ಷೇರು ಮಾರಾಟ ಪ್ರಸ್ತಾಪ ಖಂಡಿಸಿ ಮೈಸೂರಲ್ಲಿ ಎಲ್‍ಐಸಿ ನೌಕರರ ಪ್ರತಿಭಟನೆ
ಮೈಸೂರು

ಷೇರು ಮಾರಾಟ ಪ್ರಸ್ತಾಪ ಖಂಡಿಸಿ ಮೈಸೂರಲ್ಲಿ ಎಲ್‍ಐಸಿ ನೌಕರರ ಪ್ರತಿಭಟನೆ

February 5, 2020

ಮೈಸೂರು, ಫೆ.4(ಪಿಎಂ)- ಭಾರತೀಯ ಜೀವ ವಿಮಾ ನಿಗಮದ(ಎಲ್‍ಐಸಿ) ಷೇರು ಮಾರಾಟಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಮೈಸೂರಿನ ಬನ್ನಿಮಂಟಪದ ಎಲ್‍ಐಸಿ ಕಚೇರಿ ಆವರಣದಲ್ಲಿ ನಿಗಮದ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.

ಆಲ್ ಇಂಡಿಯಾ ಇನ್ಷೂರೆನ್ಸ್ ಎಂಪ್ಲಾ ಯೀಸ್ ಅಸೋಸಿಯೇಷನ್ (ಎಐಐಇಎ) ಕರೆ ಮೇರೆಗೆ ಮಂಗಳವಾರ ರಾಷ್ಟ್ರವ್ಯಾಪಿ ಎಲ್‍ಐಸಿ ಸಿಬ್ಬಂದಿ ಮಧ್ಯಾಹ್ನ ಊಟದ ವಿರಾಮದ ವೇಳೆ ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದ್ದು, ಮೈಸೂರಿನಲ್ಲೂ ಮಧ್ಯಾಹ್ನ 12.30ರಿಂದ ಒಂದು ಗಂಟೆಗೂ ಹೆಚ್ಚು ಕಾಲ ನೌಕರರು ಪ್ರತಿಭಟನೆ ನಡೆಸಿ ದರು. ಕೇಂದ್ರ ಸರ್ಕಾರ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಮಾ ಕ್ಷೇತ್ರದಲ್ಲಿ ಎಲ್‍ಐಸಿ ಅಗಾಧ ವಾಗಿ ಬೆಳೆದಿದೆ. ಆದರೆ ಈಗ ಕಾಪೆರ್Ç ರೇಟ್ ಕಂಪನಿಗಳ ಅನುಕೂಲಕ್ಕಾಗಿ ಅಮೂಲ್ಯ ವಾದ ಸಂಪನ್ಮೂಲವನ್ನು ಕಸಿದುಕೊಳ್ಳುವು ದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರದ ಈ ನಡೆ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ ಗಂಭೀರ ವಾಗಿದ್ದು, ಇದನ್ನು ನಿಭಾಯಿಸಲು ಗೊತ್ತಿಲ್ಲದ ಕೇಂದ್ರ ಸರ್ಕಾರ ಈಗ ಎಲ್‍ಐಸಿ ಷೇರು ಮಾರಾಟಕ್ಕೆ ಮುಂದಾಗಿದೆ. ಬಿಜೆಪಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಮಾರಾಟಕ್ಕೆ ಭಾರೀ ಉತ್ಸಾಹ ತೋರು ತ್ತಿದೆ ಎಂದು ಟೀಕಿಸಿದರು. ವಿಮಾ ನಿಗಮ ನೌಕರರ ಸಂಘದ ಮೈಸೂರು ವಿಭಾಗದ ಅಧ್ಯಕ್ಷ ಎಸ್.ಕೆ.ರಾಮು, ಪ್ರಧಾನ ಕಾರ್ಯ ದರ್ಶಿ ಎಸ್.ಎಸ್.ನಾಗೇಶ್, ಸೌತ್ ಸೆಂಟ್ರಲ್ ಜೋನ್ ಇನ್ಷೂರೆನ್ಸ್ ಎಂಪ್ಲಾಯೀಸ್ ಫೆಡರೇಷನ್ ಜಂಟಿ ಕಾರ್ಯದರ್ಶಿ ಜೆ.ಸುರೇಶ್, ಎಲ್‍ಐಸಿ ಕ್ಲಾಸ್1 ಆಫೀಸರ್ಸ್ ಅಸೋಸಿಯೇಷನ್ ಮೈಸೂರು ವಿಭಾಗದ ಕಾರ್ಯದರ್ಶಿ ಟಿ.ಟಿ.ನಿರಂಜನ್, ನ್ಯಾಷನಲ್ ಫೆಡರೇಷನ್ ಆಫ್ ಇನ್ಷೂರೆನ್ಸ್ ಫೀಲ್ಡ್ ವರ್ಕರ್ಸ್ ಆಫ್ ಇಂಡಿಯಾದ ಮೈಸೂರು ವಿಭಾಗದ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ದಿವ್ಯಾನಂದ ಸೇರಿದಂತೆ 100ಕ್ಕೂ ಹೆಚ್ಚು ಎಲ್‍ಐಸಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »