ಮೈಸೂರು: ಮೈಸೂರಿನ ಪಡುವಾರಹಳ್ಳಿಯಲ್ಲಿ ಎರಡು ಮುಖ್ಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.
ಟೆಂಪಲ್ ರಸ್ತೆಯಿಂದ ಹುಣಸೂರು ಹೆದ್ದಾರಿಯ ಸಿಗ್ನಲ್ ಲೈಟ್ ಸರ್ಕಲ್‍ವ ರೆಗೆ 35 ಲಕ್ಷ ರೂ. ವೆಚ್ಚದಲ್ಲಿ ಪಡುವಾರ ಹಳ್ಳಿ 6ನೇ ಮುಖ್ಯ ರಸ್ತೆಗೆ ಮೆಟ್ಲಿಂಗ್ ಮಾಡಿ ಡಾಂಬರೀಕರಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಅದೇ ರೀತಿ ವಾಲ್ಮೀಕಿ ರಸ್ತೆಯಿಂದ ಮಾತೃ ಮಂಡಲಿ ಸರ್ಕಲ್‍ವರೆಗಿನ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಶಾಸಕರು ಚಾಲನೆ ನೀಡಿದರು.
ಸಾವಿರಾರು ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಾಲ್ಮೀಕಿ ರಸ್ತೆಯಲ್ಲಿ ರುವ ಮಹಾರಾಣಿ ಸರ್ಕಾರಿ ವಾಣಿಜ್ಯ ಮಹಿಳಾ ಕಾಲೇಜು ಎದುರು ನಿರ್ಮಿಸ ಲುದ್ದೇಶಿಸಿರುವ 10 ಲಕ್ಷ ರೂ. ವೆಚ್ಚದ ಹೈಟೆಕ್ ಬಸ್ ತಂಗುದಾಣ ಕಾಮ ಗಾರಿಗೂ ಗುದ್ದಲಿಪೂಜೆ ನೆರವೇರಿಸಿದರು.
ಕಾರ್ಪೋರೇಟರ್‍ಗಳಾದ ನಮ್ರತಾ ರಮೇಶ್, ಭಾಗ್ಯ ಮಾದೇಶ, ಪಾಲಿಕೆ ವಲಯ ಕಚೇರಿ ಅಭಿವೃದ್ಧಿ ಅಧಿಕಾರಿ ಸುನೀಲ್, ಇಂಜಿನಿಯರ್ ಶಿವಲಿಂಗಪ್ಪ, ಮುಖಂಡರಾದ ಸಂದೇಶ್‍ಸ್ವಾಮಿ, ಸೋಮ ಶೇಖರ್, ಚಿಕ್ಕವೆಂಕಟ, ಗೋಪಾಲ್, ವೇಣು, ಭೈರಪ್ಪ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.
ನಾಳೆ (ಫೆ. 8) ಬೆಳಿಗ್ಗೆ 10.30 ಗಂಟೆಗೆ ಜಯಲಕ್ಷ್ಮಿಪುರಂನ ರಾಘವೇಂದ್ರ ಮಠದ ಬಳಿ ರಸ್ತೆ ಕಾಮಗಾರಿ, ಮಹಾಜನ ಕಾಲೇಜು ಬಳಿಯ ಉದ್ಯಾನವನ ಅಭಿವೃದ್ಧಿ ಕಾಮ ಗಾರಿಗಳಿಗೂ ಶಾಸಕರು ಗುದ್ದಲಿಪೂಜೆ ನೆರ ವೇರಿಸುವರು ಎಂದು ಅವರ ಆಪ್ತ ಸಹಾ ಯಕ ಎಂ.ಎಸ್.ಪ್ರವೀಣ್‍ಕುಮಾರ್ ತಿಳಿಸಿದ್ದಾರೆ.