`ಕಿಸಾನ್ ಸಮ್ಮಾನ್’ನಿಂದ ಅರ್ಹರು ಹೊರಗುಳಿಯದಿರಲಿ; ನವೀನ್‍ರಾಜ್ ಸಿಂಗ್
ಹಾಸನ

`ಕಿಸಾನ್ ಸಮ್ಮಾನ್’ನಿಂದ ಅರ್ಹರು ಹೊರಗುಳಿಯದಿರಲಿ; ನವೀನ್‍ರಾಜ್ ಸಿಂಗ್

February 4, 2020

ಹಾಸನ, ಫೆ.3- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಅರ್ಹ ಫಲಾನುಭವಿಗಳು ಹೊರಗುಳಿಯದಂತೆ ವಿಶೇಷ ಗಮನಹರಿಸುವುದರೊಂದಿಗೆ ಜಿಲ್ಲೆಯಲ್ಲಿ ಯೋಜನೆಯನ್ನು ಸಮರ್ಪಕ ವಾಗಿ ಅನುಷ್ಠಾನಗೊಳಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಮೈಸೂರು ಮಿನರಲ್ಸ್‍ನ ವ್ಯವಸ್ಥಾಪಕ ನಿರ್ದೇಶಕರೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್ ನಿರ್ದೇಶಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಿಸಾನ್ ಸಮ್ಮಾನ್ ಯೋಜನೆಯಡಿ ನಿಗದಿಪಡಿಸಿರುವ ಗುರಿ ಯಂತೆ ಅಂಕಿ-ಅಂಶಗಳನ್ನು ಗ್ರಾಮವಾರು ಮರುಪರಿಶೀಲಿಸುವಂತೆ ಸೂಚಿಸಿದರು.

ಕೃಷಿ ಜಮೀನು ದಾಖಲೆಗಳಿಗೂ ಆಧಾರ್ ಜೋಡಿಸುವುದರಿಂದ ರೈತರ ಬಗ್ಗೆ ಮಾಹಿತಿ ಸ್ಪಷ್ಟವಾಗಿ ಸಿಗಲಿದ್ದು, ಬೆಳೆ ವಿಮೆ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ರೈತರಿಗೆ ಜಾಗೃತಿ ಮೂಡಿಸಿ. ಕೃಷಿ, ತೋಟಗಾರಿಕೆ ಮೂಲಕ ರೈತರ ವೈಯಕ್ತಿಕ ಜಮೀನು ಗಳಲ್ಲಿ ಉದ್ಯೋಗ ಖಾತರಿ ಯೋಜನೆ ಯಡಿ ಉದ್ಯೋಗ ಸೃಷಿಸಿ. ಕೃಷಿ ಹೊಂಡ ಸೇರಿದಂತೆ ಇತರೆ ಜಲಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಡಿಸೆಂಬರ್‍ನಿಂದ ಮೇ ವರೆಗೆ ಕೃಷಿ ಚಟುವಟಿಕೆಗಳು ಕುಂಠಿತವಾಗಿ ರುತ್ತವೆ. ಆ ಅವಧಿಯಲ್ಲಿ ಪರ್ಯಾಯವಾಗಿ ಮೂರು ತಿಂಗಳ ಬೆಳೆಯನ್ನು ರೈತರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು. ಕೃಷಿ ಕಾಲೇಜುಗಳೊಂದಿಗೆ ಈ ಬಗ್ಗೆ ಅಧ್ಯಯನ ನಡೆಸಿ ರೈತರಿಗೆ ನೆರವಾಗಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರು ಹಾಗೂ ಕಾಮಗಾರಿ ಪ್ರಗತಿಗೆ ಗಮನಹರಿಸಿ ಎಂದು ಡಾ.ನವೀನ್‍ರಾಜ್ ಸಿಂಗ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಆರ್.ಗಿರೀಶ್ ಅವರು ಮಾತನಾಡಿ ಫಲಾನುಭವಿ ರೈತರ ನಿಖರ ಸಂಖ್ಯೆ ಗುರು ತಿಸುವಿಕೆ ಸಂಬಂಧಿಸಿದಂತೆ ಭೂಮಿ ಯೋಜನೆಯಡಿ ಇರುವ ದಾಖಲೆಗಳನ್ನು ಬಳಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳ ಕುರಿತು ಜಿಲ್ಲಾ ಕಾರ್ಯದರ್ಶಿಗಳ ಗಮನಕ್ಕೆ ತಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಗಳಾಗಿ ಡಾ.ನವೀನ್ ಭಟ್, ಗಿರೀಶ್ ನಂದನ್, ಹಿಮ್ಸ್ ನಿರ್ದೇಶಕ ಡಾ.ರವಿ ಕುಮಾರ್, ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಧು ಸೂದನ್, ಜಿಪಂ ಮುಖ್ಯ ಯೋಜನಾಧಿ ಕಾರಿ ನಾಗರಾಜ್, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಸವಿತಾ, ಡಿಎಚ್‍ಓ ಡಾ.ಸತೀಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಪರಿ ವೀಕ್ಷಕÀ ಕಾಂತರಾಜು ಇತರರಿದ್ದರು.

Translate »