ತಾಯಿಯಿಂದ ಬೇರ್ಪಟ್ಟ ಮರಿಯಾನೆ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ
ಮೈಸೂರು ಗ್ರಾಮಾಂತರ

ತಾಯಿಯಿಂದ ಬೇರ್ಪಟ್ಟ ಮರಿಯಾನೆ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ

February 9, 2020

ಹನಗೋಡು, ಫೆ. 8(ಮಹೇಶ)-ನಾಲ್ಕು ದಿನಗಳ ಹಿಂದೆ ಕಾಡಾನೆ ಹಿಂಡಿನಿಂದ ಬೇರ್ಪಟ್ಟು ತಾಯಿಗಾಗಿ ಪರಿತಪಿಸುತ್ತಿರುವ ಸುಮಾರು 20 ದಿನದ ಹೆಣ್ಣಾನೆ ಮರಿಯನ್ನು ಮತ್ತಿಗೋಡು ಅರಣ್ಯ ಆನೆ ಶಿಬಿರಕ್ಕೆ ಸ್ಥಳಾಂತರಿಸಲಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ಅರಣ್ಯ ವಲಯದ ಭರತ ವಾಡಿ ಗ್ರಾಮದತ್ತ ಮೇವು ಅರಸಿ ಬಂದಿದ್ದ ಕಾಡಾನೆ ಹಿಂಡು ಮತ್ತೆ ಕಾಡು ಸೇರುವ ಬರದದಲ್ಲಿ 20 ದಿನಗಳ ಹೆಣ್ಣಾನೆ ಮರಿ ತಾಯಿಂದ ಬೇರ್ಪಟ್ಟಿತ್ತು. ಇದನ್ನು ಅರಿತ ಭರತವಾಡಿ ಗ್ರಾಮಸ್ಥರು ಮರಿಯಾನೆಯನ್ನು ಉಪಚರಿಸಿ, ವೀರನ ಹೊಸಹಳ್ಳಿಯ ವಲಯ ಅರಣ್ಯಾಧಿಕಾರಿ ರವೀಂದ್ರ ಅವರ ವಶಕ್ಕೆ ಒಪ್ಪಿಸಿದ್ದರು. ಬಳಿಕ ಅರಣ್ಯ ವೈದ್ಯಾ ಧಿಕಾರಿ ಮುಜೀಬ್‍ರಿಂದ ಚಿಕಿತ್ಸೆ ಕೊಡಿಸ ಲಾಗಿತ್ತು. ಅಲ್ಲದೆ ಮರಿಯಾನೆಯನ್ನು ಅದರ ತಾಯಾನೆಯೊಟ್ಟಿಗೆ ಸೇರಿಸಲು ನಾಲ್ಕು ದಿನಗಳಿಂದ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸದ್ಯ ಬೇರೆ ದಾರಿ ಇಲ್ಲದೆ ಶನಿವಾರ ಸಂಜೆ ಅರಣ್ಯಾಧಿಕಾರಿ ರವೀಂದ್ರ ನೇತೃತ್ವದಲ್ಲಿ ಮತ್ತಿಗೋಡು ಅರಣ್ಯ ಆನೆ ಶಿಬಿರಕ್ಕೆ ಮರಿಯನ್ನು ಸ್ಥಳಾಂತರಿಸಲಾಯಿತು. ಮರಿಯಾನೆಗೆ ಅಗತ್ಯ ಹಾಲು ಸೇರಿ ದಂತೆ ಪೌಷ್ಟಿಕ ಆಹಾರ ನೀಡಿ, ಆರೈಕೆ ಮಾಡಲಾಗುತ್ತಿದೆ.

Translate »