ಜೂ.16ರಂದು ಜನ ಸಂಪರ್ಕ ಸಭೆ
ಮೈಸೂರು

ಜೂ.16ರಂದು ಜನ ಸಂಪರ್ಕ ಸಭೆ

June 13, 2020

ಮೈಸೂರು, ಜೂ.12- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯ ಮಿತದ ಹೂಟಗಳ್ಳಿ ಉಪ-ವಿಭಾಗದ ಸಹಾ ಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಜೂ.16ರಂದು ಬೆಳಗ್ಗೆ 11 ಗಂಟೆಗೆ ಅಧೀಕ್ಷಕ ಇಂಜಿನಿಯರ್, ಕಾರ್ಯ ನಿರ್ವಾಹಕ ಇಂಜಿನಿಯರ್ ಹಾಗೂ ವಿ.ವಿ. ಮೊಹಲ್ಲಾ ವಿಭಾಗ ಇವರ ಅಧ್ಯಕ್ಷತೆ ಯಲ್ಲಿ ಗ್ರಾಹಕರ ಕುಂದು ಕೊರತೆಗಳ ಬಗ್ಗೆ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ.

ಅಂದೇ ಮಧ್ಯಾಹ್ನ 3 ಗಂಟೆಗೆ ವಿ.ವಿ. ಮೊಹಲ್ಲಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಯಲ್ಲಿ ವಿ.ವಿ.ಮೊಹಲ್ಲಾ ಉಪ-ವಿಭಾಗ ವ್ಯಾಪ್ತಿಯಲ್ಲಿನ ಗ್ರಾಹಕರ ಕುಂದು ಕೊರತೆ ಗಳ ಬಗ್ಗೆ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ. ಈ ವ್ಯಾಪ್ತಿಯ ಗ್ರಾಹ ಕರು ಸಭೆಯಲ್ಲಿ ಭಾಗವಹಿಸಿ, ವಿದ್ಯುತ್ ಸಮಸ್ಯೆ ಕುರಿತು ದೂರುಗಳು ಇದ್ದಲ್ಲಿ ಅರ್ಜಿ ನೀಡುವ ಮೂಲಕ ಬಗೆಹರಿಸಿ ಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

Translate »