ಕಲೆ-ಸಾಹಿತ್ಯದಿಂದ ವೃತ್ತಿಜೀವನದಲ್ಲಿ ಪ್ರಗತಿ: ಪ್ರೊ.ಕಾ.ನಾ.
ಮೈಸೂರು

ಕಲೆ-ಸಾಹಿತ್ಯದಿಂದ ವೃತ್ತಿಜೀವನದಲ್ಲಿ ಪ್ರಗತಿ: ಪ್ರೊ.ಕಾ.ನಾ.

February 5, 2020

ಮೈಸೂರು, ಫೆ.4(ಎಸ್‍ಪಿಎನ್)- ಇಂದಿನ ವಿದ್ಯಾರ್ಥಿಗಳು ಕಲೆ-ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರೆ ಮುಂದೆ ವೃತ್ತಿಜೀವನದಲ್ಲಿ ಉತ್ತಮ ಕೌಶಲ ಬೆಳೆಸಿಕೊಳ್ಳಬಹುದು ಎಂದು ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಕಿವಿಮಾತು ಹೇಳಿದರು.

ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ದೇಶಿರಂಗ ಸಾಂಸ್ಕøತಿಕ ಸಂಸ್ಥೆ ಆಯೋಜಿಸಿದ್ದ ದೇಶಿರಂಗ-2020 `ರಂಗ ಮತ್ತು ನೃತ್ಯೋತ್ಸವ’ದಲ್ಲಿ ಅವರು ಮಾತನಾಡಿದರು. `ಕೃಷ್ಣ ಜನಮನ’ ಹಲವು ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸಿ, ರಂಗಭೂಮಿ, ಜನಪದದ ವಿವಿಧ ಪ್ರಕಾರಗಳನ್ನು ಕಲಿಸುತ್ತಿದ್ದಾರೆ. ತಾವು ಕಲಿತಿರುವ ವಿದ್ಯೆಯನ್ನು ಬೇರೆಯವರಿಗೆ ಕಲಿಸುವುದರಲ್ಲಿ ಸಂತೃಪ್ತಭಾವ ಹೊಂದಿ ದ್ದಾರೆ ಎಂದರು. ಈಗಿನ ಯುವಜನತೆ ವಿದ್ಯಾವಂತರಾದರೂ ಮಾನವೀಯತೆ ಮರೆಯುತ್ತಿರುವುದು ಬೇಸರ ಸಂಗತಿ. ನಾನಷ್ಟೇ ಬದುಕಬೇಕು ಎಂಬ ಸ್ವಾರ್ಥ ತೊರೆದು ಸಮಾಜದಲ್ಲಿ ಸಕಲ ಜೀವರಾಶಿಗಳು ಒಟ್ಟಾಗಿ ಬದುಕಬೇಕೆಂಬ ಉದಾತ್ತ ಚಿಂತನೆ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ಮೈಸೂರು ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಮೈಸೂರು ಕೃಷ್ಣಮೂರ್ತಿ, ಕನ್ನಡ -ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ದೇಶಿರಂಗ ಸಾಂಸ್ಕøತಿಕ ಸಂಸ್ಥೆಯ ಕೃಷ್ಣ ಜನಮನ ವೇದಿಕೆಯಲ್ಲಿದ್ದರು. ಬಳಿಕ ರಂಗ ತರಬೇತಿ ಶಿಬಿರ ವಿದ್ಯಾರ್ಥಿಗಳ ಅಭಿನಯದ, ಕೃಷ್ಣಜನಮನ ನಿರ್ದೇಶನದ `ಹೊಲ’ ನಾಟಕ ಪ್ರದರ್ಶಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

Translate »