ಹನಗೋಡು, ಫೆ. 8-ಸಾಲ ಬಾಧೆ ಯಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಹುಣಸೂರು ತಾಲೂ ಕಿನ ನೇರಳಕುಪ್ಪೆ ಗ್ರಾಮ ದಲ್ಲಿ ಶನಿವಾರ ನಡೆದಿದೆ. ಹೋಬಳಿಯ ನೇರಳಕುಪ್ಪೆ ನಿವಾಸಿ ಜಯರಾಮ(40) ಮೃತ ರೈತ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ವಿವರ: ಜಯರಾಮ ತಮ್ಮ 6 ಎಕರೆ ಜಮೀನಿನಲ್ಲಿ ಬೇಸಾಯಕ್ಕಾಗಿ ಹುಣಸೂರು ಎಂಡಿಸಿಸಿ ಬ್ಯಾಂಕ್‍ನಲ್ಲಿ 2 ಲಕ್ಷ ಹಾಗೂ ಎಲ್‍ಅಂಡ್‍ಟಿ ಫೈನಾನ್ಸ್‍ನಿಂದ ಟ್ರ್ಯಾಕ್ಟರ್ ಖರೀದಿಗೆ 7 ಲಕ್ಷ ರೂ. ಸೇರಿದಂತೆ ವಿವಿಧೆಡೆ ಮಾಡಿದ್ದ 3 ಲಕ್ಷ ರೂ. ಕೈಸಾಲ ಮಾಡಿ ಕೊಂಡಿದ್ದರು. ಅತಿವೃಷ್ಟಿಯಿಂದ ಬೆಳೆ ನಷ್ಟ ಹೊಂದಿದ್ದರು. ಅಲ್ಲದೆ ನಾಲ್ಕು ತಿಂಗಳ ಹಿಂದಷ್ಟೇ ಪತ್ನಿ ಭಾಗ್ಯಮ್ಮ ಅನಾರೋಗ್ಯ ದಿಂದ ಮೃತಪಟ್ಟಿದ್ದರು. ಇದರಿಂದ ಮನನೊಂದು ಶನಿವಾರ ತೋಟದ ಮನೆ ಯಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿ ದ್ದರು. ಹನಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.