ಮೈಸೂರು, ಫೆ.3- ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಜಾತಿಗಳ ಉಪಯೋಜನೆ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಅಭಿರಾಮ್. ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮೇಲ್ವಿಚಾರಣೆ ಸಮಿತಿ ಮಾಸಿಕ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಶಾಸಕರಾದ ಅಶ್ವಿನ್‍ಕುಮಾರ್, ಹೆಚ್.ಪಿ.ಮಂಜುನಾಥ್ ಪಾಲ್ಗೊಂಡು, ವಿವಿಧ ಇಲಾಖೆ ಗಳ ಅಧಿಕಾರಿಗಳೊಂದಿಗೆ ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ ಕುರಿತು ಚರ್ಚಿಸಿದರು.
ಸಭೆಯಲ್ಲಿ ಆಯಾ ಇಲಾಖೆ ಅನುಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಜಾತಿ ಉಪಯೋಜನೆ (ಎಸ್‍ಸಿ ಎಸ್‍ಟಿ ಮತ್ತು ಟಿಎಸ್‍ಪಿ)ಯಲ್ಲಿ ಅನುದಾನದ ಬಳಕೆ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಮಾಹಿತಿ ಪಡೆದುಕೊಂಡರು. ಚೆಸ್ಕಾಂನಲ್ಲಿ ಪರಿಶಿಷ್ಟಜಾತಿ ಉಪಯೋಜನೆ (ಎಸ್‍ಸಿಎಸ್‍ಪಿ) 84 ಲಕ್ಷ ಅನುದಾನವಿದ್ದು, 106 ಲಕ್ಷ ಖರ್ಚನ್ನು ಮಾಡಲಾ ಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅವರು ಪ್ರತಿ ಕ್ರಿಯಿಸಿ, ನಿಮ್ಮ ನಿಗಮದಲ್ಲಿ ಅನುದಾನಕ್ಕಿಂತ 22 ಲಕ್ಷ ಹೆಚ್ಚುವರಿ ಖರ್ಚು ಮಾಡಲು ನಿಮ್ಮ ಬಳಿ ಹಣ ಎಲ್ಲಿಂದ ಬಂತು ಎಂದು ಅಧಿಕಾರಿಗೆ ಪ್ರಶ್ನಿಸಿದರು.
ಈ ವೇಳೆ ಶಾಸಕ ಹೆಚ್.ಪಿ.ಮಂಜುನಾಥ್ ಮಾತನಾಡಿ, ಸಭೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ತಾಲೂಕುವಾರು ಖರ್ಚು ವೆಚ್ಚದ ಬಗ್ಗೆ ತೋರಿಸಲು ನಿರ್ಲಕ್ಷ್ಯ ವಹಿಸಲಾಗು ತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಲಯಗಳಲ್ಲಿ ಸರಿ ಯಾಗಿ ಕೆಲಸಗಳು ನಡೆಯುತ್ತಿಲ್ಲ. ಉನ್ನತ ಪದವಿ ಪಡೆದವರು ಸಹಾಯಕರಾಗಿದ್ದು, ಕೇವಲ ವಿದ್ಯಾ ರ್ಹತೆ ಇಲ್ಲದವರು ಮುಖ್ಯಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಅಂತಹವರನ್ನು ಕೆಲಸದಿಂದ ವಜಾ ಗೊಳಿಸಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತ ನಾಡಿ, ಸರ್ಕಾರದ ಅನುದಾನಗಳನ್ನು ಬಡಜನರಿಗೆ ತಲುಪುವ ಕೆಲಸವನ್ನು ಮಾಡಿ, ಫಲಾನುಭವಿಗಳಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡುವುದರ ಜೊತೆಗೆ ಇಲಾಖೆ ಅಭಿವೃದ್ಧಿಗೆ ಶ್ರಮಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.