ಮಂಜುನಾಥಪುರದಲ್ಲಿ ಕಾಮಗಾರಿಗೆ ಶಾಸಕ ನಾಗೇಂದ್ರ ಗುದ್ದಲಿಪೂಜೆ
ಮೈಸೂರು

ಮಂಜುನಾಥಪುರದಲ್ಲಿ ಕಾಮಗಾರಿಗೆ ಶಾಸಕ ನಾಗೇಂದ್ರ ಗುದ್ದಲಿಪೂಜೆ

June 13, 2020

ಮೈಸೂರು, ಜೂ.12(ಆರ್‍ಕೆಬಿ)- ಮೈಸೂರು ಮಹಾನಗರ ಪಾಲಿಕೆಯ 18ನೇ ವಾರ್ಡ್ ವ್ಯಾಪ್ತಿಯ ಮಂಜುನಾಥಪುರದ ಚಾಮುಂಡೇಶ್ವರಿ ದೇವಸ್ಥಾನದ ಬಳಿ 54 ಲಕ್ಷ ರೂ. ಅಂದಾಜಿನ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು.

ಮಂಜುನಾಥಪುರದ ಮುಖ್ಯರಸ್ತೆ ಅಭಿ ವೃದ್ಧಿ (15 ಲಕ್ಷ ರೂ.), ಚರಂಡಿ ನಿರ್ಮಾಣ (20 ಲಕ್ಷ ರೂ.), ನಾಯಕರ ಬೀದಿಯ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶೀಟ್ ಅಳವಡಿಕೆ(2 ಲಕ್ಷ ರೂ.), ದೇವಸ್ಥಾನ ರಸ್ತೆ ಮತ್ತು ಯಾದವಗಿರಿಯಲ್ಲಿ ಕುಸಿದಿ ರುವ ಒಳಚರಂಡಿ ಅಭಿವೃದ್ಧಿ (17 ಲಕ್ಷ ರೂ.) ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಪಾಲಿಕೆ ಸದಸ್ಯ ಬಿ.ವಿ.ರವೀಂದ್ರ, ಬಿಜೆಪಿ ಚಾಮರಾಜ ಕ್ಷೇತ್ರ ಅಧ್ಯಕ್ಷ ಸೋಮಶೇಖರ ರಾಜು, ಮಹಿಳಾ ಮೋರ್ಚಾ ನಗರ ಘಟಕ ಅಧ್ಯಕ್ಷೆ ಹೇಮಾ ನಂದೀಶ್, ಪಾಲಿಕೆ ಮಾಜಿ ಸದಸ್ಯ ಗುರುವಿನಾಯಕ, ಮುಖಂಡರಾದ ಪುನೀತ್, ರಮೇಶ್, ವೆಂಕಟರಾಮು, ತನುಜಾ, ದಿನೇಶ್‍ಗೌಡ, ಷಣ್ಮುಗಂ, ಕಿರಣ್ ಬೊಳಾರೆ, ಹರೀಶ್, ಕವಿತಾ ಇನ್ನಿತರರಿದ್ದರು.

Translate »