ಎರಡು ಮರಗಳಿಗೆ ಕತ್ತರಿ!
ಮೈಸೂರು

ಎರಡು ಮರಗಳಿಗೆ ಕತ್ತರಿ!

February 5, 2020

ಮೈಸೂರು, ಫೆ.4(ಎಂಕೆ)- ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ 2 ಬೃಹತ್ ಮರಗಳನ್ನು ಧರೆಗುರುಳಿಸಿದ್ದು, ಇದರ ಬಗ್ಗೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮರಗಳು ಹಚ್ಚ ಹಸಿರಿನಿಂದ ಕೂಡಿದ್ದು, ಬಲಿಷ್ಠವಾಗಿಯೇ ಇದ್ದವು. ಹೇಳಿ ಕೇಳಿ ಈ ರಸ್ತೆಯಲ್ಲಿ ಮರಗಳಿರುವುದೇ ಅಪರೂಪ. ಅಂತಹದರಲ್ಲಿ ಇದ್ದಂತಹ 2 ಬೃಹತ್ ಮರಗಳನ್ನು ಉರುಳಿಸಿರುವುದರಿಂದ ಈ ರಸ್ತೆ ಬೆಂಗಾಡಾಗಿ ಪರಿಣಮಿಸಿದೆ.

ಅಷ್ಟಕ್ಕೂ ಈ ಮರಗಳನ್ನು ಕಡಿಯಲು ಕಾರಣವೇನು? ಇವುಗಳಿಂದ ಯಾರಿಗೆ ತೊಂದರೆಯಾಗು ತ್ತಿತ್ತು? ಎಂದು ಪ್ರಶ್ನಿಸಿರುವ ಪರಿಸರ ಪ್ರೇಮಿ ಶರ್ಮಾ ಅವರು, ರಾಜಾರೋಷವಾಗಿ ಹೀಗೆ ಮರಗಳನ್ನು ಕಡಿದುರುಳಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಒಂದೆಡೆ ಮರಗಳನ್ನು ನೆಡುವಂತೆ ಬೋಧಿಸುವ ಅರಣ್ಯ ಇಲಾಖೆ ಈ ರೀತಿ ಮರಗಳನ್ನು ಕಡಿದುರುಳಿ ಸುವವರ ವಿರುದ್ಧ ಏನು ಕ್ರಮ ಕೈಗೊಳ್ಳ ಬಹುದು ಎಂಬುದನ್ನು ಕಾದು ನೋಡಬೇಕಿದೆ ಎಂದು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಈ ಬಗ್ಗೆ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಡಿಸಿಎಫ್ ಪ್ರಶಾಂತ್, ಮರಗಳು ಒಣಗಿದ್ದು ಪಾದಚಾರಿಗಳು ಹಾಗೂ ವಾಣಿಜ್ಯ ಮಳಿಗೆಯ ವರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಗರಪಾಲಿಕೆ ಸದಸ್ಯರು ಮನವಿ ಮಾಡಿದ್ದರು. ಹಾಗಾಗಿ 2 ಮರಗಳನ್ನು ಕಡಿಯಲು ಅನುಮತಿ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

Translate »