ರಂಜಾನ್: ನೂರಾರು ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ನಾಗೇಂದ್ರ
ಮೈಸೂರು

ರಂಜಾನ್: ನೂರಾರು ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ನಾಗೇಂದ್ರ

May 24, 2020

ಮೈಸೂರು: ರಂಜಾನ್ ಹಬ್ಬದಂಗವಾಗಿ ಮುಸ್ಲಿಂ ಸಮುದಾಯದ 600ಕ್ಕೂ ಹೆಚ್ಚು ಕುಟುಂಬಗಳಿಗೆ ಅಶೋಕ ರಸ್ತೆಯಲ್ಲಿನ ಸರ್ಕಾರಿ ನಿಜಾಮಿಯ ಬಾಡಿಗಾರ್ಡ್ ಪ್ರೌಢಶಾಲೆ ಆವರಣದಲ್ಲಿ ಶಾಸಕ ಎಲ್.ನಾಗೇಂದ್ರ ದಿನಸಿ ಕಿಟ್ ವಿತರಿಸಿದರು.

ಬಳಿಕ ಮಾತನಾಡಿದ ಶಾಸಕರು, ರಂಜಾನ್ ಪ್ರಯುಕ್ತ ಹಾಗೂ ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿರುವ ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಇನ್ನೆರಡು ದಿನದಲ್ಲಿ ರಂಜಾನ್ ಹಬ್ಬವಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಹಬ್ಬ ಆಚರಿಸಿ ಎಂದರಲ್ಲದೆ, ಹಬ್ಬದ ಶುಭಾಶಯ ಕೋರಿದರು. ಮೇಯರ್ ತಸ್ನಿಂ ಮಾತನಾಡಿ, ವಾರ್ಡ್ 25 ಮತ್ತು 26ರಲ್ಲಿ ಕಷ್ಟದಲ್ಲಿದ್ದವರನ್ನು ಗುರುತಿಸಿ ದಿನಸಿ ಕಿಟ್ ನೀಡಲಾಗು ತ್ತಿದೆ. ಸರ್ಕಾರಿ ನಿಜಾಮಿಯ ಬಾಡಿಗಾರ್ಡ್ ಪ್ರೌಢಶಾಲೆ ಅಭಿವೃದ್ಧಿಗೆ ಶಾಸಕರ ನಿಧಿಯಿಂದ 25 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು. ಪಾಲಿಕೆ ಸದಸ್ಯ ರಂಗಸ್ವಾಮಿ, ಮಾಜಿ ಸದಸ್ಯ ಬಾಬು, ಮುಖಂಡರಾದ ಸೋಮಶೇಖರ ರಾಜು, ಹರ್ಷ, ಕುಮಾರಗೌಡ, ಪುನೀತ್, ರಮೇಶ್, ರಫೀಕ್, ತನ್ವೀರ್, ಖಲೀಲ್, ದಾಸ, ಕೇಬಲ್ ವಿಜಿ ಮತ್ತಿತರರಿದ್ದರು

Translate »