ಬದಲಿ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಎಡಿಸಿ ಸೂಚನೆ
ಹಾಸನ

ಬದಲಿ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಎಡಿಸಿ ಸೂಚನೆ

February 5, 2020

ಹಾಸನ, ಫೆ.4- ನಗರದ ಬಸ್ ನಿಲ್ದಾಣ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳು ವವರೆಗೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬದಲಿ ಮಾರ್ಗಗಳಲ್ಲಿ ಅಗತ್ಯ ಬಸ್ ಸೌಲಭ್ಯ ಕಲ್ಪಿಸುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಸೂಚಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೈಪಾಸ್ ರಸ್ತೆಗಳಿಂದ ನಗರದ ವಿವಿಧೆÉಡೆಗೆ ಅಗತ್ಯ ನಗರ ಬಸ್ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕರು ನೀಡಿದ್ದ ಮನವಿ ಕುರಿತು ಅವರು ಸಭೆ ನಡೆಸಿದರು.

ಬೈಪಾಸ್ ವೃತ್ತಗಳಲ್ಲಿ ಕಡ್ಡಾಯವಾಗಿ ನಿಯಂತ್ರಣಾ ಧಿಕಾರಿ ನೇಮಿಸಿ ಬಸ್ ಚಾಲಕರಿಗೆ ನಿಗದಿತ ಮಾರ್ಗ ದಲ್ಲಿ ಸಂಚರಿಸಲು ನಿರ್ದೇಶನ ನೀಡುವಂತೆ ತಿಳಿಸಿದರು. ಮೇಲ್ಸೇತುವೆ ಕಾಮಗಾರಿ ಸಲುವಾಗಿ ಬದಲಿ ರಸ್ತೆಗಳ ಹೆಚ್ಚಿನ ಬಳಕೆ ಆಗುವುದರಿಂದ ಆಟೋ ಚಾಲಕರು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹೊರೆಯಾಗುತ್ತಿದೆ. ಹಾಗಾಗಿ ಕೇಂದ್ರಿಯ ಬಸ್ ನಿಲ್ದಾಣದಿಂದ ಹೆಚ್ಚುವರಿಯಾಗಿ ಸಿಟಿ ಬಸ್‍ಗಳನ್ನು ಹಾಕುವುದರ ಜೊತೆಗೆ ಪ್ರಿಪೇಯ್ಡ್ ಆಟೋ ನಿಲ್ದಾಣ ಸ್ಥಾಪಿಸು ವಂತೆ ಕವಿತಾ ರಾಜರಾಂ ಸಲಹೆ ನೀಡಿದರು.

ನಗರದ ಸಂತೇಪೇಟೆ ಮಾರ್ಗ, ಹಾಸನ ತಾಪಂ ಪಕ್ಕದ ಬದಲಿ ಮಾರ್ಗಗಳ ರಸ್ತೆಯ ಅಕ್ಕಪಕ್ಕದ ರಸ್ತೆಗಳಲ್ಲಿರುವ ಅನಗತ್ಯ ಗಿಡಗಳನ್ನು ತೆರವುಗೊಳಿಸಿ, ಸಂಚಾರ ಯೋಗ್ಯವನ್ನಾಗಿ ಪರಿವರ್ತಿಸುವಂತೆ ನಗರಸಭೆ ಅಧಿಕಾರಿಗಳಿಗೆ ಕವಿತಾ ರಾಜರಾಂ ಸೂಚನೆ ನೀಡಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಎಇ ಮಂಜು, ಸಂಚಾರ ಪೊಲೀಸ್ ಠಾಣೆ ಪಿಎಸ್‍ಐ ಪ್ರಮೋದ್‍ಕುಮಾರ್, ನಗರಸಭೆ ಎಇಇ ರಂಗಸ್ವಾಮಿ, ನೈರುತ್ಯ ರೈಲ್ವೆ ಹಿರಿಯ ವಿಭಾಗೀಯ ಅಭಿಯಂತರ ಹರೀಶ್, ವಿಭಾಗೀಯ ನಿಯಂತ್ರಣಾಧಿಕಾರಿ ಅನಿಲ್ ಕುಮಾರ್, ಸಂಚಾರಣಾಧಿಕಾರಿ ಮಂಜುನಾಥ್, ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ವ್ಯವಸ್ಥಾಪಕ ಶಾಜಿಯಾ ಬಾನು, ಸಂಚಾರ ನಿರೀಕ್ಷಕ ಬಿ.ಆರ್. ಮಂಜುನಾಥ್ ಇತರರಿದ್ದರು.

Translate »