ತಿ.ನರಸೀಪುರ, ಫೆ. 8(ಎಸ್‍ಕೆ)-ದಾಸೋಹ ದೊಂದಿಗೆ ಶಿಕ್ಷಣವನ್ನೂ ನೀಡುವ ಮಠ-ಮಾನ್ಯಗಳು ದೇಶಭಕ್ತಿ ಹಾಗೂ ಸಂಸ್ಕಾರ ಯುತ ಮಕ್ಕಳನ್ನು ದೇಶಕ್ಕೆ ಬಳುವಳಿಯಾಗಿ ನೀಡುತ್ತಿವೆ ಎಂದು ಮುಜರಾಯಿ, ಮೀನು ಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶಂಸಿಸಿದರು.
ತಾಲೂಕಿನ ಮುಡುಕುತೊರೆಯಲ್ಲಿರುವ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.
ಧಾರ್ಮಿಕ ಕೇಂದ್ರಗಳಾಗಿರುವ ಮಠ ಗಳು ಅಕ್ಷರ ದಾಸೋಹದ ಮೂಲಕ ಜ್ಞಾನ ಹಾಗೂ ಸಂಸ್ಕಾರವಂತ ಪ್ರಜೆ ಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತುಮಕೂರಿನ ಸಿದ್ಧಗಂಗಾ ಮಠ ಹತ್ತು ಸಾವಿರಕ್ಕೂ ಹೆಚ್ಚು ಮಕ್ಕ ಳಿಗೆ ಶಿಕ್ಷಣ ನೀಡುವ ಮೂಲಕ ವಿಶ್ವದ ಗಮನ ಸೆಳೆದಿದ್ದರೆ, ಸುತ್ತೂರು ಮಠ ಧಾರ್ಮಿಕ ಹಾಗೂ ಶೈಕ್ಷಣಿಕ ಪರಂಪರೆ ಎತ್ತಿ ಹಿಡಿಯುವ ಕಾರ್ಯವನ್ನು ನಿರಂತರ ವಾಗಿ ಮಾಡುತ್ತಿದೆ. ಶಿಕ್ಷಣ ವಸತಿ ಹಾಗೂ ಉದ್ಯೋಗಕ್ಕೆ ಬೆಂಬಲವಾಗಿ ನಿಲ್ಲುವ ಮೂಲಕ ಮಠಗಳು ಸರ್ಕಾರದ ಕಾರ್ಯ ಭಾರವನ್ನು ತಗ್ಗಿಸಿವೆ ಎಂದು ಬಣ್ಣಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಅಶ್ವಿನ್‍ಕುಮಾರ್ ಮಾತನಾಡಿದರು. ಸಭೆಯ ಸಾನಿಧ್ಯ ವಹಿಸಿದ್ದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಬೆಳಗಾವಿ ಅಥಣಿಯ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು.
ಲೋಕಾಯುಕ್ತ ಪೆÇಲೀಸ್ ಉಪ ಅಧೀಕ್ಷಕಿ ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ ಉಪ ನ್ಯಾಸ ನೀಡಿದರು. ಚಿದಾನಂದ ಸ್ವಾಮೀಜಿ, ಮಹದೇವಸ್ವಾಮಿ ಸ್ವಾಮೀಜಿ, ಉಪ ವಿಭಾಗಾಧಿಕಾರಿ ಡಾ. ಎನ್.ಸಿ. ವೆಂಕಟ ರಾಜು, ಲೋಕೋಪಯೋಗಿ ಅಧೀಕ್ಷಕ ಅಭಿಯಂತರ ಬಿ.ಆರ್.ವೀರಭದ್ರಯ್ಯ, ವೀರಶೈವ ಮಹಾಸಭಾ ಅಧ್ಯಕ್ಷ ತೊಟ್ಟ ವಾಡಿ ಮಹದೇವಸ್ವಾಮಿ, ಹೋಟೆಲ್ ರಾಜಣ್ಣ (ಲಿಂಗರಾಜು), ಜೆಎಸ್‍ಎಸ್ ಸಹಾಯಕ ಪ್ರಾಧ್ಯಾಪಕ ಡಾ. ಬಿ.ಎಸ್. ಸುದೀಪ್, ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಆರ್.ಎಸ್.ಕುಮಾರ್, ಸಹ ಪ್ರಾಧ್ಯಾಪಕ ಪೆÇ್ರ.ಪಿ.ಎಂ. ಮಹದೇವ ಸ್ವಾಮಿ, ಶಿಕ್ಷಕ ಎಂ.ಬಸವರಾಜು, ಸಭಾ ಭವನ ಮುಖ್ಯಸ್ಥ ಜಿ.ಎಲ್. ಯೋಗೇಶ್ ಹಾಗೂ ಇನ್ನಿತರರಿದ್ದರು.