ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ
ಹಾಸನ

ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ

February 9, 2020

ಹಾಸನ, ಫೆ. 8- ರಾಜ್ಯದಲ್ಲಿ ಈಗಾಗಲೇ ಮಂಜೂರಾಗಿರುವ ಹಾಗೂ ಪ್ರಗತಿಯಲ್ಲಿ ರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೂ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಲೋಕೋಪಯೋಗಿ, ಸಮಾಜ ಕಲ್ಯಾಣ ಸಚಿವರೂ ಆದ ಉಪ ಮುಖ್ಯ ಮಂತ್ರಿ ಗೋವಿಂದ ಕಾರಜೋಳ ಭರವಸೆ ನೀಡಿದರು.

ಹಾಸನದ ಅತಿಥಿಗೃಹದಲ್ಲಿಂದು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾಮಗಾರಿಗಳಿಗೂ ಅನುದಾನ ಕಡಿತ ಮಾಡುವುದಿಲ್ಲ ಎಂದರು. ರಾಜ್ಯದಲ್ಲಿ ಪ್ರವಾಹದಲ್ಲಿ ಲೋಕೋಪ ಯೋಗಿ ಇಲಾಖೆಗೆ ಸೇರಿದ ರಸ್ತೆ, ಕಟ್ಟಡ, ಸೇತುವೆಗಳು ಸೇರಿದಂತೆ ಸುಮಾರು ರೂ. 8 ಸಾವಿರ ಕೋಟಿ ರೂ.ಗೂ ಅಧಿಕ ಆಸ್ತಿ ಗಳು ನಷ್ಟವಾಗಿವೆ. ಅವುಗಳ ದುರಸ್ತಿ, ಮರುನಿರ್ಮಾಣ, ನಿರ್ವಹಣೆ ಕಾರ್ಯವನ್ನು ಸರ್ಕಾರ ಈಗಾ ಗಲೇ ಕೈಗೆತ್ತಿ ಗೊಂಡಿದೆ ಎಂದು ಉಪಮುಖ್ಯಮಂತ್ರಿ ಹೇಳಿದರು.    ಲೋಕೋಪಯೋಗಿ ಇಲಾಖೆ ಮತ್ತು ಇಲಾಖೆಯ ಇನ್ನಿತರ ಸಂಸ್ಥೆಗಳಡಿ ಹಾಸನ ಜಿಲ್ಲೆಗೆ 2019-20ನೇ ಸಾಲಿನಲ್ಲಿ ರಸ್ತೆ ಹಾಗೂ ವಿವಿಧ ಕಾಮಗಾರಿಗಳಿಗೆ 292.72 ಕೋಟಿ ರೂ. ಮಂಜೂರಾಗಿದೆ. ವಿಶೇಷ ಘಟಕ ಯೋಜನೆಯಡಿ 2019-20ನೇ ಸಾಲಿನಲ್ಲಿ 58.897 ಕಿ.ಮೀ. ಉದ್ದದ ಪ.ಜಾ. ಕಾಲೋನಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸ ಲಾಗಿದೆ. 384 ಕಾಮಗಾರಿಗಳಿಗಾಗಿ 2019-20ನೇ ಸಾಲಿಗೆ 6360.67 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿ ದರು. ಈ ಸಂದರ್ಭದಲ್ಲಿ ಶಾಸಕ ಪ್ರೀತಂ ಜೆ.ಗೌಡ, ಜಿಪಂ ಅಧ್ಯಕ್ಷೆÀ ಶ್ವೇತಾ ದೇವರಾಜ್, ಡಿಸಿ ಆರ್.ಗಿರೀಶ್, ಜಿಪಂ ಸಿಇಓ ಬಿ.ಎ. ಪರಮೇಶ್ ಮತ್ತಿತರರಿದ್ದರು.

Translate »