Tag: Hassan

‘ತ್ರಿವಿಧ ದಾಸೋಹಿ’ಗೆ ಜಿಲ್ಲಾದ್ಯಂತ ಗೌರವ ಸಮರ್ಪಣೆ
ಹಾಸನ

‘ತ್ರಿವಿಧ ದಾಸೋಹಿ’ಗೆ ಜಿಲ್ಲಾದ್ಯಂತ ಗೌರವ ಸಮರ್ಪಣೆ

ಸಂಘ ಸಂಸ್ಥೆಗಳಿಂದ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ, ಎಲ್ಲೆಡೆ ಕಾಯಕ ಯೋಗಿಯ ಗುಣಗಾನ, ಗ್ರಾಮೀಣ ಪ್ರದೇಶದಲ್ಲಿ ಶಿವಕುಮಾರ ಸ್ವಾಮೀಜಿ ಸ್ಮರಣೆ ಸಮಾಜಕ್ಕೆ ಅರಿವನ್ನು ನೀಡುವ ಮೂಲಕ ದಾರಿದೀಪವಾಗಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆ ಜಿಲ್ಲಾ ದ್ಯಂತ ಶ್ರೀಗಳಿಗೆ ವಿವಿಧ ಸಂಘ ಸಂಸ್ಥೆ ಗಳು ಸೇರಿದಂತೆ ಲಕ್ಷಾಂತರ ಮಂದಿ ಭಕ್ತರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಜಿಲ್ಲೆಯ ಹಾಸನ, ಆಲೂರು, ಅರಸೀ ಕೆರೆ, ಬೇಲೂರು, ಸಕಲೇಶಪುರ, ಅರಕಲ ಗೂಡು, ಶ್ರವಣಬೆಳಗೊಳ, ರಾಮನಾಥ ಪುರ, ಹೊಳೆನರಸೀಪುರ, ಚನ್ನರಾಯ ಪಟ್ಟಣ ಸೇರಿದಂತೆ…

‘ದೇವರ ಲೋಕದ ದೇವರಿಗೆ’ ಭಾವಪೂರ್ಣ ಶ್ರದ್ಧಾಂಜಲಿ
ಹಾಸನ

‘ದೇವರ ಲೋಕದ ದೇವರಿಗೆ’ ಭಾವಪೂರ್ಣ ಶ್ರದ್ಧಾಂಜಲಿ

ಅರಸೀಕೆರೆ: ಶ್ರೀ ಸಿದ್ಧಗಂಗಾ ಮಠದ ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮಿಯವರಿಗೆ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾ ಶ್ರಯದಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದರ ಮೂಲಕ ಗೌರವ ಸಮರ್ಪಿಸಲಾಯಿತು. ನಗರದ ಹೃದಯ ಭಾಗದಲ್ಲಿರುವ ಪಿ.ಪಿ.ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ, ತಾಲೂಕು ವೀರ ಶೈವ ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಶ್ರೀಯವರ ಭಾವಚಿತ್ರವನ್ನು ಸ್ಥಾಪಿಸಿ ವಿಶೇಷ ಪೂಜೆ, ಭಜನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ, ನಗರ ಸಭೆ ಸದಸ್ಯ ಸಮೀವುಲ್ಲಾ,…

‘ಶತಮಾನದ ಸಂತ’ ಶಿವಕುಮಾರ ಸ್ವಾಮೀಜಿಗೆ ನುಡಿ ನಮನ
ಹಾಸನ

‘ಶತಮಾನದ ಸಂತ’ ಶಿವಕುಮಾರ ಸ್ವಾಮೀಜಿಗೆ ನುಡಿ ನಮನ

ಬೇಲೂರು: ಕಾಯಕಯೋಗಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ಖ್ಯಾತಿ ಪಡೆದಿರುವ ಸಿದ್ಧಗಂಗಾ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನೆಲೆ ಯಲ್ಲಿ ಕೆಂಪೇಗೌಡ ವೃತ್ತದಲ್ಲಿ ಒಕ್ಕಲಿಗರ ಯುವ ವೇದಿಕೆಯಿಂದ ಪೂಜ್ಯರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಮೇಣದ ಬತ್ತಿ ಹಚ್ಚುವ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು. ವೇದಿಕೆಯ ಅಧ್ಯಕ್ಷ ಪೃಥ್ವಿ ಮಾತನಾಡಿ, 12ನೇ ಶತಮಾನದಲ್ಲಿ ವಿಶ್ವ ಗುರು ಬಸ ವಣ್ಣನವರ ನಿಜರೂಪವೇ ಆದ ಶಿವ ಕುಮಾರ ಸ್ವಾಮೀಜಿ ಸಮಾಜಕ್ಕೆ ಮಾರ್ಗ ದರ್ಶಕರು. ಜಾತಿ, ಧರ್ಮ…

ರಾಮನಾಥಪುರದಲ್ಲಿ ‘ಅನ್ನ ದಾಸೋಹಿ’ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ
ಹಾಸನ

ರಾಮನಾಥಪುರದಲ್ಲಿ ‘ಅನ್ನ ದಾಸೋಹಿ’ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ

ರಾಮನಾಥಪುರ: ಕಾಯಕಯೋಗಿ, ಕಲಿಯುಗ ಬಸವಣ್ಣ, ನಡೆದಾಡುವ ದೇವರು, ತ್ರೀವಿಧ ದಾಸೋಹಿ ಸಿದ್ಧ ಗಂಗಾ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಮನಾಥಪುರದ ಹೋಬಳಿ ಕೋಟವಾಳು ಗ್ರಾಮದ ವೀರಶೈವ ಸಮಾಜದ ವತಿಯಿಂದ ಸಿದ್ಧಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ರಾಮನಾಥಪುರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ಎಸ್. ಶಂಕರ್ ಮಾತನಾಡಿ, ಪ್ರತಿ ವರ್ಷ 10 ಸಾವಿರ ಮಕ್ಕಳಿಗೆ ವಸತಿ ದಾಸೋಹ ನೀಡಿರುವ ಸಿದ್ಧಗಂಗಾ ಶ್ರೀಗಳು ಇಲ್ಲಿಯ ವರೆಗೆ ಸಕ್ರಿಯವಾಗಿ ದುಡಿಯುತ್ತಾ ಎಲ್ಲರಿಗೂ ಆದರ್ಶ ಪ್ರಾಯರಾಗಿ ದ್ದರು….

ಬೇಲೂರಲ್ಲಿ ತ್ರಿವಿಧ ದಾಸೋಹಿಗೆ ಅಂತಿಮ ನಮನ
ಹಾಸನ

ಬೇಲೂರಲ್ಲಿ ತ್ರಿವಿಧ ದಾಸೋಹಿಗೆ ಅಂತಿಮ ನಮನ

ಬೇಲೂರು: ಕಾಯಕಯೋಗಿ, ನಡೆದಾ ಡುವ ದೇವರು, ತ್ರಿವಿಧ ದಾಸೋಹಿ ಎಂದೇ ಖ್ಯಾತಿ ಪಡೆದಿರುವ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಗಳು ವಿಧಿವಶರಾದ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಮಹಿಳಾ ಕದಳಿ ವೇದಿಕೆ ವತಿಯಿಂದ ಪಟ್ಟಣದ ಶ್ರೀ ವೀರಶೈವ ಸಮುದಾಯಭವನದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, 12 ನೇ ಶತಮಾನದಲ್ಲಿ ವಿಶ್ವ ಗುರುಬಸವಣ್ಣನವರ ನಿಜರೂಪವೇ…

ತ್ರಿವಿಧ ದಾಸೋಹಿಗೆ ರಾಮನಾಥಪುರದಲ್ಲಿ ಶ್ರದ್ಧಾಂಜಲಿ
ಹಾಸನ

ತ್ರಿವಿಧ ದಾಸೋಹಿಗೆ ರಾಮನಾಥಪುರದಲ್ಲಿ ಶ್ರದ್ಧಾಂಜಲಿ

ರಾಮನಾಥಪುರ: ಇಂದು ಲಿಂಗೈಕ್ಯರಾದ ತ್ರೀವಿಧ ದಾಸೋಹಿ, ಕಲಿಯುಗ ಬಸವಣ್ಣ, ನಡೆದಾಡುವ ದೇವರೇ ಎಂದು ನಮ್ಮ ನಾಡಿನ ಜನರೇ ಕರೆಯುತ್ತಿರುವ ಸಿದ್ಧಗಂಗಾ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಈ ದೇಶದ ಹೆಮ್ಮೆಯವ ರಾಗಿದ್ದು, ಅವರಿಗೆ ಭಾರತ ರತ್ನ ನೀಡಬೇಕು ಎಂದು ಶರಣ ಸಾಹಿತ್ಯ ಪರಿಷತ್ತು ದತ್ತಿ ದಾನಿ ಸೋಮಶೇಖರ್ ಮನವಿ ಮಾಡಿದರು. ರಾಮನಾಥಪುರದ ಬಸವೇಶ್ವರ ವೃತ್ತದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಆಟೋ ಮಾಲೀಕರ ಸಂಘ, ವೀರಶೈವ ಸಮಾಜ ಬಾಂಧವರು ಹಾಗೂ ವಿವಿಧ ಸಂಘಗಳು ಸೇರಿ ಇಂದು ಶಿವಕ್ಯರಾದ ಸಿದ್ಧಗಂಗಾ…

ಅಂಬಿಗರ ಚೌಡಯ್ಯ, ಮಹಾಯೋಗಿ ವೇಮನ ಜಯಂತಿ ಆಚರಣೆ
ಹಾಸನ

ಅಂಬಿಗರ ಚೌಡಯ್ಯ, ಮಹಾಯೋಗಿ ವೇಮನ ಜಯಂತಿ ಆಚರಣೆ

ಹಾಸನ: ಅಂಬಿಗರ ಚೌಡಯ್ಯ ಮತ್ತು ಮಹಾಯೋಗಿ ವೇಮನ ಮಹರ್ಷಿಗಳು ಸಮಾಜದಲ್ಲಿನ ಪಿಡುಗು ಗಳ ವಿರುದ್ಧ ಧ್ವನಿಯಾಗಿ ಎಲ್ಲರಿಗೂ ದಾರಿದೀಪವಾಗಿ ಬದುಕಿದರು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು ತಿಳಿಸಿದರು. ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಾಸನಾಂಬ ಕಲಾಭವನದಲ್ಲಿ ಆಯೋಜಿಸಲಾಗಿದ್ದ ಅಂಬಿಗರ ಚೌಡಯ್ಯ ಮತ್ತು ಮಹಾ ಯೋಗಿ ವೇಮನ ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿ ದರು. ಇಬ್ಬರು ಮಹನೀಯರು ಹಿಂದಿನ ಕಾಲದಿಂದಲೂ ಸಮಾನತೆಯ ಪರವಾಗಿ ಅನೇಕ ಕಾರ್ಯಗಳನ್ನು ಮಾಡಿದವರು ಸರ್ವರೂ ಸಮಾನರು…

ಸಿದ್ಧಗಂಗಾ ಶ್ರೀಗಳಿಗೆ ವೀರಶೈವ ಸಮಾಜದಿಂದ ಅಂತಿಮ ಗೌರವ
ಹಾಸನ

ಸಿದ್ಧಗಂಗಾ ಶ್ರೀಗಳಿಗೆ ವೀರಶೈವ ಸಮಾಜದಿಂದ ಅಂತಿಮ ಗೌರವ

ಹಾಸನ: ನಡೆದಾಡುವ ದೇವರು, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಯವರು ಸೋಮವಾರ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯರಾದ ಹಿನ್ನೆಲೆ ಯಲ್ಲಿ ಸಂಜೆ ಶ್ರಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ವೀರಶೈವ ಸಮಾಜ ದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶ್ರೀ ಶಿವಕುಮಾರ ಸ್ವಾಮೀಜಿಯವರು ನಮ್ಮ ಮುಂದೆ ಇಲ್ಲದಿರುವುದು ಇಡಿ ಸಮಾಜಕ್ಕೆ ಹಾಗೂ ವೀರಶೈವ-ಲಿಂಗಾ ಯಿತ ಸಮಾಜಕ್ಕೆ ತುಂಬಲಾರದ ನಷ್ಟ ವಾಗಿದೆ. ದೇಶ-ವಿದೇಶಗಳಲ್ಲಿ ಶ್ರೀಗಳಿಗೆ ಅನೇಕ ಭಕ್ತರುಗಳಿದ್ದು ಹಾಗೂ ಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತು ಎಲ್ಲಾ ವರ್ಗದ ಜಾತಿ, ಮತವಿಲ್ಲದೆ ಶಿಕ್ಷಣವನ್ನು ನೀಡುತ್ತಿದ್ದ…

ನಗರಸಭೆ ಅನುಮತಿಯಿಲ್ಲದೆ ಹೆದ್ದಾರಿ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‍ಗೆ ಡಿಸಿ ನೋಟೀಸ್
ಹಾಸನ

ನಗರಸಭೆ ಅನುಮತಿಯಿಲ್ಲದೆ ಹೆದ್ದಾರಿ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‍ಗೆ ಡಿಸಿ ನೋಟೀಸ್

ಹಾಸನ: ಹಾಸನ ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆ ಸಹಮತಿ ಇಲ್ಲದೆ ಬಿ.ಎಂ.ರಸ್ತೆಯ ಅಭಿವೃದ್ಧಿ ಸಂಬಂಧ ರಸ್ತೆಯನ್ನು ಅಗೆದು ತುರ್ತಾಗಿ ಪೂರ್ಣಗೊಳಿಸದೆ ಸಾರ್ವಜನಿಕರಿಗೆ ನೀಡುತ್ತಿರುವ ಮೂಲಭೂತ ಸೌಕರ್ಯಗಳಲ್ಲಿ ತೊಂದರೆ ಆಗು ತ್ತಿರುವ ಬಗ್ಗೆ ಕಾರಣ ಕೇಳಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾದ ಅಭಿಯಂತರರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಹಾಸನ ನಗರದ ಮಧ್ಯಬಾಗದಲ್ಲಿ ಹಾದು ಹೋಗಿ ರುವ ರಾಷ್ಟ್ರೀಯ ಹೆದ್ದಾರಿಯನ್ನು (ಎನ್.ಆರ್. ವೃತ್ತದಿಂದ ತಣ್ಣೀರುಹಳ್ಳ ವೃತ್ತದವರೆಗಿನ ಬಿ.ಎಂ.ರಸ್ತೆ) ಅಭಿವೃದ್ಧಿಪಡಿಸುವ ಸಂಬಂಧ ರಸ್ತೆಯ ಒಂದು ಭಾಗವನ್ನು ಅಗೆಯಲಾಗಿರುತ್ತದೆ. ಹಲವಾರು…

ಬೇಲೂರಿನ ಬರ ನಿವಾರಣೆಗೆ ‘ಜಲಧಾರೆ’ ಯೋಜನೆ  450 ಕೋಟಿ ವೆಚ್ಚ ಮೀಸಲು, ಹಲವು ನೀರಾವರಿ ಯೋಜನೆ ಅನುಷ್ಠಾನ
ಹಾಸನ

ಬೇಲೂರಿನ ಬರ ನಿವಾರಣೆಗೆ ‘ಜಲಧಾರೆ’ ಯೋಜನೆ 450 ಕೋಟಿ ವೆಚ್ಚ ಮೀಸಲು, ಹಲವು ನೀರಾವರಿ ಯೋಜನೆ ಅನುಷ್ಠಾನ

ಬೇಲೂರು: ಬೇಲೂರು ತಾಲೂಕಿನ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಬರ ಪರಿಸ್ಥಿತಿ ಯನ್ನು ನಿಭಾಯಿಸುವ ಹಿನ್ನೆಲೆಯಲ್ಲಿ ‘ಜಲಧಾರೆ’ ಮಹತ್ವಾಕಾಂಕ್ಷೆಯ ಯೋಜನೆ ಯನ್ನು ಜಾರಿಗೊಳಿಸಲಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಪಟ್ಟಣಕ್ಕೆ ಸಮೀಪದ ಕಟ್ಟೆ ಸೋಮನಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಡಿ ರಸ್ತೆಗೆ ಡಾಂಬರ್ ಹಾಕುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನಲ್ಲಿ 450 ಕೋಟಿ ರೂ ವೆಚ್ಚದಡಿ ಜಲಧಾರೆ ಯೋಜನೆ ಜಾರಿಗೊಳಿಸಲಾಗು ತ್ತಿದೆ. ಇದರಿಂದ ಹಲವು ನೀರಾವರಿ ಯೋಜನೆ ಕೈಗೆತ್ತಿಕೊಂಡು ತಾಲೂಕಿನ ಬರದ ಬವಣೆ ನೀಗಿಸಲಾಗುವುದು…

1 2 3 49