ಕೊರೋನಾ ವೈರಸ್ ಭೀತಿ ಹಿನ್ನೆಲೆ: ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ತಪಾಸಣಾ ಕೌಂಟರ್
ಮೈಸೂರು

ಕೊರೋನಾ ವೈರಸ್ ಭೀತಿ ಹಿನ್ನೆಲೆ: ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ತಪಾಸಣಾ ಕೌಂಟರ್

February 4, 2020

ಮೈಸೂರು, ಫೆ.3(ಪಿಎಂ)- ಚೀನಾ ಮೂಲದ ಕೊರೋನಾ ವೈರಸ್ ಭಾರ ತಕ್ಕೂ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ದೇಶ ದಾದ್ಯಂತ ಮುಂಜಾಗ್ರತಾ ಕ್ರಮ ಕೈಗೊಳ್ಳ ಲಾಗುತ್ತಿದೆ. ಅಂತೆಯೇ ಸೋಮವಾರ ದಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ತಪಾಸಣಾ ಕೌಂಟರ್ ಕಾರ್ಯಾರಂಭ ಮಾಡಿತು.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಈಗಾಗಲೇ ನಿಲ್ದಾಣ ಆಡಳಿತ ವರ್ಗ ಹಾಗೂ ಅಪೋಲೋ ಆಸ್ಪತ್ರೆ ಜಂಟಿ ಆಶ್ರಯದಲ್ಲಿ ಕ್ಲಿನಿಕ್ ಕಾರ್ಯಚಟುವಟಿಕೆಯಲ್ಲಿದ್ದು, ಇದೇ ಕ್ಲಿನಿಕ್‍ನಲ್ಲಿ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿ ಯಿಂದ ತಪಾಸಣಾ ಕೌಂಟರ್ ಆರಂಭಿಸ ಲಾಗಿದೆ. ವಿಮಾನಗಳ ನಿರ್ಗಮನ ಹಾಗೂ ಆಗಮನದ ವೇಳೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿಯೋ ಜಿಸಿರುವ ಹಿರಿಯ ಆರೋಗ್ಯ ಸಹಾಯ ಕರು ಹಾಗೂ ಸಿಬ್ಬಂದಿ ಕೌಂಟರ್‍ನಲ್ಲಿದ್ದು ಅಗತ್ಯವಿದ್ದವರಿಗೆ ತಪಾಸಣೆ ನಡೆಸಲಿ ದ್ದಾರೆ. ವಿಮಾನಗಳ ನಿರ್ಗಮನ ಹಾಗೂ ಆಗಮನದ ಸಂದರ್ಭದಲ್ಲಿ ಕೊರೋನಾ ವೈರಸ್ ಅನಾರೋಗ್ಯ ಸಮಸ್ಯೆಯ ಲಕ್ಷಣ ಹೊಂದಿರುವವರು ತಪಾಸಣೆಗೆ ಒಳಗಾಗು ವಂತೆ ನಿಲ್ದಾಣದ ಅಧಿಕಾರಿಗಳು ಪ್ರಕಟಿ ಸುವ ವ್ಯವಸ್ಥೆ ಮಾಡಲಾಗಿದೆ.

ಅಲ್ಲದೆ, ನಿಲ್ದಾಣದಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಪೋಸ್ಟರ್, ಬ್ಯಾನರ್‍ಗಳ ಮೂಲ ಕವೂ ಈ ಬಗ್ಗೆ ಜಾಗೃತಿ ಮೂಡಿಸಲಾಗು ತ್ತಿದೆ. ಈ ಸಂಬಂಧ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಪ್ರಸಾದ್, ನಮ್ಮ ಆರೋಗ್ಯ ಸಹಾಯಕರು ಹಾಗೂ ಸಿಬ್ಬಂದಿ ವಿಮಾನ ನಿಲ್ದಾಣದ ಅಪೋಲೋ ಆಸ್ಪತ್ರೆ ಸಹಯೋಗದಲ್ಲಿ ತಪಾಸಣೆ ನಡೆಸ ಲಿದ್ದಾರೆ. ಶಂಕಿತ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ನಮಗೆ ಮಾಹಿತಿ ನೀಡ ಲಿದ್ದು, ಶೀಘ್ರವಾಗಿ ಮುಂದಿನ ಕ್ರಮ ಕೈಗೊ ಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

Translate »