇಳೆ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿ ಡಿ.ಆರ್.ಶಿವಣ್ಣ, ವಿಶ್ವನಾಥ್, ಶಕ್ತಿ ಕೇಂದ್ರದ ಅಧ್ಯಕ್ಷ ಕೆಂಪ ರಾಜು, ಮಾಜಿ ಅಧ್ಯಕ್ಷ ಮೆಡಿಕಲ್ ಲೋಕೇಶ್, ಓಡನಹಳ್ಳಿ ಕೃಷ್ಣ, ಬಳೆ ಮಂಜು, ಕೃಷ್ಣನಾಯಕ್, ಪಕ್ಷದ ನೂರಾರು ಕಾರ್ಯಕರ್ತರಿದ್ದರು.

Translate »