ಕಂದಾಯ ವಸೂಲಾತಿ ಜಾಥಾ
ಮೈಸೂರು

ಕಂದಾಯ ವಸೂಲಾತಿ ಜಾಥಾ

May 31, 2018

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಕಂದಾಯ ವಸೂಲಾತಿಗಾಗಿ ಜಾಥಾ ಹಮ್ಮಿಕೊಳ್ಳಲಾಗಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಹಕರಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಾಕಿ ಕಂದಾಯವನ್ನು ಪಾವತಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧೀಕ್ಷಕ ಇಂಜಿನಿಯರ್ ಕೋರಿದ್ದಾರೆ. ಯಾವುದೇ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ದೂರುಗಳು ಇದ್ದಲ್ಲಿ ಶುಲ್ಕ ರಹಿತ ದೂರವಾಣ ಸಂಖ್ಯೆ 1912ಗೆ ಕರೆ ಮಾಡುವುದು. ಗಾಳಿ ಮಳೆ ಇರುವ ಸಂದರ್ಭದಲ್ಲಿ ವಿದ್ಯುತ್ ಅಡಚಣೆಗಳಾದಲ್ಲಿ ಗ್ರಾಹಕರು ಸಂಯಮದಿಂದ ಸಹಕರಿಸುವಂತೆ ಹಾಗೂ ಯಾವುದೇ ಅಪಾಯಕಾರಿ ವಿದ್ಯುತ್ ಅವಘಡಗಳು ಸಂಭವಿಸಿದ್ದಲ್ಲಿ ಕೂಡಲೇ ಶುಲ್ಕ ರಹಿತ ದೂರವಾಣ ಸಂಖ್ಯೆ 1912 ಗೆ ಕರೆ ಮಾಡುವುದು. ಯಾವುದೇ ವಿದ್ಯುತ್ ಕಳ್ಳತನದ ಪ್ರಕರಣಗಳು ಕಂಡುಬಂದಲ್ಲಿ ಜಾಗೃತದಳ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಮೊಬೈಲ್ ಸಂಖ್ಯೆ 9448994737 ಅಥವಾ ದೂರವಾಣ ಸಂಖ್ಯೆ 0821-2448742ಗೆ ಕರೆ ಮಾಡುವುದು ಅಥವಾ ಎಸ್‍ಎಂಎಸ್ ಕಳುಹಿಸಿ. ಕರೆ ಮಾಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗು ವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »