ಮೈಸೂರು, ಏ.20(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ ದಾಖಲಾಗಿರುವ ಒಟ್ಟು ಕೋವಿಡ್ ಪ್ರಕರಣಗಳು, ಪ್ರಸಕ್ತ ತಿಂಗಳ 20 ದಿನದಲ್ಲಿ ಪತ್ತೆಯಾಗಿವೆ. ಅಲ್ಲದೆ ಸಾವಿನ ಸಂಖ್ಯೆಯಲ್ಲೂ ಭಾರೀ ಹೆಚ್ಚಳವಾಗಿರುವುದು ಆತಂಕಕಾರಿ ಸಂಗತಿಯಾಗಿದೆ.
ಮಂಗಳವಾರ 699 ಜನರಿಗೆ ಕೊರೊನಾ ದೃಢಪಟ್ಟಿದ್ದು, ನಾಲ್ವರು ಸೋಂಕಿತರು ಮೃತಪಟ್ಟಿ ದ್ದರು. ಇದನ್ನೊಳಗೊಂಡಂತೆ 20 ದಿನಗಳಲ್ಲಿ 7,208 ಪಾಸಿಟಿವ್ ಹಾಗೂ 111 ಸಾವು ಪ್ರಕರಣ ದಾಖ ಲಾಗಿವೆ. ಕಳೆದ ಮಾರ್ಚ್ ತಿಂಗಳಲ್ಲಿ 1,713 ಸೋಂಕು ಹಾಗೂ 24 ಸಾವು, ಫೆಬ್ರವರಿಯಲ್ಲಿ 662 ಸೋಂಕು ಹಾಗೂ 4 ಸಾವು, ಜನವರಿಯಲ್ಲಿ 1041 ಸೋಂಕು ಹಾಗೂ 11 ಸಾವು ಪ್ರಕರಣ ವರದಿಯಾಗಿತ್ತು. ಹೀಗೆ 2020ರ ಆಗಸ್ಟ್‍ನಿಂದ ಕಳೆದ ಮಾರ್ಚ್‍ವರೆಗೆ ಒಟ್ಟು 8,126 ಪಾಸಿಟಿವ್ ಹಾಗೂ 96 ಸಾವು ಪ್ರಕರಣ ದಾಖಲಾಗಿತ್ತು. ಸೋಂಕಿನ ತೀವ್ರತೆ ಗಮನಿ ಸಿದರೆ ಮುಂದಿನ 10 ದಿನಗಳಲ್ಲಿ ಸೋಂಕಿತರು ಹಾಗೂ ಸಾವಿನ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 63,018 ಜನರಿಗೆ ಕೊರೊನಾ ಬಾಧಿಸಿದ್ದು, ಇವರಲ್ಲಿ 57,745 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,126ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ 4,147ಕ್ಕೆ ಏರಿಕೆಯಾಗಿದೆ.
ತಾಲೂಕುವಾರು ಪ್ರಕರಣ: ಮಂಗಳವಾರ ಮೈಸೂರು ನಗರ ದಲ್ಲಿ 527, ಮೈಸೂರು ತಾಲೂಕಿನಲ್ಲಿ 52, ಹುಣಸೂರು 38, ಕೆ.ಆರ್.ನಗರ 23, ನಂಜನಗೂಡು 21, ತಿ.ನರಸೀಪುರ 15, ಪಿರಿಯಾಪಟ್ಟಣ 14, ಹೆಚ್.ಡಿ.ಕೋಟೆ ತಾಲೂಕಿನಲ್ಲಿ 9 ಜನರಿಗೆ ಕೊರೊನಾ ದೃಢಪಟ್ಟಿದೆ. ಇಂದು ಜಿಲ್ಲೆಯಲ್ಲಿ 16,458 ಜನ ಕೋವಿಡ್ ಲಸಿಕೆ ಪಡೆದಿದ್ದು, ಇಲ್ಲಿಯವರೆಗೆ ಒಟ್ಟು 3,39,246 ಡೋಸೆಜ್ ಲಸಿಕೆ ನೀಡಲಾಗಿದೆ ಎಂದು ಬುಲೆಟಿನ್‍ನಲ್ಲಿ ತಿಳಿಸಲಾಗಿದೆ.
21 ಸಾವಿರ ಪ್ರಕರಣ: ಮೈಸೂರು 699, ಬಾಗಲ ಕೋಟೆ 125, ಬಳ್ಳಾರಿ 406, ಬೆಳಗಾವಿ 186, ಬೆಂಗ ಳೂರು ಗ್ರಾಮಾಂತರ 513, ಬೆಂಗಳೂರು ನಗರ 13782, ಬೀದರ್ 151, ಚಾಮರಾಜನಗರ 99, ಚಿಕ್ಕಬಳ್ಳಾಪುರ 217, ಚಿಕ್ಕಮಗಳೂರು 115, ಚಿತ್ರದುರ್ಗ 121, ದಕ್ಷಿಣ ಕನ್ನಡ 482, ದಾವಣಗೆರೆ 136, ಧಾರವಾಡ 288, ಗದಗ 73, ಹಾಸನ 410, ಹಾವೇರಿ 37, ಕಲಬುರಗಿ 818, ಕೊಡಗು 65, ಕೋಲಾರ 284, ಕೊಪ್ಪಳ 103, ಮಂಡ್ಯ 413, ರಾಯಚೂರು 243, ರಾಮನಗರ 114, ಶಿವಮೊಗ್ಗ 202, ತುಮಕೂರು 1055, ಉಡುಪಿ 109, ಉತ್ತರಕನ್ನಡ 106, ವಿಜಯಪುರ 358 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 84 ಸೇರಿ ರಾಜ್ಯದಲ್ಲಿ ಮಂಗಳವಾರ 21,794 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕು ಬಾಧಿತರ ಸಂಖ್ಯೆ 11,98,644ಕ್ಕೆ ಏರಿಕೆಯಾಗಿದೆ. ಇಂದು ಗುಣಮುಖ ರಾದ 4571 ಮಂದಿ ಸೇರಿ ಇಲ್ಲಿಯವರೆಗೆ ಒಟ್ಟು 10,25,821 ಸೋಂಕಿತರು ಗುಣಮುಖವಾಗಿದ್ದಾರೆ. ಮತ್ತೆ ರಾಜ್ಯದಲ್ಲಿ 149 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 13,646ಕ್ಕೆ ಹೆಚ್ಚಿದೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ 1,59,158 ಏರಿಕೆಯಾಗಿದೆ.